ಟೊಮೇಟೊ ದ ಔಷಧಿ ಗುಣಗಳು

Share this with your friends...

ನಮ್ಮ ದಿನನಿತ್ಯ ಜೀವನದಲ್ಲಿ ಅತಿಹೆಚ್ಚು ಅಗತ್ಯ ಮತ್ತು ಅನಿವಾರ್ಯವಾಗಿ ಉಪಯೋಗಿಸುವ ತರಕಾರಿ ಅಂದರೆ ನಮಗೆಲ್ಲ ಚಿರಪರಿಚಿತ ಟೊಮ್ಯಾಟೋ. ಇದು ಸೋಲನೇಸಿ (ಸೊಲ್ಯಾನಮ್  ಲೈಕೋಪಾರ್ಸಿಕಂ) ಕುಟುಂಬಕ್ಕೆ ಸೇರಿರುವ ಸಸ್ಯವಾಗಿರುತ್ತದೆ. ಇದು ಅಲ್ಪಾಯುಶಿ ಸಸ್ಯವಾದರೂ, ಇದರ ಬಳಕೆ ನಿತ್ಯ ಜೀವನದಲ್ಲಿ ಅಗತ್ಯವಾಗಿದೆ. ಇದು ತೆಳುವಾದ ಕಾಂಡ ಹೊಂದಿದ್ದು ಸುಮಾರು ಒಂದೆರಡು ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಟೋಮ್ಯಾಟೋ  ನಮ್ಮ ದಿನನಿತ್ಯ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ, ಮಾಡುವ ಪ್ರತಿ ಅಡುಗೆಗೂ ಇದರ ಅಗತ್ಯವಿದೆ ಕಾರಣ ಇದು ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಅಗತ್ಯವಾಗಿದೆ. ಇದು ಜನರಿಗೆ ಒಂದುರೀತಿಯ ಮೆಚ್ಚಿನ ನೆಚ್ಚಿನ ತರಕಾರಿ ಎಂದು ಹೇಳಿದರೆ ತಪ್ಪಾಗಲಾರದು. ಹೀಗೆ ಈ ಟೊಮ್ಯಾಟೋ ನಮಗೆ ತುಂಬಾ ಉಪಕಾರಿಯಾಗಿದೆ.

ಕೊಬ್ಬು ಕರಗಿಸಲು ಟೊಮೇಟೊ ಸಹಕರಿಯಾಗಿದೆ

ಇತ್ತೀಚಿನ ದಿನಗಳಲ್ಲಿ ಬಳಸುತ್ತಿರುವ ಆಹಾರ ಪದ್ದತಿಯ ಪರಿಣಾಮವಾಗಿ ಹೆಚ್ಚಿನ ಜನರು ತೂಕ ಮತ್ತು ದೇಹದಲ್ಲಿ ಕೊಬ್ಬನ್ನು  ಹೊಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ರೀತಿಯ ಸಮಸ್ಯೆ ನಿವಾರಣೆಗೆ ಟೊಮ್ಯಾಟೋ ಸೇವನೆಯು ಉತ್ತಮವಾಗಿದೆ. ಇದು ನಮ್ಮ ದೇಹದಲ್ಲಿ ಅಮೈನೋ ಆಮ್ಲದ ಪ್ರಮಾಣವನ್ನು ಹೆಚ್ಚಿಸಿ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂದರೆ ಇದು ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧಿಕರಿಸಿ ರಕ್ತ ಸಂಚಾರಕ್ಕೆ ಸಹಕಾರಿಯಾಗಿದೆ. ಇದರಿಂದ ಹೃದಯದ ಆರೋಗ್ಯವು ಸುಧಾರಿಸುತ್ತಲ್ಲದೆ ಉತ್ತಮ ಆರೋಗ್ಯ ಲಭಿಸುತ್ತದೆ.

ಟೊಮೇಟೊ ರೋಗ ನಿರೋಧಕ  ಶಕ್ತಿ ಹೆಚ್ಚಿಸುತ್ತದೆ

ಈಗಿನ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಕೆಲವು ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇದು ಆಶ್ಚರ್ಯ ಅನ್ನಿಸಿದರೂ ಸತ್ಯವಾಗಿದೆ. ಆದುದರಿಂದ ನಾವು ನಮ್ಮ ಆರೋಗ್ಯ ಸುಧಾರಿಸಿಕೊಂಡು ಹೆಚ್ಚಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಟೊಮ್ಯಾಟೋ ಸೇವನೆಯು ನಮಗೆ ರೋಗನಿರೋಧಕ ಶಕ್ತಿಹೆಚ್ಚಿಸಿ ಉತ್ತಮ ಆರೋಗ್ಯ ನೀಡಲು ಸಹಕಾರಿಯಾಗಿದೆ. ಟೊಮ್ಯಾಟೋ ಹಣ್ಣಿನಲ್ಲಿ ಲೈಕೋಪಿನ್ ಎನ್ನುವ ಆಂಟಿ ಅಕ್ಸಿಡೆಂಟ್ ಮತ್ತು ಬೀಟಾ ಕ್ಯಾರೋಟಿನ್ ಎಂಬ ಅಂಶವಿದೆ. ಇದು ನಮ್ಮ ದೇಹಕ್ಕೆ ಶೀತ, ನೆಗಡಿ, ಜ್ವರ  ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಟೊಮ್ಯಾಟೋ ಸೇವನೆಯು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ನಮಗೆ ಎದುರಾಗುವ ಸಣ್ಣ ಪುಟ್ಟ ಆರೋಗ್ಯ ಸಮಸ್ಸೆಗಳಿಗೆ ಪರಿಹಾರ ನೀಡುತ್ತದೆ.

 ರಕ್ತದ ಒತ್ತಡ ನಿವಾರಣೆಗೆ ಟೊಮೇಟೊ ಸಹಾಯಕ

ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಿಂದ ಹಿಡಿದು ವಯಸ್ಸಾಗಿರುವವರಿಗೂ ಈ ರಕ್ತದೋತ್ತಡದ ಸಮಸ್ಸೆ ಹೆಚ್ಚಾಗಿದೆ. ಈ ಸಮಸ್ಯೆಯ ನಿವಾರಣೆಗೆ ಟೊಮ್ಯಾಟೋ ಸೇವನೆ  ಸಹಕರಿಯಾಗಿದೆ. ಈ ರಕ್ತದೋತ್ತಡದ ಸಮಸ್ಸೆ ಇಂದಿನ ಜನರು ಬೇಸತ್ತು ಹೋಗುವಷ್ಟು ತೊಂದರೆಯಾಗುತ್ತಿದೆ. ಆದುದರಿಂದ ಪ್ರತಿದಿನ ಟೊಮ್ಯಾಟೋ ಸೇವಿಸುವುದರಿಂದ ಈ ಸಮಸ್ಯೆಯನ್ನು ತಡೆಯಬಹುದಾಗಿದೆ. ಟೊಮ್ಯಾಟೋದಲ್ಲಿ ಪೊಟ್ಯಾಷಿಯಂ ಪ್ರಮಾಣವು ಹೆಚ್ಚಾಗಿರುವುದರಿಂದ, ರಕ್ತನಾಳದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆಮಾಡಲು ಸಹಕರಿಸುತ್ತದೆ. ಹೀಗೆ ರಕ್ತಸಂಚಾರವು ಸುಗಮವಾಗಿ ನಡೆಯಲು ಸಹಕರಿಯಾಗಿದೆ. ಮುಖ್ಯವಾಗಿ ಹೃದಯದ ಮೇಲಿನ ಭಾರವನ್ನು ಇಳಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿರುತ್ತಾರೆ. ಹೃದಯದ ಬಡಿತ ಇದರಿಂದ ಉತ್ತಮಗೊಂಡು ಎದೆಯುರಿ, ಒತ್ತಡ  ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸಮರ್ಪಕವಾದ ಟೊಮ್ಯಾಟೋ ಹಣ್ಣಿನ ಸೇವನೆಯು ಉತ್ತಮ ಆರೋಗ್ಯ ನೀಡುತ್ತದೆ.

ಟೊಮೇಟೊದಿಂದ ದೃಷ್ಟಿ ಸಮಸ್ಸೆಗೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಮೊಬೈಲ್, ದೂರದರ್ಶನ ಮುಂತಾದವುಗಳ ಬಳಕೆಯು ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ  ಮೊಬೈಲ್ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ನಮ್ಮ ಕಣ್ಣುಗಳ ದೃಷ್ಟಿ ಹಾಳಾಗಲು ಕಾರಣವಾಗುತ್ತಿದೆ ಅಲ್ಲದೆ ಆರೋಗ್ಯದ ಮೇಲು ಹೆಚ್ಚಿನ ನಕಾರಾತ್ಮಕ ಪರಿಣಾಮ ಬೀರುತ್ತಿದ್ದೆ.  ಕಣ್ಣುಗಳು ದೃಷ್ಟಿಗೆ  ಬೇಕಾದ ವಿಟಮಿನ್ ಟೊಮ್ಯಾಟೋದಲ್ಲಿ  ಹೇರಳವಾಗಿ  ಸಿಗುತ್ತದೆ. ಆದುದರಿಂದ ಟೊಮ್ಯಾಟೋ ಸೇವನೆಯು ನಮ್ಮ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತಲ್ಲದೆ, ದೃಷ್ಟಿಗೆ  ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಟೊಮ್ಯಾಟೋ ಹಣ್ಣಿನಿಂದ ಸಿಗುವ ವಿಟಮಿನ್ ಎ ನಮಗೆ ತುಂಬಾ ಉಪಯುಕ್ತವಾಗಿದೆ.

 ಟೊಮೇಟೊ ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ಜನರು ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಲು ತಾವು ತಿನ್ನುವ ಆಹಾರ ಸಂಪೂರ್ಣವಾಗಿ ಜೀರ್ಣವಾಗಬೇಕು. ಹಾಗೆ ಜೀರ್ಣವಾದಾಗ ಮಾತ್ರ ಆ ಆಹಾರದಲ್ಲಿನ ಪೋಷಕಾಂಶ ದೇಹಕ್ಕೆ ಸೇರಿ ಉತ್ತಮ ಆರೋಗ್ಯ ಲಭಿಸುತ್ತದೆ. ಆದರೆ ಇಂದಿನ ಮಕ್ಕಳು ತಾವು ತಿನ್ನುವ ಆಹಾರ  ಜೀರ್ಣವಾಗದೆ ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಮಸ್ಯೆಗೆ ಟೊಮ್ಯಾಟೋ ಅತ್ಯುತ್ತಮ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹೇಗೆಂದರೆ ಟೊಮ್ಯಾಟೋದಲ್ಲಿ ನಾರಿನ ಅಂಶವಿದ್ದು, ಕರುಳಿನ ಚಲನೆಗೆ ಇದು ಸಹಕಾರಿಯಾಗಿದೆ.

 ಕ್ಯಾನ್ಸರ್ ತಡೆಗಟ್ಟಲು ಟೊಮೇಟೊ ಸಹಾಯಕ

ಕ್ಯಾನ್ಸರ್ ಒಂದು ಮಾರಣಾಂತಿಕಾ ಖಾಯಿಲೆಯಾಗಿದೆ. ಟೊಮ್ಯಾಟೋ ಸೇವನೆಯು ಈ ಖಾಯಿಲೆ ಬರದಂತೆ ತಡೆಯಲು ಸಹಾಯಕವಾಗಿದೆ. ಟೊಮ್ಯಾಟೋದಲ್ಲಿ ಲೈಕೋಪೀನ್ ಎಂಬ ರಾಸಾಯನಿಕವಿದ್ದು, ಇದು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಸಹಕರಿಸುತ್ತದೆ. ವಾರದಲ್ಲಿ ಕನಿಷ್ಠ ಹತ್ತು ಅಥವಾ ಅದಕ್ಕಿಂತ ಜಾಸ್ತಿ ಟೊಮ್ಯಾಟೋ ಸೇವನೆಯು ನಮಗೆ ಪ್ರಾಸ್ಟೇಜ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಹೃದಯ ಸಂಬಂಧಿ ಕಾಯಿಲೆಗೆ ಟೊಮೇಟೊದಿಂದ ಪರಿಹಾರ

ಟೊಮ್ಯಾಟೋ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಬರದಂತೆ ತಡೆಗಟ್ಟಬಹುದು. ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ ಸಿ, ಪೈಬರ್ ಮತ್ತು ಕೋಲೀನ್  ಹೇರಳವಾಗಿದೆ. ಹೆಚ್ಚಿನ ಪೊಟ್ಯಾಶಿಯಂ ದೇಹಕ್ಕೆ ಬೇಕು ಎಂದು ಬಯಸಿದರೆ ಟೊಮ್ಯಾಟೋ ಸಲಾಡ್ ಮಾಡಿ ತಿನ್ನಬಹುದು. ಸಾಮಾನ್ಯವಾಗಿ ದಿನಕ್ಕೆ 4039 ಮಿಲಿ ಗ್ರಾಂ ಪೊಟ್ಯಾಶಿಯಂ ಸೇವಿಸಿದರೆ ಜನರು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ದೂರವಿರಬಹುದು ಎಂದು ವೈದ್ಯರು ತಿಳಿಸುತ್ತಾರೆ.

 ಗರ್ಭಕೋಶಕ್ಕೆ ಟೊಮೇಟೊ ಉತ್ತಮ

ಟೊಮ್ಯಾಟೋ ಸೇವನೆಯು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಇದರಲ್ಲಿನ ಪೋಷಕಗಳು ಮಗುವಿಗೆ ಮತ್ತು ಮಹಿಳೆಗೆ ಅಗತ್ಯವಾಗಿರುತ್ತದೆ. ಅದಕ್ಕಾಗಿಯೇ ಗರ್ಭಿಣಿಯರು ತಮ್ಮ ಆಹಾರದಲ್ಲಿ ಟೊಮ್ಯಾಟೋವನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಕಾಪಾಡಲು ಟೊಮೇಟೊ

ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಅತ್ತ್ಯುತ್ತಮ ಮನೆ ಮದ್ದು ಎಂದರೆ ತಪ್ಪಾಗಲಾರದು. ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಕಾಂತಿಯನ್ನು ಹೆಚ್ಚಿಸುವಲ್ಲಿ ಈ ಟೊಮ್ಯಾಟೋ ರಾಮಭಾಣದಂತೆ ಕೆಲಸಮಾಡುತ್ತದೆ. ಇದರಲ್ಲಿನ ಲೈಕೋಪಿನ್ ಎಂಬ ಅಂಶ ಸೂರ್ಯನಿಂದ ಬರುವ ವಿಕಿರಣ ತಡೆದು ಚರ್ಮದ ಕಾಂತಿಯನ್ನು ರಕ್ಷಿಸುತ್ತದೆ. ಟೊಮ್ಯಾಟೋ ರಸವನ್ನು ಚರ್ಮದ ಮೇಲೆ ಹಚ್ಚಬೇಕು, ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ, ಮತ್ತು ಚರ್ಮವನ್ನು ಮೃದುವಾಗಿ ಮಾಡುತ್ತದೆ. ಇನ್ನೂ ಹಲವಾರು ಉಪಯೋಗವನ್ನು ಈ ಟೊಮ್ಯಾಟೋ ಹೊಂದಿದ್ದು, ಜನರಿಗೆ ಅತೀ ಅಗತ್ಯ ತರಕಾರಿ ಹಾಗೂ  ಔಷಧಿ ಗುಣ ಹೊಂದಿರುವ ಮನೆಮದ್ದು ಆಗಿರುತ್ತದೆ. ಪ್ರತಿಯೊಬ್ಬರೂ ಸುಲಭವಾಗಿ ಬೆಳೆಯಬಹುದಾದ ಸಸ್ಯ ಇದಾಗಿದ್ದು, ಅತ್ಯಂತ ಉಪಯೋಗವಾದ  ತರಕಾರಿಯಾಗಿರುತ್ತದೆ.


Share this with your friends...

Leave a Comment

Your email address will not be published. Required fields are marked *