ಅಮೃತ ಬಳ್ಳಿಯ ಔಷಧಿ ಗುಣಗಳು (Guduchi)

Share this with your friends...

ಅಮೃತ ಬಳ್ಳಿಯ ತುಂಡುಗಳನ್ನು ಔಷಧಕ್ಕಾಗಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ ಇಮೇಲ್ ಮಾಡಿರಿ

ಅಮೃತಬಳ್ಳಿಯು ಒಂದು ಔಷಧಿಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ತಿನೋಸ್ಪೊರಾ ಕಾರ್ಡಿಫೋಲಿಯಾ(Tinospora cordifolia). ಅಮೃತ ಬಳ್ಳಿಯು ಸುಲಭವಾಗಿ ಮನೆಯಲ್ಲಿಯೇ ಬೆಳೆಯಬಹುದಾದ ಔಷಧಿಯ ಗಿಡವಾಗಿದೆ. ಇದರ ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧಿಯ ಗುಣವನ್ನು ಹೊಂದಿವೆ. ಇದು ಹೆಚ್ಚಾಗಿ ಮನೆಯ ಹಿತ್ತಲಲ್ಲಿ, ತೋಟದ ಬೇಲಿಗಳಿಗೆ ಹಬ್ಬಿರುತ್ತದೆ. ಇದರ ಕಾಂಡವು ಮೃದುವಾಗಿರುತ್ತದೆ. ಹಾಗೂ ಅದರ ಎಲೆಯು ಹೃದಯಾಕಾರವಾಗಿರುತ್ತವೆ.

ಅಮೃತಬಳ್ಳಿಯು ಅದರ ಕಾಂಡದ ಮೇಲೆ ತೆಳುವಾದ ಪೊರೆಯನ್ನು ಹೊಂದಿರುತ್ತದೆ. ಹಾಗೂ ಇದು ಹಸಿರು ಬಳ್ಳಿಯಾಗಿದ್ದು, ಮರಗಳಲ್ಲಿ ಇಳಿಮುಖವಾಗಿರುತ್ತದೆ. ಅಮೃತಬಳ್ಳಿಯು ತ್ರಿದೋಷಗಳನ್ನು ಶಮನ ಮಾಡುವ ಗುಣವನ್ನು ಹೊಂದಿದೆ. ಅಮೃತಬಳ್ಳಿಯು ದಿವ್ಯಔಷಧವಾಗಿದೆ. ಇದನ್ನು ಮನೆಯ ಎದುರಿನ ಚಪ್ಪರಕ್ಕೆ ಹಬ್ಬಿಸಿಕೊಂಡು ಇದರಿಂದ ಬರುವ ಗಾಳಿಯ ಸೇವನೆಯಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ.

ಅಮೃತ ಬಳ್ಳಿಯು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಮಕ್ಕಳು ಪರೀಕ್ಷೆಯ ಸಮಯದಲ್ಲಿ ಓದಿರುವುದನ್ನು ಮರೆಯುತ್ತಾರೆ, ಇದನ್ನು ಹೋಗಲಾಡಿಸಲು ಅಮೃತ ಬಳ್ಳಿಯ ಬೇರು ಹಾಗೂ ಹೂವಿನಿಂದ ತಯಾರಿಸಿದ ಜ್ಯೂಸ್ ನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ವಾಂತಿ ಕಡಿಮೆ ಮಾಡಲು ಅಮೃತ ಬಳ್ಳಿಯ ಬಳಕೆ

ವಾಂತಿಯನ್ನು ಸುಲಭವಾಗಿ ನಿಯಂತ್ರಿಸಲು ಅಮೃತ ಬಳ್ಳಿಯ ತುಂಡನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ನೀರಿನಲ್ಲಿ ಸ್ವಲ್ಪ ಸಮಯ ನೆನಸಿಡಬೇಕು, ನಂತರ ಜಜ್ಜಿದ ಅಮೃತ ಬಳ್ಳಿಯ ತುಂಡನ್ನು ಕಿವುಚಿ ತೆಗೆದು ನೀರನ್ನು ಸೋಸಿ, ಆ ನೀರನ್ನು ಸೇವಿಸುವುದರಿಂದ ವಾಂತಿಯನ್ನು ಕಡಿಮೆಮಾಡಬಹುದು.

ಅಮೃತ ಬಳ್ಳಿಯ ತುಂಡುಗಳನ್ನು ಔಷಧಕ್ಕಾಗಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ ಇಮೇಲ್ ಮಾಡಿರಿ

ಅಮೃತ ಬಳ್ಳಿಯು ಕೂದಲು ಉದುರುವುದನ್ನು ತಡೆಯುತ್ತದೆ.

ಅಮೃತಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬಹುದು.
ಅಮೃತ ಬಳ್ಳಿಯನ್ನು ಜಜ್ಜಿ, ಕೊಬ್ಬರಿಎಣ್ಣೆ ಜೊತೆ ಸೇರಿಸಿ, ಕುದಿಸಿ, ನಂತರ ಆರಿಸಿ ಇಟ್ಟುಕೊಳ್ಳಬೇಕು. ಸೋಸಿಕೊಂಡ ಎಣ್ಣೆಯನ್ನು ಪ್ರತಿ ನಿತ್ಯವೂ ತಲೆಕೂದಲಿಗೆ ಹಚ್ಚುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತು ಮಿದುಳಿಗೆ ಉತ್ತಮ ಆರೈಕೆ ಆಗುತ್ತದೆ.

ಅಮೃತ ಬಳ್ಳಿಯಿಂದ ಹೃದಯ ರೋಗದ ಸಮಸ್ಯೆಗೆ ಪರಿಹಾರ

ಹೃದಯ ಬಡಿತದ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಅಮೃತಬಳ್ಳಿಯು ಹೊಂದಿದೆ. ಅಮೃತ ಬಳ್ಳಿಯನ್ನು ಜಜ್ಜಿ, ರಾತ್ರೆ ನೀರಲ್ಲಿ ನೆನಸಿಡಬೇಕು, ನಂತರ ಮಾರನೇ ದಿನ ಬೆಳಿಗ್ಗೆ ಕಿವುಚಿ ತೆಗೆದು, ನೀರನ್ನು ಸೋಸಿಕೊಂಡು, ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಮತ್ತು ಅಮೃತ ಬಳ್ಳಿಯ ಚೂರ್ಣದ ಜೊತೆ 2 ಕಾಳು ಮೆಣಸಿನ ಪುಡಿ ಸೇರಿಸಿ, ಬಿಸಿ ನೀರಲ್ಲಿ ಕದಡಿ ದಿನಕ್ಕೆ 2 ಸಲ ಸೇವಿಸುವುದರಿಂದ ಹೃದಯ ರೋಗ ಸಮಸ್ಯೆಯನ್ನು ನಿವಾರಿಸಬಹುದು.

ಜ್ವರ, ಶೀತ ಕಡಿಮೆ ಮಾಡಲು ಅಮೃತ ಬಳ್ಳಿಯ ಬಳಕೆ

ಅಮೃತ ಬಳ್ಳಿಯು ಎಲ್ಲಾ ಬಗೆಯ ಜ್ವರಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ, ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. ಹಾಗೂ ಅಮೃತ ಬಳ್ಳಿಯ ಕಾಂಡದಿಂದ ರಸ ತೆಗೆದು ರಸವನ್ನು ಜೇನು ತುಪ್ಪದೊಂದಿಗೆ ದಿನಕ್ಕೆ ಮೂರು ಬಾರಿ ಆಹಾರ ಸೇವನೆಯ ಮೊದಲೆ ಸೇವಿಸುವುದರಿಂದ ಮತ್ತು ಅಮೃತ ಬಳ್ಳಿಯ ರಸದ ಜೊತೆ ಆಡುಸೋಗೆ ರಸ ಸೇರಿಸಿ ಕುಡಿಯುವುದರಿಂದ ಜ್ವರ, ಶೀತ ಕಡಿಮೆಯಾಗುತ್ತದೆ.

ಅಮೃತ ಬಳ್ಳಿಯು  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಮೃತಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ೨ ಚಮಚ ರಸವನ್ನು ೨ ಚಮಚ ತುಪ್ಪದೊಡನೆ ಬೆರಸಿ ಸಂಜೆ ಮತ್ತು ಬೆಳಿಗ್ಗೆ ಸೇವಿಸಬೇಕು. ಹೀಗೆ 20 ದಿನಗಳ ಕಾಲ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.

ಜೀರ್ಣ ಕ್ರಿಯೆಯನ್ನು ಹೆಚ್ಚಿಸುವಲ್ಲಿ ಅಮೃತ ಬಳ್ಳಿಯು ಹೆಚ್ಚು ಸಹಕಾರಿಯಾಗಿದೆ

ಅಮೃತ ಬಳ್ಳಿಯ ರಸವನ್ನು ಮಜ್ಜಿಗೆ ಸೇರಿಸಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ. ಮತ್ತು ಅಮೃತಬಳ್ಳಿಯ ಪುಡಿಯನ್ನು ನೀರಿಗೆ ಹಾಕಿ, ಕಷಾಯ ಮಾಡಿ ಕುಡಿಯುವುದರಿಂದ ಮೂಲವ್ಯಾಧಿಯಿಂದ ದೂರವಿರಬಹುದು.

ವಾಯು ಸಮಸ್ಯೆ

ಅಮೃತ ಬಳ್ಳಿ ಮತ್ತು ಆಡುಸೋಗೆಯ ಜ್ಯೂಸ್ ಗೆ ಬೆಲ್ಲ ಹಾಕಿ ಕುಡಿಯುವುದರಿಂದ ವಾಯು ಸಮಸ್ಯೆ ನಿವಾರಣೆಯಾಗುತ್ತದೆ.

ಮಧುಮೇಹ ನಿಯಂತ್ರಿಸುವಲ್ಲಿ ಅಮೃತ ಬಳ್ಳಿಯು ತುಂಬಾ ಸಹಕಾರಿಯಾಗಿದೆ

ಅಮೃತಬಳ್ಳಿಯ ಕಾಂಡದಿಂದ ತೆಗೆದ 2 ಚಮಚ ರಸದೊಂದಿಗೆ 1 ಚಮಚ ಜೇನು ತುಪ್ಪ ಬೆರಸಿ, ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ, ಕ್ರಮೇಣವಾಗಿ ಮೂತ್ರದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಇಂದರಿಂದ ಮಧುಮೇಹ ಹತೋಟಿಯಲ್ಲಿರುತ್ತದೆ.

ಬೊಜ್ಜು ಕರಗಿಸುವಲ್ಲಿ  ಅಮೃತ ಬಳ್ಳಿಯ ಪಾತ್ರ

ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ, ಅದಕ್ಕೆ 2 ಲೋಟ ನೀರು ಹಾಕಿ, ಆ ನೀರು ಒಂದು ಲೋಟ ಆಗುವವರೆಗೂ ಕುದಿಸಬೇಕು.  ಹೀಗೆ ಮಾಡಿ 2 ತಿಂಗಳುಗಳ ಕಾಲ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗಿ ಬೊಜ್ಜು ಕರಗುತ್ತದೆ.

ಚರ್ಮ ರೋಗ ನಿವಾರಣೆಗೆ ಅಮೃತ ಬಳ್ಳಿಯು ಸಹಕಾರಿಯಾಗಿದೆ

ಅಮೃತ ಬಳ್ಳಿಯ  ಎಲೆ ಹಾಗೂ ಕಾಂಡವನ್ನು ಜಜ್ಜಿ, ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಲೇಪಿಸುವುದರಿಂದ ಚರ್ಮರೋಗಗಳಿಂದ ದೂರವಿರಬಹುದು.

ಅಮೃತ ಬಳ್ಳಿಯು ಹೊಟ್ಟೆ ಉರಿ ಕಡಿಮೆಮಾಡುವ ಗುಣವನ್ನು ಹೊಂದಿದೆ

ಅಮೃತ ಬಳ್ಳಿಯ ಎಲೆಯ ರಸವನ್ನು ತೆಗೆದು, ಅದನ್ನು ಮಜ್ಜಿಗೆ ಜೊತೆ ಸೇರಿಸಿ, ಅದಕ್ಕೆ ಓಂ ಕಾಳಿನ ಪುಡಿ ಸೇರಿಸಿ ಕುಡಿಯುವುದರಿಂದ ಹೊಟ್ಟೆಯುರಿ ಕಡಿಮೆಯಾಗುತ್ತದೆ.

ಅಮೃತಬಳ್ಳಿ ಹಾಗೂ ಒಂದೆಲಗವನ್ನು ಸೇರಿಸಿ ಜ್ಯೂಸ್ ಮಾಡಿಕೊಳ್ಳಬೇಕು 20 ml ಜ್ಯೂಸ್ ಗೆ 1/2 ಚಮಚ ಜೇಷ್ಠಮಧು ಪುಡಿಯನ್ನು, 1/4 ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಕ್ಸ ಮಾಡಿ ಕುಡಿಯುವುದರಿಂದ ದೇಹಕ್ಕೆ ಎಲ್ಲಾ ರೀತಿಯಲ್ಲೂ ಸಹಾಯವಾಗುತ್ತದೆ. ಅಮೃತಬಳ್ಳಿಯ ತಂಬುಳಿಯೂ ದೇಹಕ್ಕೆ ತುಂಬಾ ಒಳ್ಳೆಯದು.


Share this with your friends...

6 thoughts on “ಅಮೃತ ಬಳ್ಳಿಯ ಔಷಧಿ ಗುಣಗಳು (Guduchi)”

Leave a Comment

Your email address will not be published. Required fields are marked *