ವೀಳ್ಯದೆಲೆಯ ಔಷಧಿ ಗುಣಗಳು (Betel Leaf)

Share this with your friends...

ವೀಳ್ಯದೆಲೆಯ ಔಷಧಿ ಗುಣಗಳು :ವೀಳ್ಯದೆಲೆಯು ಭಾರತೀಯರ ಸಂಸ್ಕ್ರತಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವ ವಸ್ತುವಾಗಿದೆ. ಇದರ ವೈಜ್ಞಾನಿಕ ಹೆಸರು ಪೈಪರ್ ಬಿಟಲ್. ವೀಳ್ಯದೆಲೆಯು ತುಂಬಾ ವರ್ಷಗಳಿಂದ ಪರಿಚಯವಿರುವ ಗಿಡಮೂಲಿಕೆಯಾಗಿದ್ದು, ಔಷಧಿಯ ಆಗರವಾಗಿದೆ. ವೀಳ್ಯದೆಲೆಯನ್ನು ನಾವು ಮನೆಮದ್ದಾಗಿ ಉಪಯೋಗಿಸುತ್ತೇವೆ. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ನಮ್ಮ ಭಾರತದಲ್ಲಿ ಪೂಜೆಗಳಿಗೆ ಮಹತ್ವದ ಪಾತ್ರವಿದ್ದು, ದೇವರಿಗೆ ವೀಳ್ಯದೆಲೆ ಮತ್ತು ಅಡಿಕೆ ಇಟ್ಟು ಪೂಜಿಸುತ್ತಾರೆ. ಮದುವೆ ಸಮಾರಂಭಗಳಲ್ಲಿ ವೀಳ್ಯದೆಲೆಯನ್ನು ಎಲ್ಲರಿಗೂ ನೀಡಿ, ವೀಳ್ಯೇ ದಿನವೆಂದು ಸಂಭ್ರಮಿಸುತ್ತಾರೆ. ಉಡುಗೊರೆ ಸಮಯದಲ್ಲಿ, ಬಾಗೀನ ಕೊಡುವಾಗಲೂ ವೀಲ್ಯೆದೆಯನ್ನು ಉಪಯೋಗಿಸುತ್ತಾರೆ.

ಅತಿಥಿ ಸತ್ಕಾರದ ಸಮಯದಲ್ಲಿ ಊಟದ ಬಳಿಕ ನೀಡುವ ಹಣ್ಣು ಹಂಪಲಿನ ಜೊತೆಗೆ ನೀಡುವ ತಾಂಬೂಲದಲ್ಲೂ ವೀಳ್ಯದೆಲೆಯನ್ನೇ  ಉಪಯೋಗಿಸುವುದು ಎಲ್ಲರಿಗೂ ತಿಳಿದಿರುವಂತಹ ವಿಷಯವೇ ಆಗಿದೆ. ವೀಳ್ಯದೆಲೆಯನ್ನು ತಿನ್ನುವುದರಿಂದ ಹಲವು ರೋಗಗಳು ನಿವಾರಣೆಯಾಗುತ್ತವೆ. ವೀಳ್ಯದೆಲೆಯ ಬಣ್ಣವು ಅಚ್ಚು ಹಸಿರು ಬಣ್ಣದಲ್ಲಿದ್ದು, ಆಕಾರವು ಹೃದಯಾಕಾರವಾಗಿರುತ್ತದೆ. ಇದು ಬಳ್ಳಿಯಾಗಿ ಹಬ್ಬುತ್ತದೆ. ಇದನ್ನು ಅಡಿಕೆಯ ತೋಟದಲ್ಲಿ ಅಡಿಕೆ ಮರಕ್ಕೆ ಹಬ್ಬಿಸುತ್ತಾರೆ. ವೀಳ್ಯದೆಯಲ್ಲಿರುವ ಔಷಧಿ ಗುಣಗಳು ಕ್ಯಾನ್ಸರ್ ಬರದಂತೆ ತಡೆಯಲು ಸಹಾಯ ಮಾಡುತ್ತದೆ.

ವಸಡುಗಳ ರಕ್ತ ಸ್ರಾವವನ್ನು ವೀಳ್ಯದೆಲೆ ತಡೆಯುತ್ತದೆ.

ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆಯು ತುಂಬಾ ಸಹಕಾರಿಯಾಗಿದೆ. ಇದರ ಸೇವನೆಯಿಂದ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು. ಅದಕ್ಕಾಗಿ ಊಟದ ಬಳಿಕ ಕೆಲವರು ವೀಳ್ಯದೆಲೆಯನ್ನು ತಿನ್ನುವ ರೂಢಿ ಇಟ್ಟುಕೊಂಡಿರುತ್ತಾರೆ. ವಸಡುಗಳಲ್ಲಿ ಉಂಟಾಗುವ ರಕ್ತಸ್ರಾವವನ್ನು ತಡೆಯಲು ವೀಳ್ಯದೆಲೆಯನ್ನು ಬಾಡಿಸಿ, ಅದನ್ನು ಅರೆದು, ಅದರ ಮಿಶ್ರಣವನ್ನು ರಕ್ತಸ್ರಾವವಾದ ವಸಡಿನ ಜಾಗಕ್ಕೆ ಲೇಪಿಸಬೇಕು. ಇದನ್ನು ರಾತ್ರೆ ಮಲಗುವ ವೇಳೆ ಮಾಡುವುದು ಉತ್ತಮ.

ಮಲಬದ್ಧತೆ ನಿವಾರಣೆಗಾಗಿ ವೀಳ್ಯದೆಲೆ

ವೀಳ್ಯದೆಲೆಯ ಸೇವನೆಯಿಂದ ಮಲ ವಿಸರ್ಜನೆಯನ್ನು ಸುಲಭವಾಗಿಸುವುದರ ಮೂಲಕ ಮಲಬದ್ದತೆಯನ್ನು ತಡೆಯಬಹುದು.

ಉರಿಯೂತದಿಂದ ರಕ್ಷಣೆಗಾಗಿ ವೀಳ್ಯದೆಲೆ ಉಪಯುಕ್ತ

ಉರಿಯೂತದಿಂದ ಉಂಟಾದ ನೋವಿಗೆ ವೀಳ್ಯದೆಲೆ ಮತ್ತು ಕಾಳು ಮೆಣಸನ್ನು ನಯವಾಗಿ ಅರೆದು ಹಚ್ಚಿಕೊಳ್ಳುವುದರಿಂದ, ಬಾವು ಹಾಗು ಉರಿಯಿಂದ ಮುಕ್ತಿ ಪಡೆಯಬಹುದು.

ಕೆಮ್ಮಿನ ಸಮಸ್ಯೆಗೆ ವೀಳ್ಯದೆಲೆ ಸಹಾಯಕ

ಇದು ಕೆಮ್ಮಿನ ಸಮಸ್ಯೆ ಮತ್ತು ಉಸಿರಾಟದ ತೊಂದರೆಗೂ ಕೂಡ ಒಂದು ಒಳ್ಳೆಯ ಮನೆ ಮದ್ದಾಗಿದ್ದು, ಪ್ರತಿ ದಿನ ವೀಳ್ಯದೆಲೆಯನ್ನು ಸೇವಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ವೀಳ್ಯದೆಲೆಯಿಂದ ಮಧುಮೇಹ ನಿಯಂತ್ರಣ

ವೀಳ್ಯದೆಲೆಯಲ್ಲಿ ಟ್ರೈವೇಲೆಂಟ್ ಕ್ರೋಮಿಯಂ ಎನ್ನುವ ರಾಸಾಯನಿಕವು ಇದ್ದು, ಅದು ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗಿದೆ. ಇದರಿಂದ ಮದುಮೇಹ ರೋಗವನ್ನು ನಿಯಂತ್ರಿಸಬಹುದು.

ಜೀರ್ಣ ಕ್ರಿಯೆಗೆ ವೀಳ್ಯದೆಲೆ ಸಹಕಾರಿ

ವೀಳ್ಯದೆಲೆಯನ್ನು ಪ್ರತಿದಿನ ಊಟವಾಡಬಳಿಕ ಬಳಸುವುದರಿಂದ ಅಜೀರ್ಣವಾಗುವುದನ್ನು ಹೋಗಲಾಡಿಸಬಹುದು.

ಗಾಯಗಳಿಗೆ ಪರಿಹಾರವಾಗಿ ವೀಳ್ಯದೆಲೆ

ಬಿದ್ದು, ತೆರಚಿದ ಅಥವಾ ಕೊಯ್ದ ಗಾಯಗಳಾದಾಗ ರಕ್ತ ಸೋರುವುದನ್ನು ತಡೆಯಲು, ವೀಳ್ಯದೆಲೆಯನ್ನು ಜಗಿದು, ಗಾಯದ ಮೇಲೆ ಇಟ್ಟು, ಒತ್ತಿಹಿಡಿಯುವುದರಿಂದ ಗಾಯದಿಂದ ಸೋರುವ ರಕ್ತ ಕಡಿಮೆಯಾಗಿ, ನೋವು ಕೂಡ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆಯೆ 2-3 ದಿನಗಳ ಕಾಲ ವೀಳ್ಯದೆಲೆಯನ್ನು ಅರೆದು, ಗಾಯಕ್ಕೆ ಹಾಕಿ ಕಟ್ಟುವುದರಿಂದ ದಿನೇ ದಿನೇ ಗಾಯ ವಾಸಿಯಾಗುತ್ತ ಹೋಗುತ್ತದೆ.

ವೀಳ್ಯದೆಲೆಯಿಂದ ತಲೆ ನೋವು ನಿವಾರಣೆ

ತಲೆ ನೋವು ಬಂದಾಗ ವೀಳ್ಯದೆಯನ್ನ ಅರೆದು, ನೋವಿನ ಭಾಗಕ್ಕೆ ಹಚ್ಚುವುದರಿಂದ, ತಂಪಾಗಿ, ತಲೆಯ ನೋವು ನಿವಾರಣೆಯಾಗುತ್ತದೆ.

ವೀಳ್ಯದೆಲೆಯಿಂದ ಮೊಡವೆಗಳನ್ನು ಹೋಗಲಾಡಿಸಬಹುದು

ಮೊಡವೆಗಳ ನಿವಾರಣೆಯಲ್ಲಿ ಕೂಡ ವೀಳ್ಯದೆಲೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾತ್ರೆ ಮಲಗುವಾಗ ವೀಳ್ಯದೆಲೆಯನ್ನು ಅರೆದು ಮೊಡವೆಗಳಾದ ಜಾಗದಲ್ಲಿ ಹಚ್ಚುವುದರಿಂದ, ಮೊಡವೆಗಳಿಂದ ಉಂಟಾದ ನೋವು ಕಡಿಯಾಗುವುದರ ಜೊತೆಗೆ, ಮೊಡವೆಗಳು ಕೂಡ ಕಡಿಮೆಯಾಗುತ್ತವೆ.

ವೀಳ್ಯದೆಲೆಯು ನರ ದೌರ್ಬಲ್ಯಕ್ಕೆ ಉತ್ತಮ ಔಷಧಿಯಾಗಿದೆ.

2 ಚಮಚ ವೀಳ್ಯದೆಲೆಯ ರಸವನ್ನು, 2 ಚಮಚ ಜೇನು ತುಪ್ಪದೊಂದಿಗೆ ಸೇರಿಸಿ ಕುಡಿದರೆ, ನರದಲ್ಲಿ ಶಕ್ತಿ ಬರುತ್ತದೆ.

ವೀಳ್ಯದೆಲೆಯು ನೋವು ನಿವಾರಕವೂ ಆಗಿದೆ.

ತೆಂಗಿನ ಎಣ್ಣೆಯನ್ನು ಬಿಸಿಮಾಡಿ, ಅದಕ್ಕೆ ವೀಳ್ಯದೆಲೆಯ ರಸವನ್ನು ಸೇರಿಸಿ, ನೋವಿರುವ ಜಾಗಕ್ಕೆ ಹಚ್ಚಿ, ಶಾಖ ಕೊಡುವುದರಿಂದ ನೋವು ಶಮನವಾಗುತ್ತದೆ.

ಮೂತ್ರ ವಿಸರ್ಜನೆಗೆ ತೊಂದರೆಯಾದಾಗ ವೀಳ್ಯದೆಲೆಯ ಬಳಕೆ

ವೀಳ್ಯದೆಲೆಯ ರಸವನ್ನು, ಹಾಲಿನೊಂದಿಗೆ ಬೆರೆಸಿ ಸೇವಿಸಿದಾಗ ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತವೆ.


Share this with your friends...

Leave a Comment

Your email address will not be published. Required fields are marked *