ಮನೆಯಂಗಳದಲ್ಲಿ ಮುಳ್ಳುಗಳನ್ನೊಳಗೊಂಡು, ಕಳೆಯಂತೆ ಬೆಳೆಯುವ ಸಸ್ಯವೇ “ಮುಟ್ಟಿದರೆ ಮುನಿ” ಅಥವಾ “ನಾಚಿಕೆ ಮುಳ್ಳು”. ಇದರ ವಿಶೇಷ ಏನೆಂದರೆ ಈ ಸಸ್ಯವು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತದೆ. ಇದು ಪ್ರಕೃತಿಯ ಜಾದು ಅಷ್ಟೆ. ಮುಟ್ಟಿದರೆ ಮುನಿ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮ ಆದ್ದರಿಂದ ಹುಳು ಹಪ್ಪಟೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಎಲೆಗಳು ಸ್ಪರ್ಶ ಆದ ಕೂಡಲೇ ಮಡಿಚಿಕೊಳ್ಳುತ್ತವೆ.
ನಾಚಿಕೆ ಮುಳ್ಳು ಎಂದರೆ ಎಲ್ಲರಿಗೂ ಅಲಕ್ಷ್ಯ. ಅದನ್ನು ಕಳೆ ಎಂದು ಎಲ್ಲರೂ ಕಿತ್ತು ಹಾಕುತ್ತಾರೆ. ಏಕೆಂದರೆ ಈ ಸಸ್ಯ ಎಲ್ಲಡೆ ಬೆಳೆಯುತ್ತದೆ. ಕಾರಣ ಈ ಗಿಡವು ಸಾವಿರಕ್ಕೂ ಹೆಚ್ಚು ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಆ ಬೀಜಗಳು ಒಣಗಿದ ಬಳಿಕ ಗಾಳಿಯಲ್ಲಿ ಹೋಗಿ ಎಲ್ಲ ಕಡೆ ಸುಲಭವಾಗಿ ಬೆಳೆಯುತ್ತವೆ. ಮುಟ್ಟಿದರೆ ಮುನಿ ಗಿಡವು ಚಿಕ್ಕದಾಗಿದ್ದು, ಇದು ಸಣ್ಣ ಸಣ್ಣ ಮುಳ್ಳುಗಳನ್ನೂ, ತಿಳಿ ನೇರಳೆ ಬಣ್ಣದ ಸಣ್ಣ ಹೂವುಗಳನ್ನೂ ಹೊಂದಿರುತ್ತದೆ . ಅದರ ಹೂವುಗಳು ತುಂಬಾ ಆಕರ್ಷಕವಾಗಿರುತ್ತವೆ. ಈ ಗಿಡದ ಮುಳ್ಳು ತುಂಬಾ ಅಪಾಯಕಾರಿ. ಮುಟ್ಟಿದರೆ ಮುನಿ ಗಿಡದ ಕಾಂಡವನ್ನು ಕತ್ತರಿಸಿದರು ಬೇಗ ಸಾಯುವುದಿಲ್ಲ. ಅದು ಮತ್ತೆ ಚಿಗುರುತ್ತದೆ. ಈ ಗಿಡದ ಪ್ರತಿ ಭಾಗವು ಹೂವು, ಬೇರು, ಕಾಂಡ, ಎಲೆ, ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ.
ಇದರ ವೈಜ್ಞಾನಿಕ ಹೆಸರು “ಮಿಮೋಸ ಪುಡಿಕಾ“(Mimosa Pudica). ಆಯುರ್ವೇದದಲ್ಲಿ ಮುಟ್ಟಿದರೆ ಮುನಿ ಸಸ್ಯಕ್ಕೆ ವಿಶೇಷ ಮಹತ್ವವಿದೆ. ಇದು ನಮ್ಮ ಹಲವಾರು ಕಾಯಿಲೆಗಳಿಗೆ ಮನೆ ಮದ್ದಾಗಿದೆ.
ಊತವನ್ನು ಕಡಿಮೆಮಾಡಲು ಮುಟ್ಟಿದರೆ ಮುನಿ ಗಿಡವು ಸಹಕಾರಿಯಾಗಿದೆ
ಊತ ಉಂಟಾದಾಗ ಮುಟ್ಟಿದರೆ ಮುನಿ ಗಿಡ ಸಮೇತವಾಗಿ ಅರೆದು, ಅದನ್ನು ಊತವಾದ ಜಾಗಕ್ಕೆ ಹಚ್ಚಿ, ಬಟ್ಟೆಯಿಂದ ಕಟ್ಟಿದರೆ ಊತ ಬೇಗನೆ ಕಡಿಮೆಯಾಗುತ್ತದೆ.
ಮಹಿಳೆಯರಲ್ಲಿ ಅತ್ಯಧಿಕ ರಕ್ತಸ್ರಾವಕ್ಕೆ, ಮುಟ್ಟಿದರೆ ಮುನಿ ಗಿಡದಿಂದ ಪರಿಹಾರ
ಕೆಲವು ಮೆಹಿಳೆಯರಿಗೆ ತಿಂಗಳ ಕೊನೆಯಲ್ಲಿ ರಕ್ತಸ್ರಾವ ಅತ್ಯಧಿಕವಾಗಿರುತ್ತದೆ. ಇದನ್ನು ಕಡಿಮೆಮಾಡಲು, ಮುಟ್ಟಿದರೆ ಮುನಿ ತೆಗೆದುಕೊಂಡು, ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕುದಿಸಿ, ಅದಕ್ಕೆ 1 ಚಿಟಿಕೆ ಸ್ಪಟಿಕ / ಆಲಮ್ ನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸಬೇಕು. ಅಥವಾ ಮುಟ್ಟಿದರೆ ಮುನಿ ಗಿಡದ ಕಷಾಯ ಮಾಡಿ ಕುಡಿಯುತ್ತ ಬಂದಲ್ಲಿ, ನಿಧಾನವಾಗಿ ಆ ರಕ್ತನಾಳಗಳು ಸಂಕುಚಿತಗೊಂಡು ಸಮಸ್ಯೆ ಪರಿಹಾರವಾಗುತ್ತದೆ
ಮುಟ್ಟಿದರೆ ಮುನಿ ಗಿಡವು ಮಲಬದ್ದತೆಯನ್ನು ಕಡಿಮೆಮಾಡುವುದು
ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ, ಅದರ ರಸ ತೆಗೆದು 2 ರಿಂದ 3 ಚಮಚ ರಸವನ್ನು, 1 ಲೋಟ ನೀರಿಗೆ ಹಾಕಿ ಕುಡಿಯುವುದರಿಂದ, ಯಾವುದೇ ಅಡ್ಡ ಪರಿಣಾಮವಾಗದೆ ಮಲಬದ್ಧತೆ ಕಡಿಮೆಯಾಗುತ್ತದೆ.
ಮುಟ್ಟಿದರೆ ಮುನಿ ಗಿಡವು ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ
ಬಾಣಂತನ ಆದ ಮೇಲೆ ಕೆಲವರಿಗೆ ಹೊಟ್ಟೆ ಕರಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತದೆ ಹಾಗು ತಾನು ಮೊದಲಿನಂತೆ ಫಿಟ್ ಆಗಿ ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ಮುಟ್ಟಿದರೆ ಮುನಿ ಗಿಡವು ತುಂಬಾ ಸಹಕಾರಿಯಾಗಿದೆ. ಮುಟ್ಟಿದರೆ ಮುನಿ ಗಿಡದ ಎಲೆಯ ರಸವನ್ನು ತೆಗೆದು, ಅದನ್ನು ಕೈಗೆ ಹಾಕಿಕೊಂಡು ನಂತರ ಹೊಟ್ಟೆಯ ಭಾಗಕ್ಕೆ ಲೇಪಿಸಿ, ಒಂದೆರೆಡು ನಿಮಿಷ ಮಸಾಜ್ ಮಾಡುವುದರಿಂದ ಹೊಟ್ಟೆ ಕರಗಿ ಮೊದಲಿಂದಂತೆ ಪಿಟ್ ಆಗಿ ಇರಬಹುದು.
ಮುಟ್ಟಿದರೆ ಮುನಿಯಿಂದ ಮೊಡವೆಗಳ ನಿವಾರಣೆ
ಹೆಣ್ಣು ಮಕ್ಕಳ ಸೌಂಧರ್ಯವನ್ನು ಹಾಳು ಮಾಡುವ ಮೊಡವೆಗಳನ್ನು ನಿಯಂತ್ರಿಸಲು, ಮುಟ್ಟಿದರೆ ಮುನಿ ಗಿಡದ ರಸವನ್ನು ಮೊಡವೆಗಳ ಜಾಗಕ್ಕೆ ಲೇಪಿಸುವುದರಿಂದ, ಮೊಡವೆಗಳು ನಿವಾರಣೆಯಾಗುತ್ತವೆ.
ಗಾಯವಾಗಿ ರಕ್ತಸ್ರಾವವಾಗುತಿದ್ದರೆ ಇದು ಉತ್ತಮ ಪರಿಹಾರವಾಗಿದೆ
ಹಳ್ಳಿಗಳಲ್ಲಿ ಕೆಲಸಕ್ಕೆ ಹೋದಾಗ, ತೋಟಗಳಲ್ಲಿ, ಗದ್ದೆಗಳಲ್ಲಿ, ಅಥವಾ ಕಟ್ಟಿಗೆ ತರಲು ಕಾಡಿಗೆ ಹೋದಾಗ, ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ನಾಚಿಕೆ ಮುಳ್ಳಿನ ಎಲೆಯನ್ನು ಜಜ್ಜಿ, ಗಾಯಕ್ಕೆ ಹಚ್ಚಿದರೆ, ಕೂಡಲೇ ರಕ್ತ ಸೋರುವಿಕೆ ಕಡಿಮೆಯಾಗಿ, ಗಾಯವು ಬೇಗನೆ ವಾಸಿಯಾಗುತ್ತದೆ.
ಚರ್ಮ ಸಂಬಂಧಿತ ಖಾಯಿಲೆಗೆ ಮುಟ್ಟಿದರೆ ಮುನಿ ಪರಿಹಾರ
ಚರ್ಮದಲ್ಲಿನ ತುರಿಕೆ ಮತ್ತು ಇತರ ಸಾಮಾನ್ಯ ಚರ್ಮ ರೋಗಗಳನ್ನು ಹೋಗಲಾಡಿಸಲು, ಮುಟ್ಟಿದರೆ ಮುನಿ ಗಿಡದ ರಸವನ್ನು, ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
ಪುರುಷರಲ್ಲಿನ ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆಗೆ ಮುಟ್ಟಿದರೆ ಮುನಿಗಿಡದಿಂದ ಪರಿಹಾರ
ಇತ್ತೀಚಿಗೆ ಅನೇಕ ಪುರುಷರಲ್ಲಿ, 40, 50 ವರ್ಷಗಳ ನಂತರದಲ್ಲಿ ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆ ಕಂಡುಬರುವುದು ಕಾಣಿಸುತ್ತದೆ. ಇದು ಹೆಚ್ಚು ಕಿರಿ ಕಿರಿ ಮಾಡುವಂತಹ ತೊಂದರೆ, ಇಲ್ಲಿ ಪ್ರೊಸ್ಟೇಟ್ ಗ್ರಂಥಿಯು ಉಬ್ಬಿಕೊಂಡಿರುತ್ತದೆ. ಇದು ಪುನಃ ತನ್ನ ಮೊದಲಿನ ಸ್ಥಿತಿಗೆ ಬರಲು ಮುಟ್ಟಿದರೆ ಮುನಿ ಸಹಾಯ ಮಾಡುತ್ತದೆ. ಇಂತಹ ಸಮಸ್ಯೆ ಇರುವಾಗ, ಮುಟ್ಟಿದರೆ ಮುನಿಯ ಸೊಪ್ಪನ್ನು ತೆಗೆದುಕೊಂಡು, ಚೆನ್ನಾಗಿ ಅರೆದು, ಉಂಡೆಯನ್ನು ನಲವತ್ತೈದು ದಿನಗಳ ಕಾಲ ಪ್ರತಿದಿನ ತೆಗೆದುಕೊಳ್ಳುವುದರಿಂದ, ಸಮಸ್ಯೆ ಗುಣವಾಗಲು ಸಹಾಯವಾಗುತ್ತದೆ.
ಮಹಿಳೆಯರಲ್ಲಿ ಗರ್ಭಶಾಯ ಜಾರಿದಾಗಲೂ ಸಹ ಇಂತಹ ಸಮಸ್ಯೆ ಕಾಡುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ, ಒಂದು ನಿಮಿಷವೂ ತಡೆಯಲಾಗದ ಸಂದರ್ಭ : ಇಂತವುಗಳು ಇದ್ದಾಗ ಮೇಲೆ ತಿಳಿಸಿದ ರೀತಿಯಲ್ಲಿಯೇ ಉಂಡೆಗಳ ರೀತಿಯಲ್ಲಿ ಮುಟ್ಟಿದರೆ ಮುನಿಯನ್ನು ತೆಗೆದುಕೊಳ್ಳಬಹುದು, ಇಲ್ಲವೇ ಕಷಾಯ ಮಾಡಿ ಕುಡಿಯಬಹುದು.
ಮುಟ್ಟಿದರೆ ಮುನಿ ಗಿಡವು ಮೂಲವ್ಯಾಧಿ ಸಮಸ್ಯೆಗೆ ಪರಿಹಾರವಾಗಿದೆ
ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡು, 1 ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ.
ಮುಟ್ಟಿದರೆ ಮುನಿ ಗಿಡವನ್ನು ಆಹಾರವಾಗಿಯೂ ಉಪಯೋಗಿಸಬಹುದು. ಇದರಿಂದ ತಂಬುಳಿ ಮಾಡಬಹುದು.
ಮಾಡುವ ವಿಧಾನ : ಮುಟ್ಟಿದರೆ ಮುನಿ ಗಿಡದ ಎಲೆಯನ್ನು ತೆಗೆದುಕೊಂಡು, ತುಪ್ಪದಲ್ಲಿ ಹುರಿದು, ಅದನ್ನು ತೆಂಗಿನ ತುರಿಯೊಂದಿಗೆ ಸೇರಿಸಿ ರುಬ್ಬಬೇಕು. ಇದಕ್ಕೆ ಸ್ವಲ್ಪ ಜೀರಿಗೆ, ಕಾಳುಮೆಣಸಿನ ಪುಡಿ ಮತ್ತು ಸಾಸಿವೆಯ ಒಗ್ಗರಣೆ ಹಾಕಿದರೆ ತಂಬುಳಿ ಸಿದ್ದ. ಬೇಕಾದಲ್ಲಿ ಬೆಲ್ಲ ಸೇರಿಸಿಕೊಳ್ಳಬಹುದು.
Very nice