ದೊಡ್ಡ ಪತ್ರೆಯ ಔಷಧಿ ಗುಣಗಳು (Mexican Mint Plant)

Share this with your friends...

ದೊಡ್ಡ ಪತ್ರೆಯ ಔಷಧಿ ಗುಣಗಳು: ದೊಡ್ಡ ಗುಣಗಳನ್ನು ಹೊಂದಿರುವ ದೊಡ್ಡ ಪತ್ರೆ, ಇದನ್ನು ಸಾಂಬಾರ ಸೊಪ್ಪು ಎಂದು ಕರೆಯುತ್ತಾರೆ. ಇದನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಎಲೆಗಳು ಅಚ್ಚು ಹಸಿರು ಬಣ್ಣದಲ್ಲಿದ್ದು ದಪ್ಪವಾಗಿರುತ್ತವೆ. ಹಾಗು ಕಡು ಸುವಾಸನೆಯನ್ನು ಹೊಂದಿರುತ್ತದೆ. ದೊಡ್ಡ ಪತ್ರೆಯ ಗಿಡವು ಮೃದುವಾಗಿದ್ದು, ರೆಂಬೆ ಮತ್ತು ಹೂವುಗಳು ಚಿಕ್ಕದಾಗಿರುತ್ತವೆ. ಇದನ್ನು ಆಹಾರ ಪದಾರ್ಥಗಳಲ್ಲಿ ತಂಬುಳಿ, ಗೊಜ್ಜು, ಚಟ್ನಿ, ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ.

ಇದರ ವೈಜ್ಞಾನಿಕ ಹೆಸರು (Plectranthus amboinicus) ಆಗಿದೆ. ದೊಡ್ಡಪಾತ್ರೆಯನ್ನು ಸುಲಭವಾಗಿ ಮನೆಯಂಗಳದಲ್ಲಿ ಬೆಳೆಯಬಹುದಾಗಿದೆ. ಇದರ ಬಳಕೆಯಿಂದ ಅನೇಕ ರೋಗಗಳನ್ನು ನಿವಾರಿಸಬಹುದು.

ದೊಡ್ಡ ಪತ್ರೆಯ ಔಷಧಿ ಗುಣಗಳು

ದೊಡ್ಡ ಪತ್ರೆಯಿಂದ ಜ್ವರ, ಶೀತ, ಕೆಮ್ಮು, ಗಂಟಲು ನೋವುಗಳ ನಿವಾರಣೆ.

ದೊಡ್ಡಪತ್ರೆಯು ಕಫ ಕರಗಿಸುವ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಬಿಸಿ ಮಾಡಿ, ಅದರ ರಸವನ್ನು ತೆಗೆದು, ಜೇನು ತುಪ್ಪದೊಡನೆ ಸೇವಿಸಿದರೆ, ಜ್ವರ, ಶೀತ, ಕೆಮ್ಮು, ಗಂಟಲು ನೋವುಗಳು ನಿವಾರಣೆಯಾಗುತ್ತವೆ.

ಮಕ್ಕಳಿಗೆ ಜ್ವರ ಬಂದಾಗ, ದೊಡ್ಡಪಾತ್ರೆಯ ಎಲೆಯನ್ನು ಸ್ವಲ್ಪ ಬಾಡಿಸಿ, ನೆತ್ತಿಯ ಮೇಲೆ ಇತ್ತು ಕಟ್ಟಿ ಮಲಗಿಸಿದರೆ, ಜ್ವರ ಕಡಿಮೆಯಾಗುತ್ತದೆ.

ಚಿಕ್ಕ ಮಕ್ಕಳಲ್ಲಿ ಕಫ ನಿವಾರಣೆಗೆ ದೊಡ್ಡಪತ್ರೆ

ಚಿಕ್ಕ ಮಕ್ಕಳಲ್ಲಿ ಕಫ ದ ಪ್ರಮಾಣಕಡಿಮೆ ಮಾಡಲು, ದೊಡ್ಡಪತ್ರೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ, ರಸ ತೆಗೆದು, ಅದನ್ನು ಜೇನು ತುಪ್ಪದಲ್ಲಿ ಸೇರಿಸಿ, ಕುಡಿಸುವುದರಿಂದ ಕಫ ವಾಂತಿ ಅಥವಾ ಭೇದಿಯ ಮೂಲಕ ಹೊರ ಹೋಗುತ್ತದೆ.

ಹಳದಿ ಕಾಮಾಲೆಗೆ ದೊಡ್ಡಪತ್ರೆಯ ಉಪಯೋಗ ( Jaundice)

ದೊಡ್ಡಪತ್ರೆ ಎಲೆಯ ರಸ ತೆಗೆದು ಒಂದು ವಾರದ ವರೆಗೆ ಪ್ರತಿದಿನ ಸೇವಿಸುವುದರಿಂದ ಹಳದಿ ಕಾಮಾಲೆ ರೋಗ
ಕಡಿಮೆಯಾಗುತ್ತದೆ.

ಅಜೀರ್ಣ ಸಮಸ್ಯೆಗೆ ದೊಡ್ಡ ಪತ್ರೆಯಿಂದ ಪರಿಹಾರ.

ದೊಡ್ಡ ಪತ್ರೆಯ ಹಸಿ ಎಲೆಯ ಜೊತೆ, ಉಪ್ಪು ಸೇರಿಸಿ, ಜಗಿದು ತಿನ್ನುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು.

ದೊಡ್ಡ ಪತ್ರೆ ಚರ್ಮದ ಮೇಲಿನ ಉರಿ ಕಡಿಮೆ ಮಾಡಲು ದೊಡ್ಡಪತ್ರೆಯ ಉಪಯೋಗ

ದೊಡ್ಡಪತ್ರೆಯ ಎಲೆಯನ್ನು ನೀರಿಗೆ ಹಾಕಿ ಕುದಿಸಬೇಕು, ನಂತರ ಅದಕ್ಕೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಹಾಕಿ, ಕಷಾಯ ತಯಾರಾದ ನಂತರ, ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ, ನಂತರ ಸೋಸಿಕೊಂಡು ಉಗುರುಬೆಚ್ಚಗಿರುವಾಗ ಕುಡಿಯಬೇಕು. ಇದರಿಂದ ಯಾವುದಾದರು ಆಹಾರದಿಂದ ಚರ್ಮದ ಮೇಲೆ ಉರಿ ಉಂಟಾಗುತ್ತಿದ್ದರೆ ಆ ಉರಿಯು ಕಡಿಮೆಯಾಗುತ್ತದೆ.

ದೊಡ್ಡಪತ್ರೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೊಡ್ಡ ಪತ್ರೆಯ ಎಲೆಯನ್ನು ಸೇವಿಸುವುದರಿಂದ ಅದರಲ್ಲಿರುವ ಅಸ್ಪಾರ್ಮಿಕ್ ಆಮ್ಲವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಸಿವು ಹೆಚ್ಚಿಸಲು ದೊಡ್ಡಪತ್ರೆಯು ಸಹಾಯಕ.

ದೊಡ್ಡ ಪತ್ರೆಯ ಎಲೆಯ ರಸವನ್ನು ತೆಗೆದು, ಅದಕ್ಕೆ ಹಸಿ ಶುಂಠಿಯ ರಸವನ್ನು ಸೇರಿಸಿ, ಸೇವಿಸುವುದರಿಂದ ಅದು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೊಡ್ಡ ಪತ್ರೆಯು ಚರ್ಮದ ಮೇಲಿನ ಗಂದೆ ಗಳನ್ನು ಕಡಿಮೆ ಮಾಡುತ್ತದೆ

ದೊಡ್ಡ ಪತ್ರೆಯ ಎಲೆಯ ರಸವನ್ನು ತೆಗೆದು, ಚರ್ಮದ ಮೇಲೆ ಲೇಪಿಸುವುದರಿಂದ, ಚರ್ಮದ ಮೇಲಿನ ಗಂದೆ ಮತ್ತು ತುರಿಕೆಗಳು
ನಿವಾರಣೆಯಾಗುತ್ತವೆ.

ಚಳಿಗಾಲದಲ್ಲಿ ಗಂಟು ನೋವುಗಳ ನಿವಾರಣೆಗೆ ದೊಡ್ಡಪತ್ರೆ ಸಹಾಯಕವಾಗಿದ.

ದೊಡ್ಡಪತ್ರೆಯಲ್ಲಿ ಗಾಮಾ ಲೆನೊಲೆನಿಕ್ ಆಮ್ಲವು ಇದ್ದು, ಗಂಟು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಳ್ಳೆಣ್ಣೆಯನ್ನು ಬಿಸಿಗಿರಿಸಿಕೊಂಡು, ಅದಕ್ಕೆ ದೊಡ್ಡ ಪಾತ್ರೆಯನ್ನು, ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಹಾಕಬೆಕ್ಕು. ತುಂಡುಗಳು, ಎಣ್ಣೆಯಲ್ಲಿ ಕತ್ತಿಹೋಗದಂತೆ ಮಂದ ಉರಿಯಲ್ಲಿ ಕಾಯಿಸಬೇಕು. ನಂತರ ಸೋಸಿ ಇಟ್ಟುಕೊಳ್ಳಬೇಕು. ಇದು ಅತ್ಯಂತ ಉಪಯುಕ್ತವಾಗಿದ್ದು ನೋವು ನಿವಾರಣೆಗೆ ತುಂಬಾ ಸಹಕಾರಿಯಾಗಿದೆ.

ದೊಡ್ಡಪತ್ರೆಯ ಎಲೆಯ ಪೇಸ್ಟ್ ಮಾಡಿ, ನೋವಿರುವ ಕಡೆ ಲೇಪಿಸುವುದರಿಂದ ನೋವು
ನಿವಾರಣೆಯಾಗುತ್ತದೆ.

ದೊಡ್ಡಪತ್ರೆಯು ಕಣ್ಣಿನ ಉರಿಯನ್ನು ಕಡಿಮೆ ಮಾಡುತ್ತದೆ.

ದೊಡ್ಡ ಪತ್ರೆ ಎಲೆಯ ರಸ ತೆಗೆದು, ಸಮ ಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ, ಪ್ರತಿನಿತ್ಯ ತಲೆಗೆ ಹಾಕುವುದರಿಂದ ತಲೆ ತಂಪಾಗಿ,ಕಣ್ಣುರಿ
ಕಡಿಮೆಯಾಗುತ್ತದೆ.

ಮೂಗು ಕಟ್ಟಿದ್ದರೆ ದೊಡ್ಡಪತ್ರೆಯಿಂದ ಪರಿಹಾರ

ನೆಗಡಿಯಾದಾಗ ಮೂಗು ಕಟ್ಟಿಕೊಂಡರೆ, ದೊಡ್ಡ ಪತ್ರೆಯ ಎಲೆಯನ್ನು ಮುರಿದಾಗ, ಬರುವ ಸುವಾಸನೆಯನ್ನ ಮೂಗಿನೊಳಕ್ಕೆಳೆದುಕೊಳ್ಳುವುದರಿಂದ ತಕ್ಷಣ ಕಟ್ಟಿಕೊಂಡ ಮೂಗು ಸರಿಯಾಗುತ್ತದೆ.


Share this with your friends...

Leave a Comment

Your email address will not be published. Required fields are marked *