ಸೌತೆಕಾಯಿಯ ಔಷಧಿ ಗುಣಗಳು (Cucumber)

Share this with your friends...

ಸೌತೆಕಾಯಿಯ ಔಷಧಿ ಗುಣಗಳು

ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಇದರ ವೈಜ್ಞಾನಿಕ ಹೆಸರು Cucumis sativus. ಸೌತೆಕಾಯಿಯು ಒಂದು ಬಳ್ಳಿಯ ಗಿಡವಾಗಿದೆ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಳೆಗಳು ಮೃದುವಾಗಿದ್ದು ಸುಂಗನ್ನು ಹೊಂದಿರುತ್ತದೆ. ಆದ್ದರಿಂದ ಸೌತೆಗಿಡವನ್ನು ಮುಟ್ಟಲು ಸ್ವಲ್ಪ ಹಿಂಜರಿಯುತ್ತಾರೆ. ಈ ಗಿಡವು ಚಿಕ್ಕ ಚಿಕ್ಕ ಹಳದಿ ಹೂಗಳನ್ನೂ ಹೊಂದಿರುತ್ತದೆ. ನಂತರ ಕಾಯಿಗಳಂತೂ ಉದ್ದವಾಗಿ ಬೆಳೆಯುತ್ತವೆ. ಕಾಯಿಗಳ ಮೇಲು ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಸೌತೆಕಾಯಿಯಲ್ಲಿ ನಾನಾ ಬಗೆಗಳಿವೆ. ಅವು ಏರೆಸೌತೆ, ನೀರುಸೌತೆ, ಮುಳ್ಳುಸೌತೆ , ನಾಲಿಗೆ ಸೌತೆ ಮುಂತಾದವು.

ಸೌತೆಕಾಯಿಯಲ್ಲಿ 96% ರಷ್ಟು ಭಾಗ ನೀರಿರುತ್ತದೆ. ಇನ್ನುಳಿದ 4% ರಷ್ಟು ಭಾಗ ಪೋಷಕಾಂಶಗಳಿರುತ್ತವೆ. ಸೌತೆಕಾಯಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಹಾಗು ಕಾರ್ಬೋ ಹೈಡ್ರೇಟ್, ಪ್ರೊಟೀನ್, ನಾರಿನಂಶ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಶಿಯಂ ಮ್ಯಾಂಗನೀಸ್, ಪೋಷಕಾಂಶಗಳನ್ನು ಹೊಂದಿದೆ. ಆರೋಗ್ಯಕ್ಕೆ ಸೌತೆಕಾಯಿಯು ಪರಿಪೂರ್ಣವಾದ ತರಕಾರಿಯಾಗಿದೆ. ಸೌತೆಕಾಯಿಗಳು ಈಗ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತವೆ. ಆದರೆ ಮಾರುಕಟ್ಟೆಗಳಲ್ಲಿ ಹೈಬ್ರಿಡ್ ತಳಿಗಳೇ ಜಾಸ್ತಿ. ಅದರ ಬದಲು ಹಳ್ಳಿಗರು ತಮ್ಮ ಮನೆಯ ಹಿತ್ತಲಲ್ಲಿಯೇ ಮನೆಯಲ್ಲಿನ ಸಾವಯುವ ಗೊಬ್ಬರ ಬಳಸಿ ಸೌತೆಕಾಯಿ ಗಿಡವನ್ನು ಬೆಳಸುವುದರಿಂದ ಸೌತೆಕಾಯಿ ಅಧಿಕ ಪೋಷಕಾಂಶಗಳನ್ನು ಹೊಂದಿಕೊಂಡು ಬೆಳೆಯುತ್ತ್ತದೆ. ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸೌತೆಕಾಯಿಯ ವಿಶಿಷ್ಟವೇ ದೇಹವನ್ನು ತಂಪುಗೊಳಿಸುವುದು. ಆದ್ದರಿಂದ ಹಸಿ ಸೌತೆಕಾಯಿಯನ್ನು ತಿನ್ನುವುದರಿಂದ ದೇಹವು ತಂಪಾಗಿರುತ್ತದೆ. ಇದು ಅನೇಕ ರೋಗಗಳನ್ನು ಹೋಗಲಾಡಿಸುತ್ತದೆ. ಸೌತೆಕಾಯಿಯನ್ನು ಉಪಯೋಗಿಸಿ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಸೌತೆಕಾಯಿ ಕೋಸಂಬರಿ, ಸೌತೆಕಾಯಿ ರೊಟ್ಟಿ, ಸೌತೆಕಾಯಿ ಸಲಾಡ್, ಸೌತೆಕಾಯಿ ಸಾಂಬಾರ್ ಮುಂತಾದವು..

ದೇಹವನ್ನು ತಂಪುಗೊಳಿಸಲು ಸೌತೆಕಾಯಿ ಸಹಕಾರಿಯಾಗಿದೆ

ಸೌತೆಕಾಯಿಯ ಬಳಕೆಯು ಬಿಸಿಲಿನ ಧಗೆಯಿಂದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸೌತೆಕಾಯಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಮಾಡುವುದು ಉತ್ತಮ. ಜ್ಯೂಸ್, ಸಲಾಡ್, ಇನ್ಯಾವುದೇ ರೀತಿಯಲ್ಲಿ ಖಾದ್ಯವನ್ನು ತಯಾರಿಸಿಕೊಂಡು ತಿನ್ನಬಹುದು.ಆದರೆ ಇದರ ಅತಿಯಾದ ಸೇವೆನೆಯಿಂದ ದೇಹವು ಅತಿ ತಂಪಾಗಿ ಶೀತವಾಗುವ ಸಂಭವಿರುತ್ತದೆ. ಆದ್ದರಿಂದ ದೇಹದ ಉಷ್ಣತೆಗೆ ತಕ್ಕಂತೆ ಬಳಸುವುದು ಉತ್ತಮ.

ಅಂಗಾಲು ಉರಿ ಕಡಿಮೆ ಮಾಡಲು ಸೌತೆಕಾಯಿಯ ಬಳಕೆ

ಅಂಗಾಲಿನಲ್ಲಿ ಉರಿ ಉಂಟಾದಾಗ ಸೌತೆಕಾಯಿಯ ಪೇಸ್ಟ ಮಾಡಿಕೊಂಡು ಅಂಗಾಲಿಗೆ ಹಚ್ಚಿಕೊಳ್ಳಬಹುದು, ಅಥವಾ ಸೌತೆಕಾಯಿಯ ತಿರುಳನ್ನು ತೆಗೆದುಕೊಂಡು ಅಂಗಾಲಿಗೆ ನಿಧಾನವಾಗಿ ಸ್ವಲ್ಪ ಹೊತ್ತು ಮಸಾಜ್ ಮಾಡಿಕೊಳ್ಳುವುದರಿಂದ ಅಂಗಾಲಿನ ಉರಿ ಕಡಿಮೆಯಾಗುತ್ತದೆ. ಹಾಗು ಅಂಗಾಲು ತಂಪಾಗುತ್ತದೆ.

ಸೌತೆಕಾಯಿಯು ರಕ್ತ ಹೆಪ್ಪುಗಟ್ಟಲು ಸಹಕಾರಿಯಾಗಿದೆ

ಸೌತೆಕಾಯಿಯಲ್ಲಿ ವಿಟಮಿನ್ K ಇರುವುದರಿಂದ ದೇಹದಲ್ಲಿ ಎಲ್ಲೇ ಗಾಯವಾದರೂ ರಕ್ತ ಸೋರುವಿಕೆಯನ್ನು ತಡೆದು ರಕ್ತ ಹೆಪ್ಪುಕಟ್ಟಲು ಸಹಕಾರಿಯಾಗಿದೆ. ಆದ್ದರಿಂದ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಉತ್ತಮ.

ಅಜೀರ್ಣದ ಸಮಸ್ಯೆ ನಿವಾರಣೆಗೆ ಸೌತೆಕಾಯಿಯ ಬಳಕೆ

ಅಜೀರ್ಣದ ಸಮಸ್ಯೆ ಇದ್ದವರು ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಅದರ ತಿರುಳನ್ನು ಪೇಸ್ಟ್ ಮಾಡಿಕೊಂಡು, 2 ಚಮಚ ಸೌತೆಕಾಯಿ ತಿರುಳಿನ ಪೇಸ್ಟ್ ಗೆ, 1 ಚಿಟಿಕೆ ಕಾಳು ಮೆಣಸಿನ ಪುಡಿ, ಸ್ವಲ್ಪ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ ಮಾಡಬೇಕು. ಇದನ್ನು ಊಟದ ಸ್ವಲ್ಪ ಹೊತ್ತಿನ ಮೊದಲು ಸೇವಿಸಿ, ನಂತರ ಊಟ ಮಾಡುವುದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗಿ, ಜೀರ್ಣಕ್ರಿಯೆ ಸರಾಗವಾಗುತ್ತದೆ.

ಸೌತೆಕಾಯಿಯು ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ

ಸೌತೆಕಾಯಿಯ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಸೂರ್ಯನ ಕಿರಣಗಳಿಗೆ ಮುಖದ ಚರ್ಮ ಸುಟ್ಟು ಹೋಗಿದ್ದರೆ, ಸೌತೆಕಾಯಿಯು ಇದನ್ನು ಸರಿ ಮಾಡುವ ಗುಣವನ್ನು ಹೊಂದಿದೆ.

ಸೌತೆಕಾಯಿಯು ಮೂತ್ರಕೋಶದಲ್ಲಿನ ಕಲ್ಲು ನಿವಾರಣೆಗೆ ಸಹಕಾರಿಯಾಗಿದೆ

ಮೂತ್ರನಾಳದ ಸಮಸ್ಯೆ, ಮೂತ್ರದಲ್ಲಿ ಕಲ್ಲಿನ ಸಮಸ್ಯೆ, ಹಾಗು ಮೂತ್ರ ಕಟ್ಟುವ ಸಮಸ್ಯೆ ಇದ್ದರೆ, ಸೌತೆಕಾಯಿ ಮತ್ತು ಬಾಳೆ ದಿಂಡನ್ನು ಸೇರಿಸಿ ಸಲಾಡ್ ಮಾಡಿಕೊಂಡು ಪತಿದಿನ ಸೇವಿಸಬಹುದು. ಅಥವಾ ಸೌತೆಕಾಯಿ ಮತ್ತು ಬಾಳೆದಿಂಡಿನ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಾಂಶ ಇರುವುದರಿಂದ ಹಾಗು ಬಾಳೆದಿಂಡಿನಲ್ಲಿ ನಾರಿನಂಶ ಇರುವುದರಿಂದ ಇವು ಮೂತ್ರದಲ್ಲಿನ ಕಲ್ಲನ್ನು ಹೊರ ಹಾಕಲು ಸಹಾಯವಾಗುತ್ತವೆ.

ಉರಿ ಮೂತ್ರದ (urine infection) ಸಮಸ್ಯೆಗೆ ಸೌತೆಕಾಯಿಯ ಬಳಕೆ

ಮಹಿಳೆಯರಲ್ಲಿ ಉರಿಮೂತ್ರದ ಸಮಸ್ಯೆ ಕಂಡು ಬಂದಾಗ ಸೌತೆಕಾಯಿಯ ಜ್ಯೂಸ್ ಮಾಡಿಕೊಂಡು ಅಥವಾ 1 ಲೋಟ ಸೌತೆಕಾಯಿ ರಸಕ್ಕೆ 1 ಚಮಚ ಜೇನು ತುಪ್ಪ ಹಾಗು ನಿಂಬೆ ರಸ ಸೇರಿಸಿ ದಿನಕ್ಕೆ 2 ಬಾರಿ ಕುಡಿಯುವುದರಿಂದ, ಉರಿಮೂತ್ರದ ಸಮಸ್ಯೆ ದೂರವಾಗುತ್ತದೆ.

ಸೌತೆಕಾಯಿಯು ಮುಖದಲ್ಲಿನ ಕಪ್ಪು ಕಲೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ

ಹೆಣ್ಣು ಮಕ್ಕಳಿಗೆ ಸೌಂದರ್ಯ ಹೆಚ್ಚಿಸಿಕೊಳ್ಳೊದೆಂದರೆ ತುಂಬಾ ಇಷ್ಟ. ಆದ್ದರಿಂದ ಅವರು ರಾಸಾಯನಿಕವಾದ ಕ್ರೀಮುಗಳನ್ನು ಬಳಸುತ್ತಾರೆ. ಅದರ ಬದಲು ಮನೆಯಲ್ಲಿಯೇ ಸಿಗುವ ನೈಸರ್ಗಿಕವಾದ ವಸ್ತುಗಳನ್ನು ಬಳಸಿದರೆ ಉತ್ತಮ. ಸೌತೆಕಾಯಿಯ ಪೆಸ್ಟ್ ತಯಾರಿಸಿಕೂಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಹಳೆಯ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಜೊತೆಗೆ ಮುಖದ ಚರ್ಮ ಸುಕ್ಕುಗಟ್ಟಿದ್ದರೆ ನಿಧಾನವಾಗಿ ನಯವಾಗುತ್ತದೆ.

ಕಣ್ಣನ್ನು ತಂಪಾಗಿಸಲು ಸೌತೆಕಾಯಿಯ ಬಳಕೆ

ಕಣ್ಣು ಉರಿಯಾದಾಗ ಸೌತೆಕಾಯಿಯನ್ನು ವ್ರತ್ತಾಕಾರವಾಗಿ ಕತ್ತರಿಸಿಕೊಂಡು ಕಣ್ಣಿನ ಮೇಲೆ ಅರ್ಧ ಗಂಟೆಗಳ ಕಾಲ ಇಟ್ಪುಕೊಳ್ಳುವುದರಿಂದ ಕಣ್ಣು ತಂಪಾಗುತ್ತದೆ. ಹಾಗೂ ಮುಖ್ಯವಾಗಿ ಇದರಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗಿದ್ದರೆ ಅದು ಕೂಡ ಕಡಿಮೆಯಾಗುತ್ತದೆ.

ಸೌತೆಕಾಯಿಯು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ

ತಾಜಾ ಸೌತೆಕಾಯಿಯನ್ನು, ನಾವು ಸಿಪ್ಪೆ ಸಮೆತವಾಗಿ ಬಳಸುವುದರಿಂದ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ದೇಹದ ತೂಕ ನಿಯಂತ್ರಿಸಲು ಸೌತೆಕಾಯಿ ಸಹಕಾರಿಯಾಗಿದೆ

ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಾಂಶವಿದೆ. ಹಾಗೂ ಇದು ಕಡಿಮೆ ಕ್ಯಾಲೊರಿಯನ್ನು ಹೊಂದಿರುವ ತರಕಾರಿಯಾಗಿದೆ. ಆದ್ದರಿಂದ ಸೌತೆಕಾಯಿಯ ಬಳಕೆ ಹೆಚ್ಚಿಸುವುದರಿಂದ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಸೌತೆಕಾಯಿಯು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ.

ಮಧುಮೇಹ ರೋಗಿಗಳಿಗೆ ಸೌತೆಕಾಯಿಯು ಉತ್ತಮವಾದ ತರಕಾರಿಯಾಗಿದೆ, ಏಕೆಂದರೆ ಸೌತೆಕಾಯಿಯು ದೇಹದಲ್ಲಿ ಇನ್ಸುಲಿನ್ ಉತ್ಪಾದಿಸಲು ಮೇದೋಜೀರಕ ಗ್ರಂಥಿಗಳಿಗೆ ಸಹಾಯ ಮಾಡುತ್ತದೆ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಚಳಿಗಾಲದ ಒಣ ಚರ್ಮಕ್ಕೆ ಸೌತೆಕಾಯಿ ಮನೆಮದ್ದಾಗಿದೆ

ಚಳಿಗಾಲದಲ್ಲಿ ವಿಪರೀತವಾದ ಚಳಿಗೆ ಮೈ ಕೈ ಒಡೆಯುತ್ತದೆ ಮತ್ತು ಮುಖದ ಚರ್ಮವು ಒಣಗಿದಂತಾಗುತ್ತದೆ, ಇದನ್ನು ಹೋಗಲಾಡಿಸಲು ಸೌತೆಕಾಯಿಯ ರಸವನ್ನು ಒಣಗಿದ ಚರ್ಮದ ಭಾಗಕ್ಕೆ ಲೇಪಿಸುವುದರಿಂದ ಚರ್ಮವು ತಂಪಾಗಿ ಒಣಗುವುದು ಕಡಿಮೆಯಾಗುತ್ತದೆ.


Share this with your friends...

1 thought on “ಸೌತೆಕಾಯಿಯ ಔಷಧಿ ಗುಣಗಳು (Cucumber)”

Leave a Comment

Your email address will not be published. Required fields are marked *