ಶುಂಠಿಯ ಔಷಧ ಗುಣಗಳು
ಶುಂಠಿಯು ಉತ್ತಮವಾದ ಆಹಾರೌಷಧವಾಗಿದೆ. ಇದು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿದೆ. ಇದರ ವೈಜ್ಞಾನಿಕ ಹೆಸರು ಝೀನ್ಯೂಜಿಬೆರ್ ಓಫ್ಸಿನಲೇ( Zingiber Officinale). ನಮ್ಮ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಇದರ ಬಳಕೆ ಹೆಚ್ಚು. ಶುಂಠಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದಾರೆ. ಭಾರತೀಯರು ಇದನ್ನು ಮುಖ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ.
ಶುಂಠಿ ಅನೇಕಾನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.ಇದು ಕೂಡ ಅನೇಕ ಪೋಷಕಾಂಶವನ್ನು ಹೊಂದಿರುವ ಆಹಾರೌಷಧ. ಶುಂಠಿಯು ಗಿಡದಲ್ಲಿ ಶುಂಠಿಯು ನೆಲದಲ್ಲಿ ಬೆಳೆಯುತ್ತದೆ. ಶುಂಠಿಯನ್ನು ಹೆಚ್ಚಾಗಿ ಎಲ್ಲ ಪ್ರದೇಶದಲ್ಲೂ ವ್ಯವಸಾಯವಾಗಿ ಬೆಳೆಯುತ್ತಾರೆ. ಶುಂಠಿಯು ತುಂಬಾ ಘಾಟು ಇರುತ್ತದೆ. ಅದರ ಪರಿಮಳವು ತುಂಬಾ ಚೆನ್ನಾಗಿರುತ್ತದೆ.ಶುಂಠಿ ಗಿಡದಲ್ಲಿ ಹೂಗಳು ಅರಳುತ್ತವೆ. ಜನರು ಅದನ್ನು ನೋಡಿರುವುದೇ ಕಡಿಮೆ ಶುಂಠಿಯು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದೆ. ಶುಂಠಿಯು ಒಳ್ಳೆ ಆಯಂಟಿ ಆಕ್ಸಿಡೆಂಟ್ ಆಗಿದೆ. ಇದು ಜಿಂಜರಾತ್, ಬೀಟಾ, ಕೆರೋಟಿನ್, ಕ್ಯಾಪ್ಸೆಸಿಸ್, ಸೆಲಿಸಿಲೇಟ್, ಕರ್ಕ್ಯುಮಿನ್ ಗಳನ್ನೂ ಒಳಗೊಂಡಿದೆ. ಮತ್ತು ಸಕ್ಕರೆ ಅಂಶ, ನಾರಿನಾಂಶ, ಸೋಡಿಯಂ, ಪ್ರೊಟೀನ್, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ಫಾಸ್ಪರಸ್ ಅಂಶಗಳನ್ನು ಹೊಂದಿದೆ. ಶುಂಟಿ ಕಷಾಯವು ಆರೋಗ್ಯಕ್ಕೆ ಉತ್ತಮವಾಗಿದೆ.
ಶುಂಠಿಯನ್ನು ಹಸಿಯಾಗಿ ಬಳಸಬಹುದು ಅಥವಾ ಒಣಗಿಸಿ ಬಳಸಬಹುದು. ಹಸಿ ಶುಂಠಿ ಹಾಳಾಗುತ್ತೆ ಅಂದರೆ ಅದನ್ನು ಒಣಗಿಸಿ ಕೂಡ ತೆಗೆದಿಟ್ಟುಕೊಳ್ಳುವುದು ಉತ್ತಮ. ಶುಂಠಿಯು ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ನೀವು ಕೂಡ ನಿಮ್ಮಮನೆಯಲ್ಲಿ ಸುಲಭವಾಗಿ ಶಿಂತಿಯನ್ನು ಬೆಳೆಸಬಹುದು. ಶುಂಠಿಯನ್ನು ವಿವಿಧ ತರಹದ ಜ್ಯೂಸಗಳಲ್ಲಿ ಬಳಸುತ್ತರೆ. ಉದಾಹರಣೆಗೆ ಕಬ್ಬಿನ ಹಾಲಿನ ಜೊತೆ, ಗ್ರೀನ್ ಟೀ ಜೊತೆ ಮುಂತಾದವು.. ಶುಂಠಿಯನ್ನು ತರಕಾರಿ ಖಾದ್ಯಗಳ ತಯಾರಿಕೆಯಲ್ಲಿ, ಮಾಂಸಾಹಾರ ಖಾದ್ಯಗಳ ತಯಾರಿಕೆಯಲ್ಲಿ ಮುಖ್ಯವಾಗಿ ಬಳಸುತ್ತಾರೆ.
(ಈ ಆರೋಗ್ಯಕರವಾದ ಔಷಧ ಗುಣಗಳು ನಿಮಗೆ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಸ್ನೇಹತರಿಗೆ ಶೇರ್ ಮಾಡಿ.)
ಶುಂಠಿಯ ಬಳಕೆಯಿಂದ ಜೀರ್ಣಕ್ರಿಯೆಯು ಸರಾಗವಾಗುತ್ತದೆ
ಶುಂಠಿಯು ಅಡುಗೆಗೆ ಮಾತ್ರ ಸೀಮಿತವಾಗಿರದೆ, ಆರೋಗ್ಯವನ್ನು ಕಾಪಾಡುವುದರಲ್ಲೂ ಹೆಚ್ಚಿನ ಮಹತ್ವ ಹೊಂದಿದೆ. ಊಟದ ಮೊದಲು ಸಣ್ಣ ಶುಂಠಿ ಚೂರಿನೊಂದಿಗೆ ಒಂದೆರೆಡು ಕಾಳು ಉಪ್ಪು ಸೇರಿಸಿ ಜಗಿದು ತಿನ್ನುವುದರಿಂದ ಊಟದ ನಂತರ ಜೀರ್ಣ ಕ್ರಿಯೆ ಸರಾಗವಾಗುತ್ತದೆ.
ಶುಂಠಿಯು ಕೆಮ್ಮು-ಕಫವನ್ನು ನಿವಾರಣೆ ಮಾಡುತ್ತದೆ
ಶುಂಠಿಯನ್ನು ಸ್ವಲ್ಪ ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯಬಹುದು. ಅಥವಾ ಶುಂಠಿಯ ರಸಕ್ಕೆ ಸ್ವಲ್ಪ ತುಳಸಿ ರಸ, ಜೇನುತುಪ್ಪ ಸೇರಿಸಿ ದಿನಕ್ಕೆ ೨ ಬಾರಿ ಕುಡಿಯುವುದರಿಂದ ಕೆಮ್ಮು ಮತ್ತು ನೆಗಡಿ ಕಡಿಮೆಯಾಗುತ್ತದೆ.
ಶುಂಠಿಯು ತಲೆನೋವಿಗೆ ಉತ್ತಮ ಔಷಧವಾಗಿದೆ
ತಲೆನೋವು ಬಂದಾಗ ಹಸಿ ಶುಂಠಿಯನ್ನು ತೆಗೆದುಕೊಂಡು ಗಂಧದಂತೆ ನುಣುಪಾಗಿ ಅರೆದು ತಲೆನೋವಿಗೆ ಹಚ್ಚಿಕೊಳ್ಳುವುದರಿಂದ ತಕ್ಷಣದಲ್ಲಿ ತಲೆನೋವು ಮಾಯವಾಗುತ್ತದೆ. ಆ ಶುಂಠಿ ಪೇಸ್ಟನ್ನು ನೋವಿಲ್ಲದ ಚರ್ಮದ ಭಾಗಕ್ಕೆ ಕಾರಣ ಅದು ತುಂಬಾ ಘಾಟ ಇರುವುದರಿಂದ ಚರ್ಮ ಉರಿಯುತ್ತದೆ. ಆದ್ದರಿಂದ ತಲೆ ನೋವು ಇರುವ ಜಾಗಕ್ಕೆ ಲೇಪಿಸುವುದು ಉತ್ತಮ.
ಶುಂಠಿಯು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ
ಹಸಿ ಶುಂಠಿ ಅಥವಾ ಒಣ ಶುಂಠಿ ಬಳಸಬಹುದು. 1/2 ಇಂಚು ಶುಂಠಿ ಚೂರನ್ನು ಜಜ್ಜಿ ಸ್ವಲ್ಪ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಬೆರಸಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.
ಸಂದಿವಾತ ಹಾಗು ಉರಿಯೂತಗಳ ನಿವಾರಣೆಗೆ ಶುಂಠಿಯ ಬಳಕೆ
ಹಸಿ ಶುಂಠಿಯನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಇಟ್ಟುಕೊಂಡು ಬೇಕಾದಾಗ ಉಪಯೋಗಿಸಬಹುದು. ಅಥವಾ ಹಸಿ ಶುಂಠಿಯ ಪೇಸ್ಟ್ ಮಾಡಿ ಕೂಡ ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ನೋವು ಕಡಿಮೆಯಾಗಿ, ಊಟವು ನಿಧಾನವಾಗಿ ಇಳಿಯುತ್ತದೆ.
ಶುಂಠಿಯು ರಕ್ತದಲ್ಲಿ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ
ನೀರಿಗೆ ಸ್ವಲ್ಪ ಶುಂಠಿ ಪುಡಿ, ಅದಕ್ಕೆ ಬೆಲ್ಲ ಸೇರಿಸಿ ಬೇಕಾದಲ್ಲಿ ಪುದಿನ ಎಲೆಗಳನ್ನು ಸೇರಿಸಿಕೊಂಡು ಚಹದಂತೆ ತಯಾರಿಸಿಕೊಂಡು ಪ್ರತಿದಿನ ಈ ತರಹದ ಶುಂಠಿ ಕಷಾಯ ಕುಡಿಯುವುದರಿಂದ ಇದು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನು ಸಹಾಯವಾಗುತ್ತದೆ.
ಶುಂಠಿಯು ಶೀತ-ಜ್ವರವನ್ನು ಕಡಿಮೆಮಾಡುತ್ತದೆ
1/2 ಇಂಚು ಶುಂಠಿ ಚೂರನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಅದಕ್ಕೆ ಸ್ವಲ್ಪ ಗರಿಕೆ ಹುಲ್ಲು ( ಕರ್ಕಿ), ಒಂದೆಲಗ ಬೇರು ಸಮೇತವಾಗಿ, ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಶೀತ – ಜ್ವರ ಕಡಿಮೆಯಾಗುವುದು.
ಶುಂಠಿಯು ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ
ಸಣ್ಣ ಶುಂಠಿ ಚೂರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಸೇವಿಸುವುದರಿಂದ ನಾಲಿಗೆಯ ರುಚಿ ಹೆಚ್ಚುತ್ತದೆ.
ಶುಂಠಿಯು ಹಲ್ಲು ನೋವಿಗೆ ಪರಿಹಾರವಾಗಿದೆ
ಹಲ್ಲು ನೋವು ಇದ್ದವರು ಒಣ ಶುಂಠಿಯ ಪುಡಿಯೊಂದಿಗೆ ಸ್ವಲ್ಪ ಉಪ್ಪು ಸೇರಿಸಿ ಹಲ್ಲನ್ನು ಉಜ್ಜುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ.
ಶುಂಠಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಶುಂಠಿಯಲ್ಲಿ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸಿವ ಗುಣವಿದೆ. ಆದ್ದರಿಂದ ಪ್ರತಿದಿನ ಆ ಕಪ್ ಶುಂಠಿ ಕಷಾಯವನ್ನು ಕುಡಿಯುವುದರಿಂದ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಶುಂಠಿಯಲ್ಲಿ ವಾಕರಿಕೆಯನ್ನು ಕಡಿಮೆ ಮಾಡುವ ಗುಣವಿದೆ
ಕೆಲವರಿಕೆ ವಾಂತಿ ಪ್ರಾರಂಭವಾಗುವ ಮೊದಲು ಹೊಟ್ಟೆ ಕಿವುಚಿದಂತಾಗುತ್ತದೆ. ಆದರೂ ವಾಂತಿ ಆಗುವುದಿಲ್ಲ. ವಾಂತಿ ಮಾಡಲು ಕೂಡ ಕಷ್ಟ ಎನಿಸುತ್ತದೆ. ಆ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗಿದರೆ ವಾಕರಿಕೆ ಬಂದಂಗಾಗುವುದು ನಿಲ್ಲುತ್ತದೆ. ಮತ್ತು ದಿನವಿಡೀ ವಾಂತಿ ಬರದಂತೆ ಶುಂಠಿಯು ತಡೆಯುತ್ತದೆ.
ಶುಂಠಿಯು ಮುಟ್ಟಿನ ದಿನಗಳಲ್ಲಿನ ಹೊಟ್ಟೆ ನೋವು ನಿವಾರಣೆ ಮಾಡುತ್ತದೆ
ಹೆಣ್ಣು ಮಕ್ಕಳ್ಳಿಗೆ ಕಾಡುವ ಮುಟ್ಟಿನದಿನಗಳಲ್ಲಿನ ಹೊಟ್ಟೆ ನೋವಿಗೆ ಶುಂಠಿ ಕಷಾಯವನ್ನು ಮಾಡಿ ದಿನಕ್ಕೆ 2 ಬಾರಿ ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.
Super sir