ಒಂದೆಲಗ(ಬ್ರಾಹ್ಮೀ)ದ ಔಷಧಿ ಗುಣಗಳು(Gotu kola)

Share this with your friends...

ಒಂದೆಲಗ ಎಂಬುದು ಒಂದು ವಿಶೇಷವಾದ ಔಷಧೀಯ ಗಿಡಮೂಲಿಕೆಯಾಗಿದೆ. ಇದನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ. ಒಂದೆಲಗವು ಹೆಸರೇ ಸೂಚಿಸುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ಬ್ರಾಹ್ಮಿ ಎಂಬುದಾಗಿಯೂ ಕೆರೆಯುತ್ತಾರೆ. ಮತ್ತು ಆಡು ಭಾಷೆಯಲ್ಲಿ ಇಲಿಕಿವಿ ಸೊಪ್ಪು ಎಂದು ಕರೆಯುತ್ತಾರೆ. ಒಂದೆಲಗವು ನೆಲವನ್ನೇ ಅಂಟಿಕೊಂಡು ಬಳ್ಳಿಯಂತೆ ಬೆಳೆಯುವ ಗಿಡವಾಗಿದ್ದು, ಜೌಗುಪ್ರದೇಶಗಳಲ್ಲಿ ಮತ್ತು ನೀರಿನ ಪ್ರದೇಶಗಳಲ್ಲಿ ಅಂದರೆ ಗದ್ದೆ, ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ವೈಜ್ಞಾನಿಕ ಹೆಸರು ಸೆಂಟೆಲ್ಲಾಏಸಿಯಾಟಿಕ್ (Centella asiatica). ಇದರ ಎಲ್ಲಾ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಒಂದೆಲಗವು ಮುಖ್ಯವಾಗಿ ಜ್ಞಾಪಕ ಶಕ್ತಿ ವೃದ್ಧಿಸುವಲ್ಲಿ ಸಹಕಾರಿ. ಏಕೆಂದರೆ ಬೈಕೊಸೈಡ್ ಎ ಮತ್ತು ಬಿ ಎಂಬ ರಾಸಾಯನಿಕ ಇರುವುದರಿಂದ ಇದು ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುತ್ತದೆ.

ಮುಖ್ಯವಾಗಿ ಒಂದೆಲಗವು ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ

ಮಕ್ಕಳು ಪ್ರತಿದಿನ ಬೆಳಿಗ್ಗೆ 2 ರಿಂದ 3 ಒಂದೆಲಗ ಎಲೆಯನ್ನು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು.
ಮಕ್ಕಳು ಹಸಿ ಎಲೆ ತಿನ್ನಲು ಹಿಂಜರಿಯುತ್ತಾರೆ, ಆದ್ದರಿಂದ ಒಂದೆಲಗದ ಎಲೆಯ ಒಂದು ಚಮಚ ರಸವನ್ನು ಜೇನುತುಪ್ಪ ಬೆರಸಿ ಕೊಡಬೇಕು ಅಥವಾ ಬೆಳಿಗ್ಗೆ ಮಾಡೊ ದೋಸೆ ಹಿಟ್ಟಿನ ಜೊತೆ ಹಾಕಿ ರುಬ್ಬಿ ನಂತರ ದೋಸೆ ಮಾಡಿ ಕೊಡುವುದರಿಂದ ಅದರಲ್ಲಿ ಬೈಕೊಸೈಡ್ ಎ ಮತ್ತು ಬಿ ಎಂಬ ರಾಸಾಯನಿಕ ಇರುವುದರಿಂದ ಇದು ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುತ್ತದೆ. ಆದ್ದರಿಂದ ಜ್ಞಾಪಕ ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಬುದ್ಧಿಶಕ್ತಿಯು ಹೆಚ್ಚುತ್ತದೆ.

ಒಂದೆಲಗವು ಕೆಮ್ಮನ್ನು ನಿವಾರಿಸುತ್ತದೆ

ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಅದನ್ನು ಜೇನುತುಪ್ಪದ ಜೊತೆ ಬೆರಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಒಂದೆಲಗವು ಗರ್ಭಿಣಿಯರಿಗೂ ಹೆಚ್ಚು ಸಹಕಾರಿಯಾಗಿದೆ

ಒಂದೆಲಗದ ಎಲೆಯ ರಸವನ್ನು ತೆಗೆದು ಪ್ರತಿದಿನ ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಮತ್ತು ಒಂದೆಲಗದ ಬೇರನ್ನು ರುಬ್ಬಿ ಅದನ್ನು ಆಕಳಿನ ಹಸಿ ಹಾಲಿನಲ್ಲಿ ( ತಂಬು ಹಾಲು) ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ, ಜೊತೆಗೆ ಹುಟ್ಟುವ ಮಕ್ಕಳು ಕೂಡ ಚುರುಕಾಗಿ ಹುಟ್ಟುತ್ತಾರೆ.

ಬಾಣಂತಿಯರಿಗೆ ಒಂದೆಲಗವು ತುಂಬಾ ಸಹಕಾರಿಯಾಗಿದೆ

ಕೆಲವರಿಗೆ ಬಾಣಂತನದ ಸಮಯದಲ್ಲಿ ಎದೆಹಾಲಿನ ಸಮಸ್ಯೆ ಉಂಟಾಗುತ್ತದೆ, ಆಗ ಒಂದೆಲಗದ ಎಲೆಯನ್ನು ಒಣಗಿಸಿ ಪುಡಿಮಾಡಿಕೊಂಡು ಆಕಳ ಹಾಲಿನೊಂದಿಗೆ ಜೀರಿಗೆ ಪುಡಿ ಮತ್ತು ಒಂದೆಲಗದ ಎಲೆಯ ಪುಡಿಯನ್ನು ಬೆರಸಿ ಸೇವಿಸುವುದರಿಂದ ಬಾಣಂತಿಯರಿಗೆ ಎದೆ ಹಾಲು ವೃದ್ಧಿಯಾಗುತ್ತದೆ.

ಉರಿಮೂತ್ರವನ್ನು ಕಡಿಮೆಮಾಡುತ್ತದೆ

ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡಾಗ ಮತ್ತು ಮೂತ್ರದಲ್ಲಿ ಇನ್ಫೆಕ್ಷನ್ ಆದಾಗ ಒಂದೆಲಗದ ರಸ 4 ಚಮಚ, ಕೊತ್ತಂಬರಿ ಬೀಜದ ಪುಡಿ 1/2 ಚಮಚವನ್ನು ಎಳೆನೀರಿಗೆ ಬೆರಸಿ ಕುಡಿಯುವುದರಿಂದ ಉರಿಮೂತ್ರ ಮತ್ತು ಮೂತ್ರದಲ್ಲಿನ ಇನ್ಫೆಕ್ಷನ್ ಕಡಿಮೆಯಾಗುವುದು.

ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದರಲ್ಲಿ ಸಹಕಾರಿಯಾಗಿದೆ

ಅಜೀರ್ಣದಿಂದ ಬಳಲುತ್ತಿರುವವರು ಪ್ರತಿದಿನ 4 ರಿಂದ 5 ಒಂದೆಲಗದ ಎಲೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೆ ಒಂದೆಲಗವು ರಕ್ತಹೀನತೆಯನ್ನು ನಿವಾರಿಸುತ್ತದೆ.

ಒಂದೆಲಗವು ತಲೆಯ ಹೊಟ್ಟನ್ನು ನಿವಾರಿಸುತ್ತದೆ

ಕೆಲವರಿಗೆ ತಲೆಯ ಹೊಟ್ಟಿನ ಸಮಸ್ಯೆ ಇರುತ್ತದೆ. ಇದರಿಂದ ತಳೆಯ ಕೂದಲು ಉದುರುತ್ತದೆ. ಮತ್ತು ತಲೆಯಲ್ಲಿ ಹೇನು ಆಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಒಂದೆಲಗದ ಎಲೆಯನ್ನು ಮತ್ತು ಬೇರನ್ನು ಅರೆದು ತಲೆಗೆ ಹಚ್ಚಿ, 2 ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟನ್ನು, ಕೂದಲು ಉದುರುವುದನ್ನು ಮತ್ತು ಕೂದಲು ಸೀಳುವಿಕೆಯನ್ನು ಕಡಿಮೆ ಮಾಡಬಹುದು.

ನಿದ್ರಾಹೀನತೆಗೆ ಒಂದೆಲಗವು ಉಪಯುಕ್ತವಾಗಿದೆ

ಕೆಲಸದ ಒತ್ತಡಗಳಿಂದ ನಿದ್ದೆ ಬರದೆ ಇದ್ದಾಗ ಒಂದೆಲಗದ ಎಲೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಅದರ ಜೊತೆಗೆ ಹುರಿದ ಗಸಗಸೆ ಇಟ್ಟುಕೊಂಡಿರಬೇಕು. ನಂತರ ಪ್ರತಿದಿನ ಬೆಳಿಗ್ಗೆ ಅದನ್ನು ಜೇನುತುಪ್ಪದೊಡನೆ ಸೇವಿಸಿದರೆ ನಿದ್ದೆಯ ಸಮಸ್ಯೆ ನಿವಾರಣೆಯಾಗುತ್ತದೆ.

ಮತ್ತೊಂದು ವಿಧಾನ: ಒಂದೆಲಗದ ಎಲೆಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ ಪ್ರತಿದಿನ ರಾತ್ರಿ ಮಲಗುವಾಗ ತಲೆಗೆ ಹಾಕಿಕೊಂಡು ಮಲಗುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.

ದೇಹವನ್ನು ತಂಪಾಗಿಡಲು ಒಂದೆಲಗವು ಸಹಕಾರಿಯಾಗಿದೆ

ದೇಹದಲ್ಲಿ ಹೆಚ್ಚಿನ ಉಷ್ಣಾಂಶ ಉಂಟಾದಾಗ ಒಂದೆಲಗದ ಎಲೆಯನ್ನು ಬಳಸುವುದರಿಂದ ದೇಹವನ್ನು ತಂಪಾಗಿಸಬಹುದು. ಎಳ್ಳು, ಒಂದು ಹಸಿಮೆಣಸು, ಸ್ವಲ್ಪತೆಂಗಿನ ತುರಿಯನ್ನು ಸ್ವಲ್ಪ ಎಣ್ಣೆ ಸೇರಿಸಿ ಹುರಿಯಬೇಕು. ನಂತರ ಒಂದೆಲಗದ ಎಲೆಯನ್ನು ಸ್ವಲ್ಪ ಬಾಣಲೆಯಲ್ಲಿ ಅದರ ಹಸಿ ವಾಸನೆ ಹೋಗುವಷ್ಟು ಹುರಿಯಬೇಕು. ನಂತರ ಮಿಕ್ಸಿಗೆ ಹಾಕಿ ರುಬ್ಬಿ ಆ ಮಸಾಲೆಗೆ ಸಾಸಿವೆ, ಉದ್ದಿನ ಬೇಳೆ, ಒಂದು ಒಣಮೆಣಸು, 3 ರಿಂದ 4 ಬೆಳ್ಳುಳ್ಳಿ ಹಾಕಿ ಒಗ್ಗರಣೆ ತಯಾರಿಸಿ ಹಾಕಬೇಕು ಇದನ್ನು ಒಂದೆಲಗದ ತಂಬುಳಿ ಎಂದು ಕೆರೆಯುತ್ತಾರೆ. ನಂತರ ಅದನ್ನು ಅನ್ನದ ಜೊತೆ ಸವಿದರೆ ದೇಹವು ತಂಪಾಗಿರಲು ಸಹಾಯಮಾಡುತ್ತದೆ. 

ಒಂದೆಲಗದ ಬಳಕೆಯಿಂದ ತಲೆನೋವು, ಆತಂಕ, ಒತ್ತಡವನ್ನು ಕಡಿಮೆಮಾಡಬಹುದು

ಒಂದೆಲಗದ ಹಸಿ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ನಿರಂತರವಾಗಿ ಸೇವಿಸುವುದರಿಂದ ಅಥವಾ ಒಂದೆಲಗ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ತಲೆನೋವು, ಆತಂಕ ಮತ್ತು ಒತ್ತಡವನ್ನು ದೂರಗೊಳಿಸಬಹುದು.

ಮಲಬದ್ಧತೆ

ಮಲಬದ್ಧತೆ ಇದ್ದವರು ಪ್ರತಿದಿನ ಆಹಾರದಲ್ಲಿ ಒಂದೆಲಗವನ್ನು ಬಳಸುವುದರಿಂದ ಸಹಾಯವಾಗುವುದು.

ಮಾತಿನ ಉಗ್ಗುವಿಕೆಗೆ ಒಂದೆಲಗದ ಬಳಕೆ

ಪ್ರತಿದಿನ 4 ರಿಂದ 5 ಒಂದೆಲಗದ ಹಸಿ ಎಲೆಯನ್ನು ಜಗಿದು ತಿಂದು ನೀರು ಕುಡಿಯುವುದರಿಂದ ಮಾತಿನಲ್ಲಿ ಉಗ್ಗುವಿಕೆಯನ್ನು ಕಡಿಮೆಗೊಳಿಸಬಹುದು.

ಒಂದೆಲಗದಿಂದ ಮಧುಮೇಹ ನಿಯಂತ್ರಿಸಬಹುದು

ಒಂದೆಲಗದ ಎಲೆಯನ್ನು ಒಣಗಿಸಿ ಪುಡಿಮಾಡಿಕೊಂಡು ಪ್ರತಿದಿನ ಉಪಯೋಗಿಸುವುದರಿಂದ ಮಧುಮೇಹವನ್ನು ಹತೋಟಿಯಲ್ಲಿಡಬಹುದು.

ಶೀತ, ಜ್ವರ ಮತ್ತು ಕೆಮ್ಮನ್ನು ಕಡಿಮೆ ಮಾಡಲು ಒಂದೆಲಗವನ್ನು ಉಪಯೋಗಿಸುತ್ತಾರೆ

ಸಾಮಾನ್ಯವಾದ ಅರೋಗ್ಯ ತೊಂದರೆಗಳಾದ ಶೀತ, ಜ್ವರ, ಕೆಮ್ಮು ಇವುಗಳಿಂದ ದೂರವಿರಲು ಒಂದೆಲಗದ ರಸವನ್ನು ಸೇವಿಸುವುದರಿಂದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒಂದೆಲಗದ ಎಲೆ ಮತ್ತು ದೂರ್ವೆ(ಗರಿಕೆ ಹುಲ್ಲು), ಬೆಲ್ಲ, ಕಾಳು ಮೆಣಸು ಹಾಕಿ ಕಷಾಯ ಮಾಡಿ ಸೇವಿಸುವುದರಿಂದ ಜ್ವರವನ್ನು ಕಡಿಮೆಗೊಳಿಸಬಹುದು. ಮತ್ತು ಒಂದೆಲಗದ ರಸವನ್ನು ಪ್ರತಿದಿನ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ. 

ನೀವು ನಮ್ಮ ವೆಬ್ಸೈಟ್ ನ್ನು follow ಮಾಡುವುದರಿಂದ ನಾವು ಪಬ್ಲಿಶ್ ಮಾಡುವ ಎಲ್ ಆರ್ಟಿಕಲ್ ಗಳ ನೋಟಿಫಿಕೇಶನ್ ಗಳು ಕೂಡ ನಿಮ್ಮ್ ಮೊಬೈಲ್ ಗೆ ಬರುತ್ತವೆ


Share this with your friends...

Leave a Comment

Your email address will not be published. Required fields are marked *