ಆರೋಗ್ಯಕಾರಿ ತುಳಸಿ (Basil)

Share this with your friends...

ತುಳಸಿಯು ಆಯಂಟಿ ಬಯೋಟಿಕ್ (Antibiotic) ಆಗಿದ್ದು ರೋಗಾಣುಗಳನ್ನು ಹೊಡೆದೋಡಿಸುವ ಶಿಲಿಂದ್ರನಾಶಕವಾಗಿದೆ. ಇದು ಆರೋಗ್ಯದ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ತುಳಸಿಯು ಹೀಗೆ ಹೆಚ್ಚಿನ ಕಾಯಿಲೆಗಳಿಗೆ ಮನೆಮದ್ದಾಗಿದ್ದು, ಇದು ವಾತಾವರಣಕ್ಕೂ ಒಳ್ಳೆಯದಾಗಿದೆ. ಹೆಚ್ಚಿನ ಖರ್ಚಿಲ್ಲದೆ ರೋಗಗಳಿಗೆ ಔಷಧಿಯಾಗಿದೆ. ತುಳಸಿಯು ವಿಟಮಿನ್ ಎ,ಸಿ ಜೀವಸತ್ವಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ. ಮುಖ್ಯವಾಗಿ ತುಳಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ.

ತುಳಸಿಯು ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ

ತುಳಸಿಯು ನಮ್ಮ ದಿನನಿತ್ಯದ ಬದುಕಿನಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರತಿ ದಿನ ಬೆಳಿಗ್ಗೆ 5 ತುಳಸಿ ಎಲೆಗಳನ್ನು ನೀರಿನೊಂದಿಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. 

ದೇಹದಲ್ಲಿನ ಉರಿ, ತುರಿಕೆ ಕಡಿಮೆಮಾಡಲು ತುಳಸಿಯನ್ನು ಬಳಸಬಹುದು

ಸುಮಾರು 10 ರಿಂದ 20 ಮಿಲಿ ತುಳಸಿ ರಸವನ್ನು ಬೆಳಿಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮತ್ತು ಮೈ ಗೆ ಹಚ್ಚಿ ಉಜ್ಜಿಕೊಳ್ಳುವುದರಿಂದ ತುರಿಕೆ, ಉರಿ ಮತ್ತು ಗಂದೆಗಳು ಕಡಿಮೆಯಾಗುತ್ತವೆ.

ಸೊಳ್ಳೆಯಿಂದ ದೂರವಿರಲು ತುಳಸಿಯು ತುಂಬಾ ಉಪಕಾರಿಯಾಗಿದೆ

ತುಳಸಿಯು ಒಂದು ಒಳ್ಳೆಯ Mosquito repellent ಆಗಿದೆ. ಒಂದೊಮ್ಮೆ ನಿಮಗೇನಾದರೂ ಸೊಳ್ಳೆಗಳ ಕಾಟವಿದ್ದರೆ ತುಳಸಿ ಎಲೆಗಳನ್ನು ಮೈ ಗೆ ಉಜ್ಜಿಕೊಳ್ಳುವುದರಿಂದ ಸೊಳ್ಳೆಗಳನ್ನು ದೂರವಿಡಬಹುದು.

ತುಳಸಿಯಿಂದ ಹಲ್ಲು ನೋವಿನ ನಿವಾರಣೆ

ಹಲ್ಲು ನೋವಿನ ಸಮಸ್ಯೆ ಕಂಡುಬಂದಲ್ಲಿ 2 ರಿಂದ 4 ತುಳಸಿ ಎಲೆಗಳ ಜೊತೆಗೆ 2-3 ಕಾಳುಮೆಣಸನ್ನು ಸೇರಿಸಿ ಜಜ್ಜಿ ಮಾತ್ರೆಗಳನ್ನು ಮಾಡಿ ನೋವಿರುವ ಹಲ್ಲಿನ ನಡುವೆ ಇಟ್ಟುಕೊಂಡರೆ ಹಲ್ಲು ನೋವು ತಕ್ಷಣ ಕಡಿಮೆಯಾಗುವುದು.

ಸಂದಿನೋವು ನಿವಾರಣೆಗೆ ತುಳಸಿಯು ಉಪಯುಕ್ತವಾಗಿದೆ

ತುಳಸಿ ಗಿಡದ ಪ್ರತಿಯೊಂದು ಭಾಗವು ಔಷಧಿಯ ಗುಣಗಳನ್ನು ಹೊಂದಿದೆ. ಇದರ ಎಲೆ, ಕಾಂಡ, ಬೇರು, ಹೂವು, ಎಲ್ಲವನ್ನೂ ಒಣಗಿಸಿ, ಪುಡಿಮಾಡಿ, 2 ರಿಂದ 5 ಗ್ರಾಂ ನಷ್ಟು ಪುಡಿಯನ್ನು ಹಾಲಿನ ಜೊತೆ ನಿಯಮಿತವಾಗಿ ಸೇವಿಸಿದರೆ ಸಂದಿಗಳ ನೋವು ಕಡಿಮೆಯಾಗುವುದು.

ತುಳಸಿಯು ಗಂಟಲು, ಬಾಯಿ ಮತ್ತು ಹಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ

ಗಂಟಲು ರೋಗ, ಬಾಯಿ ರೋಗ ಹಾಗೂ ಹಲ್ಲಿನ ಸಮಸ್ಯೆ ಇದ್ದಲ್ಲಿ, ತುಳಸಿ ರಸದ ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿ, ನಿಯಮಿತವಾಗಿ ಬಾಯಿ ಮುಕ್ಕಳಿಸಿದರೆ, ಗಂಟಲು, ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು ದೂರಾಗುತ್ತವೆ.

ತುಳಸಿಯು ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ

ತುಳಸಿ ಎಲೆಯ ರಸವನ್ನು ಮಾಡಿ ಪ್ರತಿದಿನ ಬೆಳಿಗ್ಗೆ ಬಾಯಿ ಮುಕ್ಕಳಿಸುವುದರಿಂದ ಬಾಯಿಯ
ದುರ್ವಾಸನೆ ಕಡಿಮೆಯಾಗುವುದು.

ಜ್ವರ, ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ತುಳಸಿಯಿಂದ ಪರಿಹಾರ

ಪ್ರತಿದಿನ ತುಳಸಿ ದಳಗಳನ್ನು ಚಹಾದ ಜೊತೆ ಕುದಿಸಿ ಕುಡಿಯುವುದರಿಂದ ಜ್ವರ ಮತ್ತು ಶೀತ ಕಡಿಮೆಯಾಗುವುದು. ಒಂದುವೇಳೆ ಕೆಮ್ಮಿನ ಸಮಸ್ಯೆ ಉಂಟಾದರೆ, 10 ಮಿಲಿ ತುಳಸಿ ರಸಕ್ಕೆ, 2 ರಿಂದ 3 ಗ್ರಾಂ ಕರಿಮೆಣಸಿನ ಪುಡಿ ಸೇರಿಸಿ ಬಿಸಿನೀರಿನಲ್ಲಿ ಸೇವಿಸಿದರೆ ಮತ್ತು ತುಳಸಿ ಎಲೆಯನ್ನು ಪ್ರತಿದಿನ ಜಗಿದು ತಿನ್ನುವುದರಿಂದ  ಕೆಮ್ಮು ಕಡಿಮೆಯಾಗುತ್ತದೆ.

ಚರ್ಮದ ರಕ್ಷಣೆ ಮಾಡುವಲ್ಲಿ ತುಳಸಿಯು ಸಹಕಾರಿಯಾಗಿದೆ

ಪ್ರತಿದಿನ ಸ್ನಾನದ ನೀರಿಗೆ ತುಳಸಿ ಎಲೆಗಳನ್ನು ಹಾಕುವುದರಿಂದ ಚರ್ಮವು ಕಾಂತಿಯುಕ್ತವಾಗುವುದು ಹಾಗೂ ಸೋಂಕುಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುವುದು.

ಮೂತ್ರದ ಸಮಸ್ಯೆಗೆ  ತುಳಸಿಯು ಉಪಯುಕ್ತವಾಗಿದೆ

ಮೂತ್ರಪಿಂಡದ ಸಮಸ್ಯೆ ಏನಾದರು ಉಂಟಾದಲ್ಲಿ ತುಳಸಿ ಬೀಜವನ್ನ ಅಕ್ಕಿ ತೊಳೆದ ನೀರಿನಲ್ಲಿ ಅರೆದು ನಿಯಮಿತವಾಗಿ ಸೇವಿಸುವುದರಿಂದ ಕಟ್ಟಿಕೊಂಡಿರುವ ಮೂತ್ರ ಸರಾಗವಾಗಿ ಹೋಗುತ್ತದೆ.

ಮೂತ್ರದಲ್ಲಿನ ಕಲ್ಲು ಕರಗಿಸಲು ತುಳಸಿಯು ಸಹಕಾರಿಯಾಗಿದೆ

ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿ ಸಣ್ಣ ನೋವು ಕಾಣಿಸಿಕೊಂಡರೆ ತುಳಸಿಯು ನೆರವಾಗುತ್ತದೆ. 3 ರಿಂದ 4 ತುಳಸಿ ಎಲೆಗಳನ್ನು ಪ್ರತಿ ದಿನ ಅಗೆದು ತಿಂದು ಒಂದು ಗ್ಲಾಸ್ ನೀರು ಕುಡಿಯುವುದರಿಂದ ಮೂತ್ರ ಪಿಂಡ ದ ಕಲ್ಲು ನಿಧಾನವಾಗಿ ಕರಗಿಹೋಗುತ್ತದೆ

ತುಳಸಿಯ ಉಪಯೋಗಗಳು

ತುಳಸಿಯಲ್ಲಿ ಕ್ಯಾಂಫಿನ್, ಯುಜೆನಲ್ ಹಾಗೂ ಸಿನಿಯೋಲ್ ಗಳಿರುವುದರಿಂದ ಅದು ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ದೂರವಿರುಸುವಲ್ಲಿ ತುಳಸಿಯು ಸಹಕಾರಿಯಾಗಿದೆ

ತುಳಸಿಯು ಜ್ವರ, ಅಸ್ತಮಾ , ಹೃದಯ ಸಮಸ್ಯೆ, ಮಾನಸಿಕ ಒತ್ತಡಗಳನ್ನೂ ನಿಯಂತ್ರಿಸುತ್ತದೆ. ವಿಟಮಿನ್ ಸಿ ಜೀವಸತ್ವವನ್ನು ಹೊಂದಿದೆ ಹಾಗೂ ಆಯಂಟಿ ಬಯೋಟಿಕ್ ಆಗಿದ್ದು ರೋಗಾಣುಗಳನ್ನು ಹೊಡೆದೋಡಿಸುತ್ತದೆ. ಅಲ್ಲದೆ ಕೊಲೆಸ್ಟ್ರಾಲ್ ಕಡಿಮೆಮಾಡುವಲ್ಲಿ ತುಳಸಿಯು ಸಹಕಾರಿ.

ಬಾಯಿಯ ದುರ್ವಾಸನೆಯನ್ನು ತಡೆಗಟ್ಟುವುದರಲ್ಲಿ, ಹಲ್ಲಿನ ಸಮಸ್ಯೆ ತಡೆಗಟ್ಟುವುದರಲ್ಲಿಯೂ ತುಳಸಿಯು ಸಹಕಾರಿಯಾಗಿದೆ .

ಚರ್ಮವು ಕಾಂತಿಯುಕ್ತವಾಗುವಲ್ಲಿ ಸಹಕಾರಿಯಾಗಿದ್ದು, ಉರಿ, ತುರಿಕೆ ತಡೆಗಟ್ಟುವಲ್ಲಿ ಸಹಾಯಕ ವಾಗಿದೆ. ತುಳಸಿ ಎಲೆ ಉಪಯೋಗಿಸುವುದರಿಂದ ಸೊಳ್ಳೆಯಿಂದ ದೂರವಿರಬಹುದು

ತುಳಸಿಯು ಕಿಡ್ನಿಯಲ್ಲಿನ ಕಲ್ಲು ನಿವಾರಣೆಗೆ ಸಹಕಾರಿ.

ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ. 

ನೀವು ನಮ್ಮ ವೆಬ್ಸೈಟ್ ನ್ನು follow ಮಾಡುವುದರಿಂದ ನಾವು ಪಬ್ಲಿಶ್ ಮಾಡುವ ಎಲ್ ಆರ್ಟಿಕಲ್ ಗಳ ನೋಟಿಫಿಕೇಶನ್ ಗಳು ಕೂಡ ನಿಮ್ಮ್ ಮೊಬೈಲ್ ಗೆ ಬರುತ್ತವೆ


Share this with your friends...

Leave a Comment

Your email address will not be published. Required fields are marked *