ಭೃಂಗರಾಜ ಗಿಡದ ಔಷಧಿ ಗುಣಗಳು
ಭೃಂಗರಾಜವು ಚರ್ಮರೋಗ ನಿವಾರಣೆಗೆ ಸಹಕಾರಿಯಾಗಿದೆ
ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು, ಮೈಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಹಾಗು ಚರ್ಮವು ಆರೋಗ್ಯದಿಂದ ಇರುತ್ತದೆ. ಮತ್ತು ಭೃಂಗರಾಜ ಗಿಡದ ಬೇರನ್ನು ಪುಡಿಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಚರ್ಮಕ್ಕೆ ಹಚ್ಚಿ ಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
ಭೃಂಗರಾಜ ಸಸ್ಯವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ
ಭೃಂಗರಾಜದಲ್ಲಿ ಕೆರೋಟಿನ್ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇದರ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕಣ್ಣಿನ ಆರೋಗ್ಯವನ್ನು ಇದು ಕಾಪಾಡುತ್ತದೆ.
ಗಂಟಲು ನೋವು ನಿವಾರಣೆಗೆ ಭೃಂಗರಾಜ ಸಹಕಾರಿಯಾಗಿದೆ
ಭೃಂಗರಾಜ ಎಲೆಯ ಕಷಾಯವನ್ನು ಮಾಡಿಕೊಂಡು, ಗಂಟಲವರೆಗೂ ಬರುವಂತೆ ಬಾಯಿಗೆ ಹಾಕಿ, ಮುಕ್ಕಳಿಯುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
ಭೃಂಗರಾಜವು ಅಜೀರ್ಣವನ್ನು ಹೋಗಲಾಡಿಸುತ್ತದೆ.
ಅಜೀರ್ಣವಾದಾಗ ಭೃಂಗರಾಜದ ಎಲೆಯನ್ನು ಸಣ್ಣಗೆ ಹೆಚ್ಚಿಕೊಂಡು, ಸ್ವಲ್ಪ ತುಪ್ಪದಲ್ಲಿ ಹುರಿದು, ಅದಕ್ಕೆ ಮೊಸರು, ಜೀರಿಗೆ, ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ತಲೆನೋವು ನಿವಾರಣೆಗೆ ಭೃಂಗರಾಜ
ಭೃಂಗರಾಜ ಎಲೆಯ ರಸವನ್ನು ತೆಗೆದುಕೊಂಡು ಎಳ್ಳೆಣ್ಣೆ ಜೊತೆ ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ವಾಸಿಯಾಗುತ್ತದೆ.
ಭೃಂಗರಾಜ ಚಳಿಗಾಲದಲ್ಲಿ ಮೈ ಒಡೆಯುವುದನ್ನು ತಡೆಯುತ್ತದೆ
ಕೆಲವರಿಗೆ ಚಳಿಗಾಲದಲ್ಲಿ ಮೈ- ಕೈ, ಕಾಲು ಒಡೆಯುವುದು ಸಾಮಾನ್ಯ. ಇದರಿಂದ ತ್ವಚೆ ಒಣಗಿ ಕಿರಿ ಕಿರಿ ಉಂಟಾಗುತ್ತದೆ. ಭೃಂಗರಾಜದ ಎಲೆಯ ರಸವನ್ನು ಸ್ವಲ್ಪ ಎಳ್ಳೆಣ್ಣೆ, ಮತ್ತು ಕೊಬ್ಬರಿ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಡೆಯುವುದು ಕಡಿಮೆಯಾಗುತ್ತದೆ.
ಭೃಂಗರಾಜವು ಹಲ್ಲು ನೋವು ನಿವಾರಣೆ ಮಾಡುತ್ತದೆ
ಭೃಂಗರಾಜ ಎಲೆಯಿಂದ ಹಲ್ಲುಗಳನ್ನು ಮಸಾಜ್ ಮಾಡುವುದರಿಂದ ಹಲ್ಲು ನೋವು ಹಾಗು ಒಸಡುಗಳ ಸಮಸ್ಯೆ ನಿವಾರಣೆಯಾಗುತ್ತದೆ.
ಭೃಂಗರಾಜವು ದೇಹವನ್ನು ತಂಪಾಗಿಡುತ್ತದೆ
ಪ್ರತಿನಿತ್ಯ ಬೆಳಿಗ್ಗೆ 5 ರಿಂದ 6 ಭೃಂಗರಾಜ ಗಿಡದ ಹಸಿ ಎಲೆಗಳನ್ನು ಜಗಿದು ತಿನ್ನುವುದರಿಂದ, ಇದು ದೇಹದ ಉಷ್ಣವನ್ನು ಕಡಿಮೆ ಮಾಡಿ ದೇಹ ತಂಪಾಗಿರುವಂತೆ ನೋಡಿಕೊಳ್ಳುತ್ತದೆ.