ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವ ಅರಿಶಿಣದ ಔಷಧ ಗುಣಗಳು

Share this with your friends...

ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಅರಿಶಿಣಕ್ಕೆ ಮಹತ್ವವಾದ ಸ್ಥಾನವಿದೆ. ಅರಿಶಿಣವನ್ನು ಮುಖ್ಯವಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳ ಕಾರ್ಯಗಳಿಗೆ ಬಳಸುತ್ತಾರೆ. ಈ ಅರಿಶಿಣವು ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಈ ಅರಿಶಿಣವನ್ನು ನಮ್ಮ ಭಾರತದಲ್ಲಿ ೪೦೦ ವರ್ಷಗಳಿಂದ ಬಳಸುತ್ತಾ  ಬಂದಿದ್ದಾರೆ. ಅರಿಶಿಣವನ್ನು ಹೆಚ್ಚಾಗಿ ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಅರಿಶಿಣವನ್ನು ಆರೋಗ್ಯಕ್ಕೂ , ಹಾಗು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಅರಿಶಿಣವು ನೂರಾರು ರೋಗಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಹಾಗು ಅರಿಶಿಣವು ಮುಖ್ಯವಾಗಿ Antibacterial, antimicrobial, antiseptic, antivairal ಗುಣಗಳನ್ನು ಹೊಂದಿದೆ. ಅರಿಶಿಣವು ಗಡ್ಡೆಯಂತೆ ಭೂಮಿಯ ಒಳಗಡೆ ಬೆಳೆಯುತ್ತದೆ. ಇದರ ಗಡ್ಡೆಯು ಹಳದಿ ಬಣ್ಣದಲ್ಲಿದ್ದು , ಒಳ್ಳೆಯ ಪರಿಮಳವನ್ನು ಹೊಂದಿದೆ. ಇದರ ಎಲೆಗಳು ಅಗಲವಾಗಿ ಹಾಗು ಉದ್ದವಾಗಿಯೂ ಇರುತ್ತವೆ. ಅರಿಶಿಣದ ಎಲೆಗಳು ಕೂಡ ಹೆಚ್ಚಿನ ಔಷಧ ಗುಣಗಳನ್ನು ಹೊಂದಿದೆ. ಹಾಗು ಈ ಎಲೆಗಳನ್ನು ಅಡುಗೆಯಲ್ಲೂ ಹೆಚ್ಚಾಗಿ ಬಳಸುತ್ತಾರೆ.

ಅರಿಶಿಣದ ಪುಡಿ ಮಾಡುವ ವಿಧಾನ :

ಚೆನ್ನಾಗಿ ಬೆಳೆದ ಅರಿಶಿಣದ ಕೊಂಬನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದು ಅದನ್ನ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಇದನ್ನು ಕನಿಷ್ಠ 7 ರಿಂದ 8 ದಿನ ಬಿಸಿಲಿನಲ್ಲಿ ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಪುಡಿ ಮಾಡಿಟ್ಟುಕೊಳ್ಳಬಹುದು. ಇದನ್ನು ಒರ್ಷಗಟ್ಟಲೆ ಶೇಖರಣೆ ಮಾಡಿ ಇಡಬಹುದು. ಬಿಗಿಯಾದ ಡಬ್ಬದಲ್ಲಿ ಇದನ್ನು ಇಟ್ಟುಕೊಳ್ಳಬೇಕು.

ಅರಿಶಿಣದ ಔಷಧ ಗುಣಗಳು :

ಅರಿಶಿನವು ಮಹಿಳೆಯರಿಗೆ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ತುಂಬಾ ಸಹಕಾರಿಯಾಗಿದೆ.

ವಿಧಾನ 1 : ಮುಖದ ಚರ್ಮಕ್ಕೆ ಹೊಳಪು ಬರುವಂತೆ ಮಾಡುತ್ತದೆ.

ಒಂದು ಚಮಚ ಹಾಲಿನ ಕೆನೆಗೆ ೧/೪ ಚಮಚ ಅರಿಶಿಣದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ ಮಾಡಿ ಮುಖಕ್ಕೆ ಲೇಪಿಸಬೇಕು. ೫ ನಿಮಿಷಗಳ ಕಾಲ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ನಂತರ ೧೫ ನಿಮಿಷ ಬಿಟ್ಟು ಮುಖವನ್ನು ಬಿಸಿ ನೀರಿನಿಂದ ತೊಳೆಯಬೇಕು. ಹೀಗೆ ೨ ದಿನಕ್ಕೊಮ್ಮೆ ಮಾಡುವುದರಿಂದ ಚರ್ಮವು ಬಿಳುಪಾಗುತ್ತದೆ. ಮತ್ತು ಮುಖದಲ್ಲಾಗುವ ಗುಳ್ಳೆಗಳು ಕಡಿಮೆಯಾಗುತ್ತವೆ.

 ವಿಧಾನ 2 : ಮೊಡವೆಗಳನ್ನು ಕಡಿಮೆಮಾಡಲು

ಅರಿಶಿಣದ ಕೊಂಬು ಮತ್ತು 2 ಲಿಂಬೆ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಲೇಪಿಸಬೇಕು. ನಂತರ 15 ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ಹೀಗೆ ವಾರಕ್ಕೆ 2 ಬಾರಿ ಮಾಡುವುದರಿಂದ ಮೊಡವೆಗಳು ನಿಧಾನವಾಗಿ ಕಡಿಮೆಯಾಗುತ್ತವೆ.

ವಿಧಾನ 3 :  ಮುಖದ ಚರ್ಮವು ಹೊಳೆಯುವಂತೆ ಮಾಡಲು

1 ಚಮಚ ಕಡಲೆ ಹಿಟ್ಟಿಗೆ 1/4 ಚಮಚ್ ಅರಿಶಿನ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ಹಸಿ ಹಾಲನ್ನು ( raw milk) ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕೂಡ ಮುಖದ ಹೊಳಪು ಹೆಚ್ಚಾಗುತ್ತದ್ದೆ.

ವಿಧಾನ 4 : ಅನಾವಶ್ಯಕ ಕೂದಲ ಬೆಳವಣಿಗೆಯನ್ನು (unwanted hair growth) ಕಡಿಮೆಮಾಡಲು

ತೆಂಗಿನ ಕಾಯಿ ಹಾಲಿನ ಜೊತೆ ಅರಿಶಿಣ ಪುಡಿಯನ್ನು ಸೇರಿಸಿ ಸ್ನಾನ ಮಾಡುವ ಮೊದಲು ಕೈ, ಕಾಲು ಮತ್ತು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಅನಾವಶ್ಯಕ ಕೂದಲುಗಳ ಬೆಳೆವಣಿಗೆ ಕಡಿಮೆಯಾಗುತ್ತದೆ.

ವಿಧಾನ 5 : ಅನಾವಶ್ಯಕ ಕೂದಲನ್ನು ತೆಗೆಯಲು(unwanted hair remove) ಅರಿಶಿನವು ಸಹಕಾರಿಯಾಗಿದೆ.

2 ಚಮಚ ಕಡೆಲೆ ಹಿಟ್ಟಿಗೆ, 1/2 ಚಮಚ ಅರಿಶಿಣ ಪುಡಿಯನ್ನು ಸೇರಿಸಿ ಅದಕ್ಕೆ ಸ್ವಲ್ಪ ಟೊಮೆಟೊ ರಸವನ್ನು ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚ್ಚಿಕೊಳ್ಳಬೇಕು. ಅದು ಚೆನ್ನಾಗಿ ಒಣಗಿದ ನಂತರ ಕೂದಲು ಬೆಳೆದ ವಿರುದ್ಧ ದಿಕ್ಕಿನಿಂದ ಅದನ್ನು ತೆಗೆಯ ಬೇಕು. ನಂತರ ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಬೇಕು. ಇದರಿಂದ ಅನಾವಶ್ಯಕ ಕೂದಲು ಕ್ರಮೇಣವಾಗಿ ಉದುರುತ್ತವೆ.

ಚರ್ಮದಲ್ಲಿನ ತುರಿಕೆಯನ್ನು ಕಡಿಮೆ ಮಾಡಲು ಸಹಕಾರಿ

ಚರ್ಮದಲ್ಲಿ ತುರಿಕೆ ಇರುವ ಜಾಗಕ್ಕೆ ಸ್ವಲ್ಪ ಅರಿಶಿಣ ಮತ್ತು ಅದಕ್ಕೆ ಸ್ವಲ್ಪ ಉಪ್ಪು ಹಾಗು ನೀರು ಸೇರಿಸಿ ಚೆನ್ನಾಗಿ ಕಲಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳುವುದರಂದ ತುರಿಕೆ ಕಡಿಮೆಯಾಗುತ್ತದೆ. (ತುರಿಕೆ ಇರುವ ಜಾಗಕ್ಕೆ ಉಪ್ಪು, ಅರಿಶಿಣ ಹಚ್ಚುವುದರಿಂದ ತುರಿಕೆ ಹೆಚ್ಚಾದಹಾಗೆ ಅನಿಸುತ್ತೆ. ಆದರೆ ಅದು ನಿಧಾನವಾಗಿ ಕಡಿಮೆಯಾಗುತ್ತದೆ. ಯಾವುದೇ ಕಾರಣಕ್ಕೂ ಲೇಪಿಸಿಕೊಂಡ ಅರಿಶಿನದ ಮಿಶ್ರಣವನ್ನು ತೊಳೆದುಕೊಳ್ಳಬೇಡಿ.)

ಅರಿಶಿನವು ಕಣ್ಣನ್ನು ಶುದ್ಧವಾಗಿರಿಸುವ ಗುಣವನ್ನು ಹೊಂದಿದೆ.

ಕಣ್ಣು ಕೆಂಪಾದಾಗ ಅಥವಾ ಕಣ್ಣಿಗೆ ಉರಿ ಬಂದಾಗ, ಒಂದು ಸಣ್ಣ ಲೋಟ ನೀರಿಗೆ ಸ್ವಲ್ಪ ಅರಿಶಿಣದ ಪುಡಿಯನ್ನು ಹಾಕಿ ನಿಮಿಷ ಹಾಗೆ ಇಡಿ. 10 ನಿಮಿಷದ ನಂತರ ಅರಿಶಿಣದ ನೀರು ತಿಳಿಯಾಗಿರುತ್ತದೆ. ಆ 2 ಹನಿ ಅರಿಶಿಣದ ತಿಳಿ ನೀರನ್ನು ಕಣ್ಣಿಗೆ ಹಾಕಿಕೊಳ್ಳುವುದರಿಂದ ಕಣ್ಣಿನ ಉರಿ ಹಾಗು ಕಣ್ಣು ಕೆಂಪಾಗಿರುವುದು ಕಡಿಮೆಯಾಗುತ್ತದೆ.

ಅರಿಶಿನವು ರಕ್ತಸ್ರಾವವನ್ನು ತಡೆಯುತ್ತದೆ.

ಸಣ್ಣ ಗಾಯಗಳಾಗಿ ರಕ್ತ ಸೋರುತ್ತಿದ್ದರೆ, ಆ ಜಾಗಕ್ಕೆ ಅರಿಶಿಣದ ಪುಡಿಯನ್ನು ಹಾಕುವುದರಿಂದ ರಕ್ತಸ್ರಾವವನ್ನು ತಡೆಯಬಗುದು.

(ಸಣ್ಣ ಗಾಯಗಳಿಗೆ ಮಾತ್ರ )

 ಕೆಮ್ಮು ಮತ್ತು ನೆಗಡಿಯನ್ನು ಕಡಿಮೆ ಮಾಡುತ್ತದೆ.

ಕೆಮ್ಮು ಮತ್ತು ನೆಗಡಿಯಾದಾಗ 1 ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಸೇರಿಸಿ ಕುದಿಸಿ ಕುಡಿಯುವುದರಿಂದ ನೆಗಡಿ ಕೆಮ್ಮು ಕಡಿಮೆಯಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ.

ನೀವು ನಮ್ಮ ವೆಬ್ಸೈಟ್ ನ್ನು follow ಮಾಡುವುದರಿಂದ ನಾವು ಪಬ್ಲಿಶ್ ಮಾಡುವ ಎಲ್ ಆರ್ಟಿಕಲ್ ಗಳ ನೋಟಿಫಿಕೇಶನ್ ಗಳು ಕೂಡ ನಿಮ್ಮ್ ಮೊಬೈಲ್ ಗೆ ಬರುತ್ತವೆ


Share this with your friends...

Leave a Comment

Your email address will not be published. Required fields are marked *