ಸೈನೋಡನ್ ಡ್ಯಾಕ್ಟಿಲಾನ್ (Cynodon dactylon) ಎಂಬ ವೈಜ್ಞಾನಿಕ ಹೆಸರಿನ ಇದು ಬಹುವಾರ್ಷಿಕ ಹುಲ್ಲು ಜಾತಿಯ ಸಸ್ಯವಾಗಿದೆ. ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ. ಇದು ಹಳ್ಳಿಗಳಲ್ಲಿ ಗದ್ದೆ, ತೋಟ, ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡುರುತ್ತವೆ. ಈ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕವಾಗಿದೆ.
ಇದರ ಎಲೆಗಳು ಉದ್ದವಾಗಿದ್ದು, ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತ ಹೋಗುತ್ತವೆ. ಗರಿಕೆ ಹುಲ್ಲು ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು, ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ. ಹಸಿರು ರಕ್ತ ಎಂದು ಕರೆಯಲ್ಪಡುವ ಇದು, ನಮ್ಮ ರಕ್ತದಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಗರಿಕೆ ಹುಲ್ಲು ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ
ರಕ್ತದಲ್ಲಿ ಕೊಲೆಸ್ರ್ಟಾಲ್ ಪ್ರಮಾಣ ಕಡಿಮೆಮಾಡಲು, ಸುಮಾರು ಗರಿಕೆ ಹುಲ್ಲನ್ನು ತೆಗೆದುಕೊಂಡು, ಅದಕ್ಕೆ ಸಲ್ಪ ನೀರು ಬೆರಸಿ, ಮಿಕ್ಸಿಗೆ ಹಾಕಿ ರುಬ್ಬಿ, ನಂತರ ರಸವನ್ನು ಸೋಸಿಕೊಂಡು ಕುಡಿಯಬೇಕು. ಹೀಗೆ 1 ತಿಂಗಳ ಕಾಲ ಮಾಡಿದರೆ, ರಕ್ತ ಶುದ್ಧಿಗೊಂಡು, ರೋಗಗಳು ನಿವಾರಣೆಯಾಗುತ್ತವೆ.
ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ
ತಾಯಿಯ ಎದೆ ಹಾಲಿನ ಪ್ರಮಾಣ ಕಡಿಮೆಯಾದಾಗ, ಮಗುವಿಗೆ 1 ಚಮಚ ಗರಿಕೆ ಹುಲ್ಲಿನ ರಸದ ಜೊತೆ ಜೇನು ತುಪ್ಪ ಬೆರಸಿ ಕೊಡುವುದರಿಂದ, ಮಗುವು ದಷ್ಟಪುಷ್ಟವಾಗಿ ಬೆಳೆಯುತ್ತದೆ.
ಬಿದ್ದ ಗಾಯದಿಂದ ರಕ್ತ ಸೋರುವುದನ್ನು ಗರಿಕೆ ಹುಲ್ಲಿನಿಂದ ತಡೆಯಬಹುದು
ಗರಿಕೆ ಹುಲ್ಲನ್ನು ನೀರಿನಲ್ಲಿ ತೊಳೆದು, ನುಣುಪಾಗಿ ಅರೆದು, ಅದರ ರಸವನ್ನು ಅಥವಾ ನುಣುಪಾದ ಹುಲ್ಲನ್ನು ಬಿದ್ದ ಗಾಯಕ್ಕೆ ಹಚ್ಚುವುದರಿಂದ, ರಕ್ತ ಸ್ರಾವವನ್ನು ತಡೆಯಬಹುದು.
ಉಗುರು ಸುತ್ತನ್ನು ಕಡಿಮೆ ಮಾಡಲು ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ
ಗರಿಕೆ ಹುಲ್ಲನ್ನು ಚೆನ್ನಾಗಿ ಅರೆದು, ಅದಕ್ಕೆ ಅರಿಶಿಣ ಮತ್ತು ಸುಣ್ಣವನ್ನು ಸೇರಿಸಿ, ಉಗುರು ಸುತ್ತಿಗೆ ಹಚ್ಚುವುದರಿಂದ, ಅದು ಕಡಿಮೆಯಾಗುತ್ತದ
ಶೀತ ಕಡಿಮೆ ಮಾಡಲು, ಗರಿಕೆ ಹುಲ್ಲು ಸಹಕಾರಿಯಾಗಿದೆ
ಸ್ವಲ್ಪ ತುಳಸಿ ಮತ್ತು ಸ್ವಲ್ಪ ಗರಿಕೆ ಹುಲ್ಲನ್ನು ನೀರಿಗೆ ಹಾಕಿ, ರಾತ್ರೆ ಕುದಿಸಿಡಬೇಕು. ನಂತರ ಬೆಳಿಗ್ಗೆ ನೀರನ್ನು ಸೊಸಿ ಕುಡಿಯಬೇಕು. ಹೀಗೆ 3 ದಿನಗಳ ಕಾಲ ಕುಡಿಯುವುದರಿಂದ ಶೀತ ಕಡಿಮೆಯಾಗುವುದು.
ಸಾಮಾನ್ಯ ಜ್ವರ ಕಡಿಮೆ ಮಾಡಲು ಗರಿಕೆಹುಲ್ಲು ಉಪಯುಕ್ತವಾಗಿದೆ
ಗರಿಕೆ ಹುಲ್ಲು, ತುಳಸಿ ಮತ್ತು ಒಂದೆಲಗವನ್ನು, ಬೇರು ಸಮೇತವಾಗಿ ನೀರಿಗೆ ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಸ್ವಲ್ಪ ಬೆಲ್ಲ ಸೇರಿಸಿ, 2-3 ದಿನಗಳ ಕಾಲ ಕುಡಿಯುವುದರಿಂದ ಒಳ ಜ್ವರಗಳು ಕಡಿಮೆಯಾಗುತ್ತವೆ.
ಮೈಕೈ ನೋವಿಗೆ ಗರಿಕೆ ಹುಲ್ಲು ಉಪಯುಕ್ತ
ಪ್ರತಿದಿನ ಬಿಸಿ ನೀರಿಗೆ ಗರಿಕೆ ಹುಲ್ಲನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ, ಮೈಕೈ ನೋವು ಕಡಿಮೆಯಾಗುವುದು.
ಅಸ್ತಮಾ, ಅಲರ್ಜಿಗಳಂತಹ ರೋಗಗಳ ನಿವಾರಣೆಗೆ ಗರಿಕೆ ಹುಲ್ಲನ್ನು ಉಪಯೋಗಿಸುತ್ತಾರೆ
ಗರಿಕೆ ಹುಲ್ಲಿನ ರಸವನ್ನು, ಬೆಳಿಗ್ಗೆ ಖಾಲಿ ಹೊಟ್ಟೆಗೆ 2-3 ಚಮಚ ಸೇವಿಸುವುದರಿಂದ ಅಸ್ತಮಾ , ಅಲರ್ಜಿಗಳಂತಹ ರೋಗಗಳನ್ನು ನಿಯಂತ್ರಿಸಬಹುದು.
ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ.
ನೀವು ನಮ್ಮ ವೆಬ್ಸೈಟ್ ನ್ನು follow ಮಾಡುವುದರಿಂದ ನಾವು ಪಬ್ಲಿಶ್ ಮಾಡುವ ಎಲ್ ಆರ್ಟಿಕಲ್ ಗಳ ನೋಟಿಫಿಕೇಶನ್ ಗಳು ಕೂಡ ನಿಮ್ಮ್ ಮೊಬೈಲ್ ಗೆ ಬರುತ್ತವೆ
ವಿವಿಧ ರೀತಿಯ ಅಲರ್ಜಿಗಳಿಗೆ ತುಂಬಾ ಅನುಕೂಲಕರ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮೂತ್ರಕೋಶದ ತೊಂದರೆಗಳಿಗೆ ತುಂಬಾ ಒಳ್ಳೆಯದು.
ಗರಿಕೆ ಹುಲ್ಲನ್ನು ಉಪಯೋಗಿಸುವುದರಿಂದ, ಸ್ತ್ರೀಯರ ಮಾಸಿಕ ತೊಂದರೆಗಳಿಗೆ ತುಂಬಾ ಸಹಕಾರಿಯಾಗಿದೆ. ಮತ್ತು ಹೃದಯ ರೋಗಗಳಿಗೆ ಸಹಕಾರಿಯಾಗಿದೆ.
ಎಸಿಡಿಟಿಯನ್ನು ಕಡಿಮೆಮಾಡುತ್ತದೆ.