ಲವಂಗದ ಔಷಧಿ ಗುಣಗಳು
ಲವಂಗವು ಭಾರತದ ಪ್ರತಿಯೊಂದು ಅಡಿಗೆಯ ಮನೆಯಲ್ಲಿಯೂ ಸಿಗುವ ಒಂದು ಮಸಾಲಾ ಪದಾರ್ಥವಾಗಿದೆ. ಲವಂಗಗಳು ಇಂಡೋನೇಷಿಯ ದ್ವೀಪದಲ್ಲಿ ಮೂಲತಃ ಕಂಡುಬಂದಿದ್ದಾಗಿವೆ. ಇವುಗಳು ಮರದಲ್ಲಿ ಬಿಡುವ ಹೂವಿನ ಮೊಗ್ಗುಗಳಾಗಿವೆ ಮತ್ತು ಇದರ ವೈಜ್ಞಾನಿಕ ಹೆಸರು ಸಿಜಿಜಿಎಂ ಅರುಮ್ಯಾಟಿಕಮ್. ವಿಜ್ಞಾನದಲ್ಲಿ ಅರೋಮಾ ಎಂದರೆ ವಾಸನೆ ಎಂದರ್ಥ. ಇದರ ಹೆಸರೇ ಸೂಚಿಸುವಂತೆ ಸುವಾಸನಾಭರಿತವಾಗಿರುವ ಮಸಾಲ ಪದಾರ್ಥವೇ ಲವಂಗ. ಇದರ ಸುಗಂಧ ಮತ್ತು ರುಚಿಯಿಂದ ಯಾವ ಅಡುಗೆಯನ್ನಾದರೂ ರುಚಿಕರವನ್ನಾಗಿಸುವ ಸಾಮರ್ಥ್ಯ ಲವಂಗಕ್ಕಿದೆ. ಭಾರತದಲ್ಲಿ ತಯಾರಿಸಲ್ಪಡುವ ಅತಿ ಹೆಚ್ಚು ಆಹಾರ ಪದಾರ್ಥಗಳ ಮುಖ್ಯ ಭಾಗಗಳಲ್ಲೊಂದು ಈ …