ಕಾಮಕಸ್ತೂರಿ ಗಿಡವು ತುಳಸಿಯನ್ನು ಹೋಲುತ್ತದೆ. ಇದನ್ನು ಮನೆಯಂಗಳದಲ್ಲಿ ಮತ್ತು ತೋಟಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಕಾಮಕಸ್ತೂರಿ ತುಂಬಾ ಸುವಾಸನೆಯನ್ನು ಹೊಂದಿರುತ್ತದೆ. ಇದರ ಬೀಜಗಳನ್ನು ಹೆಚ್ಚಾಗಿ ಬಳಸುತ್ತಾರೆ…
ಕಾಮಕಸ್ತೂರಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ಇದು ಕೂಡ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತದೆ. ಕಾಮಕಸ್ತೂರಿಯು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಮಕಸ್ತೂರಿಯು ಅನೇಕ ರೋಗಗಳಿಗೆ ಮನೆಮದ್ದಾಗಿದೆ. ಇದರ ಬೀಜಗಳು ಮಾರ್ಕೆಟ್ ನಲ್ಲೂ ಲಭ್ಯವಿರುತ್ತದೆ. ಕಾಮಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನಂಶವನ್ನು ಹೊಂದಿದೆ. ಕಾಮಕಸ್ತೂರಿಯ ವೈಜ್ಞಾನಿಕ ಹೆಸರು ಒಸಿಮಮ್ ಬೆಸಿಲಿಕಮ್ (Ocimum Bsilicum).
ದೇಹವನ್ನು ತಂಪಾಗಿರಿಸಲು ಕಾಮಕಸ್ತೂರಿಯು ಸಹಕಾರಿಯಾಗಿದೆ
ನಮಗೆ ಬೇಸಿಗೆಯಲ್ಲಿ ತುಂಬಾ ಉಷ್ಣತೆ ಆದಾಗ ನಾವು ನಮ್ಮ ದೇಹವನ್ನು ತಂಪಾಗಿರಿಸಲು ವಿವಿಧ ರಾಸಾಯನಿಕಗಳಿಂದ ತಯಾರಿಸಿದ ತಂಪು ಪಾನೀಯಗಳನ್ನು ಕುಡಿಯುವ ಬದಲು, ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆ ಹಾಕಿಕೊಂಡು ಕುಡಿಯುವುದರಿಂದ ದೇಹದ ಉಷ್ಣತೆಯು ನಿಯಂತ್ರಣದಲ್ಲಿರುತ್ತದೆ.
ಗಂಟಲು ಬೇನೆಗೆ ಕಾಮಕಸ್ತೂರಿ
ಕಾಮಕಸ್ತೂರಿ ತುಂಬಾ ಆರೋಗ್ಯಕಾರಿ ಸಸ್ಯ. ಕಾಮಕಸ್ತೂರಿಯ ಹಸಿ ಎಲೆಗಳನ್ನು ಅರೆದು, ಅದರಿಂದ ರಸವನ್ನು ತೆಗೆದು, ಸೋಸಿಕೊಂಡು ಆ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲು ಬೇನೆ ಗುಣಮುಖವಾಗುತ್ತದೆ.
ಮಲಬದ್ಧತೆಗೆ ಕಾಮ ಕಸ್ತೂರಿ ಉತ್ತಮ ಪರಿಹಾರವಾಗಿದೆ
ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿದರೆ, ಅದು ಚೆನ್ನಾಗಿ ನೆನೆದು, ಉಬ್ಬಿ ಲೋಳೆಯಂತಾದಾಗ, ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯ ಪುಡಿಯನ್ನು ಸೇರಿಸಿ, ಸೇವಿಸುವುದರಿಂದ ದೇಹ ತಂಪಾಗಿ, ಮಲಬದ್ಧತೆಯು ನಿವಾರಣೆಯಾಗುತ್ತದೆ.
ಕಾಮಕಸ್ತೂರಿಯು ಅಜೀರ್ಣವನ್ನು ಹೋಗಲಾಡಿಸುತ್ತದೆ
ಅಜೀರ್ಣದ ಸಮಸ್ಯೆ ಇಂದ ಬಳಲುತ್ತಿರುವವರು, ಮನೆಯಲ್ಲಿ ಕಾಮಕಸ್ತೂರಿ ಗಿಡ ಬೆಳೆಸಿದರೆ, ತುಂಬಾ ಪ್ರಯೋಜನವಿದೆ. ಕಾಮಕಸ್ತೂರಿಯ ಹೂವುಗಳನ್ನು ನೀರಿನಲ್ಲಿ ಅರೆದು, ನಂತರ ಅದನ್ನು ಶುದ್ಧವಾಗಿ ಸೋಸಿಕೊಂಡು, ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ, ಗಂಟೆಗೊಮ್ಮೆ 1/2 ಚಮಚ ರಸವನ್ನು ತೆಗುದುಕೊಳ್ಳುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ದೇಹದ ತೂಕ ಕಡಿಮೆ ಮಾಡುವಲ್ಲಿ ಕಾಮಕಸ್ತೂರಿ ಸಹಕಾರಿಯಾಗಿದೆ
ಈಗಿನ ದಿನಗಳಲ್ಲಿ ದೇಹದ ತೂಕ ಕಡಿಮೆ ಮಾಡಿಕೊಂಡು, ಫಿಟ್ ಆಗಿ ಇರುವ ಅಸೆ ಎಲ್ಲರಿಗೂ ಇರುತ್ತದೆ. ಆದರೆ ಈಗಿನ ಆಹಾರ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ, ಬೊಜ್ಜು ಬೆಳೆಯುತ್ತದೆ. ಪ್ರಾಕೃತಿಕವಾದ ಮನೆ ಮದ್ದುಗಳ ಬಳಕೆಯಿಂದ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟುಕೊಂಡು, ಪ್ರತಿ ದಿನ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಕಾಮಕಸ್ತೂರಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಾಮಕಸ್ತೂರಿಯು ಪ್ಲೈವನೋಯ್ಡ್ಸ್ ಅಂಶವನ್ನು ಹೊಂದಿದೆ. ಆದ್ದರಿಂದ ಕಾಮಕಸ್ತೂರಿ ಬೀಜವನ್ನು ನೆನೆಹಾಕಿ, ಹಾಲು ಮತ್ತು ಜೇನುತುಪ್ಪ ಸೇರಿಸಿ ತಂಪು ಪಾನೀಯದ ಹಾಗೆ ಉಪಯೋಗಿಸುವುದರಿಂದ, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ದೇಹದ ದುರ್ಗಂಧ ನಿವಾರಣೆಗೆ ಕಾಮಕಸ್ತೂರಿ
ದೇಹದ ತೂಕ ಹೆಚ್ಚಿದ್ದವರು ಹೆಚ್ಚು ಹೆಚ್ಚು ಬೆವರುವುದು ಸಾಮಾನ್ಯ. ಇದು ದೇಹದ ದುರ್ವಾಸನೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಜನರು ರಾಸಾಯನಿಕಯುಕ್ತ ಸುಗಂಧ ದ್ರವ್ಯಗಳನ್ನು, ಸ್ಪ್ರೆಯ್ ಗಳನ್ನೂ ಬಳಸುತ್ತಾರೆ. ಇದರಿಂದ ಚರ್ಮದ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತವೆ. ಅವುಗಳನ್ನು ಬಳಸುವುದರ ಬದಲು, ಕಾಮಕಸ್ತೂರಿ ಎಲೆಯ ರಸವನ್ನು ತೆಗೆದು, ದೇಹಕ್ಕೆ ಹಚ್ಚಿಕೊಂಡರೆ, ದೇಹದ ದುರ್ಗಂಧ ದೂರವಾಗುತ್ತದೆ. ಏಕೆಂದರೆ ಕಾಮಕಸ್ತೂರಿಯು ನೈಸರ್ಗಿಕವಾಗ ಸುವಾಸನೆಯನ್ನು ಹೊಂದಿರುತ್ತದೆ.
ಶೀತ, ಜ್ವರಕ್ಕೆ ಕಾಮಕಸ್ತೂರಿಯು ಪರಿಹಾರವಾಗಿದೆ
ಶೀತವಾಗಿ ಮೂಗಿನಿಂದ ನೀರು ಸುರಿಯುತ್ತಿದ್ದರೆ ಮತ್ತು ಜ್ವರ ಬರುತ್ತಿದ್ದರೆ, ಕಾಮಕಸ್ತೂರಿ ಎಲೆಗಳ ಕಷಾಯವನ್ನು ಮಾಡಿ, ಆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಕುಡಿಯುವುದರಿಂದ ಶೀತ, ಜ್ವರ ಗಳು ಕಡಿಮೆಯಾಗುತ್ತವೆ.
ರಕ್ತ ಭೇದಿ ನಿವಾರಣೆಗೆ ಕಾಮಕಸ್ತೂರಿ
ಕಾಮಕಸ್ತೂರಿ ಬೀಜಗಳನ್ನು ರಾತ್ರೆ ನೆನೆಹಾಕಿದರೆ ಅದು ಅಂಟು ಅಂಟಾಗಿ, ಲೋಳೆಯಂತೆ ಆಗಿರುತ್ತದೆ. ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತ ಭೇದಿ ನಿಧಾನವಾಗಿ ಕಡಿಮೆಯಾಗುತ್ತದೆ.
ತೆಲೆಯಲ್ಲಿನ ಹೇನು ಕಡಿಮೆ ಮಾಡಲು ಕಾಮಕಸ್ತೂರಿ ಉಪಯುಕ್ತ
ಕೆಲವರಿಗೆ ತಲೆಯಲ್ಲಿ ವಿಪರೀತ ಹೇನುಗಳಾಗಿರುತ್ತವೆ. ಇವುಗಳ ನಿವಾರಣೆಗೆ ಅನೇಕ ಬಗೆಯ ರಾಸಾಯನಿಕಗಳನ್ನು, ಶ್ಯಾಂಪೂ ಗಳನ್ನೂ, ಕಂಡಿಷನರ್ಗಳನ್ನೂ ಜನರು ಉಪಯೋಗಿಸುತ್ತಾರೆ. ಇದರಿಂದ ಕೂದವು ಉದುರುವಂತಹ ಅನೇಕ ಸಮಸ್ಯೆಗಳಾಗುತ್ತವೆ. ಮಾತ್ರವಲ್ಲದೆ ರಾಸಾಯನಿಕಗಳು ನಮ್ಮ ಚರ್ಮಕ್ಕೂ ಒಳ್ಳೆಯದಲ್ಲ. ಅದರ ಬದಲು, ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಹಾಗೆ ಪ್ರಾಕೃತಿಕ ವಸ್ತುಗಳನ್ನು ಉಪಯೋಗಿಸಿ, ಇಂತಹ ಸಮಸೆಗಳನ್ನು ಹೋಗಲಾಡಿಸಬಹುದು. ತುಂಬಾ ಹೇನು ಇದ್ದವರು ಕಾಮ ಕಸ್ತೂರಿಯ ಎಲೆಗಳನ್ನು, ತಲೆಗೆ ಮುಡಿದುಕೊಳ್ಳುವುದರಿಂದ ಹೇನುಗಳ ನಿವಾರಣೆಯಾಗುತ್ತದೆ.
ಸರ ಕಾಮಕಸ್ತೂರಿ ಬಿಜನೊ ಎಲೆ ನೊ?
Sfrdddddvgcvvvbbbbcxxccxxzsav ಸಾರ್ ಎಲ್ಲಿ ಶಿಗುತೆ ತಿಳಿಸಿ 9071880948
ಶಾಪಿಂಗ್ ಮಾಲ್ ಗಳಲ್ಲಿ ಸಿಗತ್ತೆ. ತುಂಬಾ ಪ್ಯೂರ್ ಬೇಕು ಅಂದ್ರೆ ಹಳ್ಳಿಗಳಲ್ಲಿ ಸಿಗತ್ತೆ