ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach)

Share this with your friends...

ಪಾಲಕ್ ಒಂದು ಹಸಿರು ತರಕಾರಿಯಾಗಿದೆ. ಇದು ಮೃದುವಾದ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು (Spinacia oleracea). ಪಾಲಕ್ ಸೊಪ್ಪು ಎಂದರೆ ಕೆಲವರು ಅಡುಗೆಗೆ ಮಾತ್ರ ಸೀಮಿತವಾಗಿದ್ದು ಎಂದು ತಿಳಿದಿರುತ್ತಾರೆ. ಪಾಲಕ್ ಸೊಪ್ಪನ್ನು ಆಹಾರವಾಗಿಯೂ ಮತ್ತು ಔಷಧವಾಗಿಯೂ ಉಪಯೋಗಿಸಬಹುದು. ಇದನ್ನುಪಯೋಗಿಸಿ ಅಡುಗೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ.

ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಜೊತೆಗೆ ಕಡಿಮೆ ಕ್ಯಾಲೋರಿ ಯನ್ನು ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಪಾಲಕ್ ಸೊಪ್ಪು ಕೂದಲಿನ ಆರೋಗ್ಯ, ಎಲುಬುಗಳ ಅರೋಗ್ಯ ಮತ್ತು ಚರ್ಮದ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗಿದೆ. ಪಾಲಕ್ ಸೊಪ್ಪು ಮಧುಮೇಹ ನಿಯಂತ್ರಿಸಲು, ಹೈ ಬಿಪಿ ನಿಯಂತ್ರಿಸಲು ಉಪಯುಕ್ತವಾಗಿದೆ. ಪಾಲಕ್ ಸೊಪ್ಪು ಕ್ಯಾನ್ಸರ್ ಬರದಂತೆ ತಡೆಯುವ ಮತ್ತು ಅಸ್ತಮಾವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

ಪಾಲಕ್ ಸೊಪ್ಪಿನಿಂದ ಮಧುಮೇಹವನ್ನು ನಿಯಂತ್ರಿಸಬಹುದು

ಮಧುಮೇಹ ರೋಗಿಗಳು ದಿನನಿತ್ಯ ಪಾಲಕ್ ಸೊಪ್ಪನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶದ ಕಡಿಮೆಯಾಗಿ, ಮಧುಮೇಹ ನಿಯಂತ್ರಣವಾಗುತ್ತದೆ.

ಪಾಲಕ್ ಸೊಪ್ಪು ಮಲಬದ್ದತೆಯನ್ನು ನಿಯಂತ್ರಿಸುತ್ತದೆ

ಮಲಬದ್ಧತೆಯಿಂದ ಬಳಲುತ್ತಿರುವವರು, ಪಾಲಕ್ ಸೊಪ್ಪಿನ ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ, ಅದರಲ್ಲಿರುವ ನಾರಿನಂಶ, ಜೀರ್ಣ ಕ್ರಿಯೆ ಸುಗಮವಾಗುವಂತೆ ಮಾಡುತ್ತದೆ. ಇದರಿಂದ ಮಲಬದ್ಧತೆಯ ನಿಯಂತ್ರಣವಾಗುತ್ತದೆ.

ಕೂದಲಿನ ಆರೋಗ್ಯಕ್ಕೆ ಪಾಲಕ್ ಸೊಪ್ಪು ಸಹಕಾರಿಯಾಗಿದೆ.

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ, ಪ್ರೊಟೀನ್ ಅಂಶಗಳು ಹೇರಳವಾಗಿರುತ್ತದೆ. ಪಾಲಕ್ ಸೊಪ್ಪನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ, ಇದು ಕೂದಲಿನ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೂದಲಿನ ಹೊಳಪನ್ನು ಹೆಚ್ಚಿಸಿ, ಕೂದಲು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ಮುಖದಲ್ಲಿನ ನೆರಿಗೆಯನ್ನು ಕಡಿಮೆ ಮಾಡಲು ಪಾಲಕ್ ಸೊಪ್ಪು ಉಪಯುಕ್ತವಾಗಿದೆ

ಪಾಲಕ್ ಸೊಪ್ಪನ್ನು ಸೂಪ್, ಜ್ಯೂಸು ಹೀಗೆ ಯಾವುದಾದರೊಂದು ರೀತಿಯಲ್ಲಿ ಆಹಾರವಾಗಿ, ನಿಯಮಿತವಾಗಿ ಸೇವಿಸುವುದರಿಂದ ಮುಖದ ಮೇಲಿನ ನೆರಿಗೆಗಳು ಕಡಿಮೆಯಾಗುತ್ತವೆ ಮತ್ತು ಮೊಡವೆಗಳು ಕೊಡ ಇಲ್ಲದಂತಾಗಿ, ಮುಖದ ಕಾಂತಿಯು ಹೆಚ್ಚುತ್ತದೆ.

ಪಾಲಕ್ ಸೊಪ್ಪು ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ

ಸ್ಥೂಲ ಕಾಯವನ್ನು ಹೊಂದಿರುವವರು ಪಾಲಕ್ ಸೊಪ್ಪನ್ನು ಆಹಾರವಾಗಿ ಆಗಾಗ ಬಳಸುವುದರಿಂದ, ಪಾಲಕ್ ಸೊಪ್ಪಿನಲ್ಲಿರುವ ಕ್ಯಾರೊಟಿನಾಯ್ಡ್ ಅಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕರಗಿಸಿ, ದೇಹದ ಬೆಳವಣಿಗೆಯನ್ನು ಸಮತೋನದಲ್ಲಿರಿಸುತ್ತದೆ.

ರಕ್ತ ಹೀನತೆಯ ನಿವಾರಣೆಗೆ ಪಾಲಕ್ ಸೊಪ್ಪು ಸಹಕಾರಿಯಾಗಿದೆ

ಪ್ರತಿನಿತ್ಯ ಪಾಲಕ್ ಸೊಪ್ಪಿನ ರಸ ಸೇವಿಸುವುದರಿಂದ, ಇದು ದೇಹದಲ್ಲಿ ರಕ್ತ ಕಣಗಳ ಉತ್ಪತ್ತಿಯನ್ನು ಹೆಚ್ಚಿಸಿ, ರಕ್ತ ಹೀನತೆಯು ದೂರವಾಗಿಸುತ್ತದೆ.

ಪಾಲಕ್ ಸೊಪ್ಪು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ

ಪಾಲಕ್ ಸೊಪ್ಪು ಹೆಚ್ಚಿನ ನಾರಿನಂಶ ಮತ್ತು ನೀರಿನಂಶವನ್ನು ಹೊಂದಿದ್ದು, ಇದು ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ. ಜೊತೆಗೆ ಇದು ನಮ್ಮ ದೇಹದಲ್ಲಿ ಆಹಾರವನ್ನು ಹೆಚ್ಚು ಬೇಗ ಜೀರ್ಣಿಸಲು ಸಹಾಯ ಮಾಡಿ, ಅಜೀರ್ಣವನ್ನು ಹೋಗಲಾಡಿಸುತ್ತದೆ.

ನೆನಪಿನ ಶಕ್ತಿಯನ್ನು ಹೆಚ್ಚಿಸಲು ಪಾಲಕ್ ಸೊಪ್ಪು ಸಹಕಾರಿಯಾಗಿದೆ

ಮಕ್ಕಳಲ್ಲಿ ನೆನಪಿನ ಶಕ್ತಿಯ ಕೊರತೆ ಕಂಡುಬಂದಲ್ಲಿ, ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಮೆದುಳಿನಲ್ಲಿರುವ ನರಕೋಶಗಳು ಚೆನ್ನಾಗಿ ಬೆಳವಣಿಗೆಗೊಂಡು ಹೆಚ್ಚಿನ ಅಂಶಗಳನ್ನು ನೆನಪಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪಿನಿಂದ ಕ್ಯಾನ್ಸರ್ ರೋಗದ ನಿಯಂತ್ರಣ

ಪಾಲಕ್ ಸೊಪ್ಪಿನಲ್ಲಿ ಕ್ಯಾನ್ಸರ್ ರೋಗದ ಕಣಗಳನ್ನು ಹೊಡೆದು ಹಾಕುವ ಶಕ್ತಿಯಿದ್ದು, ಇದು ಕ್ಯಾನ್ಸರ್ ರೋಗದ ನಿಯಂತ್ರವನ್ನು ಕೂಡ ಮಾಡುತ್ತದೆ.


Share this with your friends...

Leave a Comment

Your email address will not be published. Required fields are marked *