ಬಾಳೆ ಎಲೆಯ ಔಷಧಿ ಗುಣಗಳು (Banana Leaf)

Share this with your friends...

ಭಾರತೀಯ ಹಿಂದೂ ಸಂಪ್ರದಾಯಗಳಲ್ಲಿ ಧಾರ್ಮಿಕವಾಗಿ ಬಾಳೆ ಎಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಮ್ಮಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಮತ್ತು ಇನ್ನೂ ಕೆಲವು ಕಡೆಗಳಲ್ಲಿ ಆ ಸಂಪ್ರದಾಯ ಇನ್ನೂ ಇದೆ. ಆದರೆ ಈಗಿನ ದಿನಗಳಲ್ಲಿ ಬಾಳೆಯಲ್ಲಿ ಊಟ ಮಾಡುವ ಪದ್ಧತಿ ತುಂಬಾ ಕಡಿಮೆಯಾಗಿದೆ. ಶುಭ ಸಮಾರಂಭಗಳಲ್ಲಿ ಬಾಳೆ ಎಲೆಯ ಊಟಕ್ಕೆ ತುಂಬಾ ಮಹತ್ವವಿದೆ. ಕೆಲವು ಕಡೆ ಪ್ರತಿ ದಿನವೂ ಬಾಳೆ ಸಿಗದೇ ಇರುವಂತಹ ಸ್ಥಳಗಳಲ್ಲಿ ಹಬ್ಬದ ದಿನದಲ್ಲಂತೂ ಎಲ್ಲಿಂದಾದರೂ ಬಾಳೆಯನ್ನು ತಂದು ಊಟ ಮಾಡುವ ಪದ್ಧತಿ ಇನ್ನೂ ನಮ್ಮಲ್ಲಿದೆ. ಪೂಜೆ ಪುನಸ್ಕಾರಗಳಲ್ಲಂತೂ ಬಾಳೆ ಎಲೆಯ ಅವಶ್ಯಕತೆ ತುಂಬಾ ನೇ ಇದೆ. ದೇವರ ನೈವೇದ್ಯಕ್ಕಂತೂ ಬಾಳೆ ಎಲೆಯೇ ಬೇಕಾಗುತ್ತದೆ. ಮೊದಲಿಂದಲೂ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತಿರುವ ಈ ಬಾಳೆ ಎಲೆಗೆ ಎಷ್ಟೋ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಇದರ ಔಷಧಿ ಗುಣಗಳನ್ನು ಬಲ್ಲವರು ಮಾತ್ರ ಬಾಳೆ ಎಲೆಯಲ್ಲೇ ಯಾವಾಗಲೂ ಊಟ ಮಾಡಲು ಬಯಸುತ್ತಾರೆ. ಬಾಳೆ ಎಲೆಯ ವೈಜ್ಞಾನಿಕ ಹೆಸರು ಮ್ಯೂಸ ಅಕ್ಯುಮಿನಿಟಾ (Musa Acuminata).

ಬಾಳೆ ಇಂದ ನಮ್ಮಲ್ಲಿನ ಅನೇಕ ರೋಗಗಳ ನಿವಾರಣೆಯಾಗುತ್ತದೆ. ಬಾಳೆಯನ್ನು ಕೆಲವು ಅಡುಗೆ ಪದಾರ್ಥಗಳ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತದೆ. ಅದರಲ್ಲಿ ಬಾಳೆ ಎಲೆಯ ಕಡುಬು ತುಂಬಾ ಪ್ರಸಿದ್ಧವಾಗಿದೆ. ಬಾಳೆ ಎಲೆಯು ಹೆಚ್ಚು ತೇವಾಂಶವಿರುವ ಕಡೆ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ನಾವು ತೋಟ ಗದ್ದೆ ಗಳಲ್ಲಿ ಬಾಳೆಯನ್ನು ಹೆಚ್ಚಾಗಿ ಕಾಣಬಹುದು. ಬಾಳೆ ಗಿಡವನ್ನು ಗದ್ದೆ ತೋಟಗಳಲ್ಲಿ ಮಾತ್ರವಲ್ಲದೆ, ನಮ್ಮ ಮನೆಯ ಸುತ್ತಮತ್ತಲೂ ಸುಲಭವಾಗಿ ಬೆಳೆಯಬಹುದು. ಬಾಳೆ ಎಲೆಗೆ ಬ್ಯಾಕ್ಟಿರಿಯಾ ವನ್ನು ಹೊಡೆದೋಡಿಸುವ ಗುಣವಿದೆ. ಬಾಳೆ ಮರದ ಬೇರಿನಿಂದ ಹಿಡಿದು ಎಲೆಯ ವರೆಗೂ ಪ್ರತಿಯೊಂದು ಭಾಗವು ಔಷಧೀಯ ಗುಣಗಳನ್ನು ಹೊಂದಿದೆ.

ಬಾಳೆ ಎಲೆಯ ಔಷಧಿ ಗುಣಗಳು

ಬಾಳೆ ಎಲೆಯ ಔಷಧಿ ಗುಣಗಳ ಬಗ್ಗೆ ಹೇಳುವ ಮೊದಲು ನಾವು ಇಲ್ಲಿ ಹೇಳಲೇ ಬೇಕಾದ ಅತಿ ಮುಖ್ಯ ಸೂಚನೆಯೆಂದರೆ, ನಾವು ಇಲ್ಲಿ ಹೇಳುತ್ತಿರುವ ಬಾಳೆಯ ತಳಿಯು, ಪಕ್ಕಾ ದೇಸಿ ತಳಿಯ ಬಾಳೆ ಗಿಡದ ಬಗ್ಗೆ ಮಾತ್ರ. ಅದನ್ನು ಹೊರತುಪಡೆಸಿ ಇನ್ಯಾವುದೇ ಹೈಬ್ರಿಡ್ ತಳಿಯ ಬಗ್ಗೆ ಅಲ್ಲ. ಅದರಲ್ಲೂ ಇನ್ನು ಮಖ್ಯ ಅಂಶವೆಂದರೆ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಬೆಳೆಸಿದ ತಳಿ ಯೋಗ್ಯವಲ್ಲ. ಸಾವಯವ (Organic) ಆಗಿ ಬೆಳೆಸಿದ ತಳಿಯ ಬಾಳೆಯಾಗಿರಬೇಕು.

ಬಾಳೆ ಎಲೆಯಿಂದ ಜ್ವರ ನಿಯಂತ್ರಣ

ಬಾಳೆ ಎಲೆಯ ಕಷಾಯವನ್ನು ಮಾಡಿ ದಿನಕ್ಕೆ 1 ಬಾರಿ ಕುಡಿಯುವುದರಿಂದ ಜ್ವರವನ್ನು ನಿಯಂತ್ರಿಸಬಹುದು.

ಜೀರ್ಣಕ್ರಿಯೆಗೆ ಬಾಳೆ ಎಲೆ ಸಹಕಾರಿಯಾಗಿದೆ

ಬಾಳೆ ಎಲೆಯ ಮೇಲ್ಪದರದಲ್ಲಿ epigallocatechin gallate ಎಂಬ ಪಾಲಿಫೀನಾಲ್ ಅಂಶವಿರುತ್ತದೆ. ನಾವು ಬಿಸಿಯಾದ ಆಹಾರ ಪದಾರ್ಥಗಳನ್ನು ಬಾಳೆ ಎಲೆಯ ಮೇಲೆ ಹಾಕಿದಾಗ, ಇದು ಕರಗಿ ಆಹಾರದೊಂದಿಗೆ ಸೇರಿ ನಮ್ಮ ದೇಹಕ್ಕೆ ಹೋಗುತ್ತದೆ. ಇದರಿಂದ ನಮ್ಮಲ್ಲಿ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ರಕ್ತ ಭೇದಿಯ ನಿಯಂತ್ರಣಕ್ಕೆ ಬಾಳೆ ಎಲೆ

ನಾವು ಬಾಳೆ ಎಲೆಯು ತಾಜಾ ಇದ್ದಾಗ ಮಾತ್ರ ಉಪಯೋಗಕ್ಕೆ ಬರುತ್ತದೆ ಎಂದುಕೊಂಡರೆ ಅದು ತಪ್ಪು. ಒಣಗಿದ ಬಾಳೆ ಎಲೆಯ ಸೇವನೆಯು ರಕ್ತಸ್ರಾವವಾಗಿ ಭೇದಿ ಆಗುವುದನ್ನು ಕಡಿಮೆ ಮಾಡುತ್ತದೆ.

ಚರ್ಮದ ಸಮಸ್ಯೆಗೆ ಬಾಳೆಎಲೆ

ಬಾಳೆಎಲೆ ಚರ್ಮದ ಆರೋಗ್ಯದ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಚರ್ಮದಲ್ಲಿನ ಗಾಯಗಳನ್ನು, ತುರಿಕೆಗಳನ್ನು ಬಾಳೆ ಎಲೆಯು ಗುಣಪಡಿಸುತ್ತದೆ. ತಾಜಾ ಬಾಳೆ ಎಲೆಯನ್ನು ಜಜ್ಜಿ, ಅದನ್ನು ಗಾಯವಾದ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ದಿನಕ್ಕೆ ೩ ರಿಂದ ೪ ಬಾರಿ ಬಾಳೆ ಎಲೆ ಜಜ್ಜಿದ ಮಿಶ್ರಣವನ್ನು ಬದಲಾಯಿಸುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.

ಬಾಳೆ ಎಲೆಯಿಂದ ಹೊಟ್ಟಿನ ಸಮಸ್ಯೆ ನಿವಾರಣೆ

ತಾಜಾ ಬಾಳೆ ಎಲೆಯನ್ನು ಜಜ್ಜಿ, ಅದರಿಂದ ರಸ ತೆಗೆದು, ರಸವನ್ನು ಕೂದಲ ಬುಡಕ್ಕೆ ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ ತಲೆಗೆ
ಸ್ನಾನ ಮಾಡಬೇಕು. ಇದರಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆ ದೂರವಾಗಿ, ಆರೋಗ್ಯವಾದ ಕೂದಲು ಬೆಳೆಯಲು ಸಹಾಯಕವಾಗುತ್ತದೆ.

ಮಕ್ಕಳ ಸೂಕ್ಷ್ಮ ತ್ವಚೆಗೆ ಬಾಳೆ ಎಲೆಯಿಂದ ರಕ್ಷಣೆ

ಸಣ್ಣ ಮಕ್ಕಳ ಚರ್ಮ ತುಂಬಾ ಸೂಕ್ಷ್ಮ ವಾಗಿರುತ್ತದೆ. ಮಕ್ಕಳಿಗೆ ಸೊಳ್ಳೆಗಳು, ಅಥವಾ ಇನ್ಯಾವುದೇ ಹುಳ ಹಪ್ಪಟೆಗಳು ಕಡಿದರೆ ಸಣ್ಣ ಸಣ್ಣ ಗುಳ್ಳೆಗಳಾಗುವ ಸಾಧ್ಯತೆ ಇರುತ್ತದೆ. ಬಾಳೆ ಎಲೆಯ, ಎಳೆಯ ಕುಡಿಯ ರಸವನ್ನು ತೆಗೆದು, ಓಲಿವ್ ಎಣ್ಣೆ ಮತ್ತು ಸ್ವಲ್ಪ ಜೇನು ಮೇಣವನ್ನು ಸೇರಿಸಿ ಹಚ್ಚುವುದರಿಂದ ಚರ್ಮದ ಮೇಲಿನ ಗುಳ್ಳೆಗಳು ಕಡಿಮೆಯಾಗುತ್ತವೆ. (ನಿಮಗೇನಾದರೂ ಪ್ರಾಕೃತಿಕ ಜೇನಿನ ಉತ್ಪನ್ನಗಳು ಔಷಧಕ್ಕಾಗಿ ಬೇಕಾದಲ್ಲಿ ನಮಗೆ ಕಮೆಂಟ್ ಮಾಡಿರಿ.)

ಚಿಕ್ಕ ಮಕ್ಕಳಲ್ಲಿನ ಬಿಳಿ ಕೂದಲಿನ ಸಮಸ್ಯೆಗೆ ಬಾಳೆ ಎಲೆ

ಚಿಕ್ಕ ಮಕ್ಕಳಲ್ಲಿ ಪೋಷಕಾಂಶಗಳ ಕೊರತೆ ಇಂದ ಬಿಳಿ ಕೂದಲಿನ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಚಿಕ್ಕ ಮಕ್ಕಳಿರುವಾಗಲಿಂದಲೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಾ ಬಂದರೆ ಮುಂದೆ ಈ ಬಿಳಿ ಕೂದಲಿನ ಸಮಸ್ಯೆ ಕಾಣಿಸುವುದಿಲ್ಲ.

ಬಾಳೆ ಎಲೆಯಿಂದ ಸುಟ್ಟ ಗಾಯಗಳಿಗೆ ಪರಿಹಾರ

ಸುಟ್ಟ ಗಾಯಗಳಿಗೆ, ಬಾಳೆ ಎಲೆಯನ್ನು ಶುಂಠಿ ಎಣ್ಣೆಯಲ್ಲಿ ಸ್ವಲ್ಪ ಅದ್ದಿ, ಗಾಯದ ಮೇಲೆ ಬಟ್ಟೆ ಹಾಕಿ ಕಟ್ಟುವುದರಿಂದ ಸುಟ್ಟ ಗಾಯ ಬೇಗನೆ ವಾಸಿಯಾಗುತ್ತದೆ.

ಬಾಳೆ ಎಲೆಯು ಕ್ಯಾನ್ಸರ್ ರೋಗಕ್ಕೆ ಕಾರಣವಾದ ಜೈವಿಕ ರಾಸಾಯನಿಕವನ್ನು ಹೊಡೆದೋಡಿಸುತ್ತದೆ

ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಬಾಳೆ ಎಲೆಯಲ್ಲಿ ಯಾವುದೇ ಬಿಸಿ ಆಹಾರ ಬಡಿಸಿಕೊಂಡು ಹೊಟ್ಟೆಗೆ ಹೋಗುವ ಮೊದಲೇ ಆ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾದ ಪ್ರೀರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕವು ದೇಹ ಸೇರುವುದನ್ನು ತಡೆಯುತ್ತದೆ.

ಗರ್ಭಿಣಿಯರು ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಹುಟ್ಟುವು ಮಕ್ಕಳ ಅರೋಗ್ಯ ಚೆನ್ನಾಗಿರುತ್ತದೆ.

ಬಾಳೆ ಎಲೆಯನ್ನು ಉಪಯೋಗಿಸಿ ಸೂರ್ಯಸ್ನಾನದ ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ದೇಹವು ಆರೋಗ್ಯದಿಂದ ಇರುತ್ತದೆ.


Share this with your friends...

Leave a Comment

Your email address will not be published. Required fields are marked *