ಪುದಿನಾ ಸೊಪ್ಪು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಒಂದು ಹಸಿರು ಸೊಪ್ಪಾಗಿದೆ. ಅಲ್ಲದೆ ಇದು ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಪುದಿನಾ ಸೊಪ್ಪು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದು ಟೂತ್ ಪೇಸ್ಟ್ ನ ಸುವಾಸನೆ ಯನ್ನು ಹೊಂದಿರುತ್ತದೆ. ಆದರೆ ಪುದಿನಾ ಸೊಪ್ಪಿನ ಸೇವನೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಒಳ್ಳೆಯದು. ಪುದಿನಾ ಒಂದು ಸುಗಂಧಭರಿತ ಸಸ್ಯವಾಗಿರುವುದ ಜೊತೆಗೆ ರೋಗಾಣುಗಳನ್ನು ನೈಸರ್ಗಿಕವಾಗಿ ಹೊಡೆದೋಡಿಸುವ ಗುಣವನ್ನು ಹೊಂದಿದೆ. ಇದನ್ನು ಸೋಪು, ಟೂತ್ ಪೇಸ್ಟ್ ಮತ್ತು ಮೌತ್ ವಾಷ್ ಗಳ ತಯಾರಿಕೆಯಲ್ಲಿ ತುಂಬಾ ಉಪಯೋಗಿಸಲಾಗುತ್ತದೆ. ಪುದಿನಾ ಸೊಪ್ಪು ಹೆಚ್ಚು ಔಷಧಿಯ ಗುಣಗಳ ಆಗರವಾಗಿದೆ.
ಪುದಿನಾ ಎಲೆಗಳನ್ನು ಪಲಾವ್, ಚಟ್ನಿ, ತಂಬುಳಿ ಹಾಗು ಇನ್ನಿತರ ತರಕಾರಿ ಖ್ಯಾದ್ಯಗಲ್ಲಿ ಬಳಸುತ್ತಾರೆ. ಜೊತೆಗೆ ಎಷ್ಟೋ ಬಗೆಯ ಮಾಂಸದ ಅಡುಗೆಗಳಲ್ಲೂ ಇದರ ಬಳಕೆಗೇನು ಕಡಿಮೆ ಇಲ್ಲ. ಪುದಿನಾ ಬಳಸಿ ಎಣ್ಣೆಯನ್ನು ತಯಾರಿಸುತ್ತಾರೆ. ಪುದಿನಾ ಎಣ್ಣೆಯು ಮಾರುಕಟ್ಟೆಯಲ್ಲೂ ಲಭ್ಯವಿರುತ್ತದೆ. ಇದು ಕೂಡ ಅನೇಕ ರೋಗಗಳ ನಿವಾರಣೆಗೆ ಸಹಕಾರಿಯಾಗಿದೆ.
ಜೀರ್ಣ ಕ್ರಿಯೆ ಹೆಚ್ಚಿಸಲು ಪುದಿನಾ ಸಹಾಯಕವಾಗಿದೆ
ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು, ಪುದಿನಾ ಎಲೆಯ ರಸವನ್ನು ತೆಗೆದು, ಸ್ವಲ್ಪ ಜೇನುತುಪ್ಪ ಸೇರಿಸಿ, ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ ಮತ್ತು ಇದು ಹಸಿವನ್ನು ಹೆಚ್ಚಿಸುವಲ್ಲಿಯೂ ಸಹಾಯ ಮಾಡುತ್ತದೆ. ಪುದಿನಾ ಎಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು.
ಕರುಳಿನ ಆರೋಗ್ಯಕ್ಕೆ ಪುದಿನಾ ಉತ್ತಮ ಔಷಧವಾಗಿದೆ
ಪುದಿನಾ ಎಲೆಗಳ ಕಷಾಯ ಮಾಡಿಕೊಂಡು ನಿಯಮಿತವಾಗಿ ಕುಡಿಯುವವರಿಂದ ಕರುಳು ಆರೋಗ್ಯವಾಗಿರುತ್ತದೆ. ಮುಂದೆ ಕರುಳಿನ ಸಮಸ್ಯೆ ಕೂಡ ಬರದಂತೆ ಇದು ತಡೆಯುತ್ತದೆ.
ಚರ್ಮದ ಆರೋಗ್ಯವನ್ನು ಪುದಿನಾ ಕಾಪಾಡುತ್ತದೆ
ಚರ್ಮದ ಮೇಲೆ ಆಗುವ ಸಣ್ಣ ಪುಟ್ಟ ಅಲರ್ಜಿ ಗುಳ್ಳೆಗಳನ್ನು ಇದು ನಿವಾರಣೆ ಮಾಡುತ್ತದೆ. ಪುದಿನಾ ಎಲೆಗಳನ್ನು ಜಜ್ಜಿ ಅದರ ರಸ ತೆಗೆದುಕೊಂಡು, ಚರ್ಮದ ಆ ಜಾಗಕ್ಕೆ ಹಚ್ಚುವುದರಿಂದ ಗುಳ್ಳೆಗಳ ನಿವಾರಣೆಯಾಗುತ್ತದೆ. ಜೊತೆಗೆ ಚರ್ಮದ ಮೇಲಾಗುವ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು.
ಪುದಿನಾ ಸೊಪ್ಪಿನಿಂದ ನೆಗಡಿ ಕೆಮ್ಮಿನ ನಿವಾರಣೆ
ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಪುದಿನಾ ಎಲೆಯ ಕಷಾಯವನ್ನು ಮಾಡಿ, ದಿನಕ್ಕೆ ೨ ಬಾರಿ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಹತೋಟಿಗೆ ಬರುತ್ತದೆ.
ಕೂದಲಿನ ಆರೋಗ್ಯಕ್ಕೆ ಪುದಿನಾ
ಪುದಿನಾ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ತಲೆಗೆ ಹಚ್ಚಿಕೊಂಡು, ಒಂದು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ, ಕೂದಲು ಬೆಳೆಯಲು ಬೇಕಾಗುವ ಪೋಷಕಾಂಶಗಳ್ಳನ್ನು ಪುದಿನಾ ಒದಗಿಸುತ್ತದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸುವುದರ ಜೊತೆಗೆ ತಲೆಯ ಹೊಟ್ಟು ನಿವಾರಣೆಗೂ ಪುದಿನಾ ಸಹಾಯಕವಾಗಿದೆ.
ವಾಂತಿ ವಾಕರಿಕೆಯ ಲಕ್ಷಣವನ್ನು ಪುದಿನಾ ಕಡಿಮೆ ಮಾಡುತ್ತದೆ
ವಾಂತಿ ಮತ್ತು ವಾಕರಿಕೆಯನ್ನು ಕಡಿಮೆ ಮಾಡಲು, ಪುದಿನಾ ಎಲೆಯ ರಸವನ್ನು ಈರುಳ್ಳಿ ರಸದೊಂದಿಗೆ ಸೇರಿಸಿ ತಿನ್ನುವುದರಿಂದ ವಾಂತಿ ನಿಲ್ಲುತ್ತದೆ. ಹಾಗು ಪುದಿನಾ ಎಲೆಯ ಪರಿಮಳವನ್ನು ತೆಗೆದುಕೊಳ್ಳುವುದರಿಂದ ವಾಕರಿಕೆಯ ಲಕ್ಷಣಗಳು ಕಡಿಮೆಯಾಗುತ್ತವೆ.
ಪುದಿನ ದೇಹದ ತೂಕವನ್ನು ಕಡಿಮೆ ಮಾಡುತ್ತದೆ
ಪುದಿನಾ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. ಪ್ರತಿದಿನ ಪುದಿನಾ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೊರಹೋಗುತ್ತದೆ, ಇದರಿಂದ ದೇಹದ ತೂಕವು ಕಡಿಮೆಯಾಗುತ್ತದೆ. ಜೊತೆಗೆ ದೇಹವು ಲವಲವಿಕೆಯಿಂದ ಕೂಡಿರುತ್ತದೆ.
ಪುದಿನಾ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ
ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ನೆನಪಿನ ಶಕ್ತಿ ಸ್ವಲ್ಪ ಕಡಿಮೆಯಾದರೆ. ಪುದಿನಾ ಸೊಪ್ಪಿನಿಂದ ಮನೆಯಲ್ಲೇ ಯಾವುದಾದರು ರೀತಿಯ ಖಾದ್ಯವನ್ನು ಮಾಡಿಕೊಂಡು ಸೇವಿಸಬಹುದು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
ತ್ವಚೆಯಲ್ಲಿನ ಕಳೆಯ ನಿವಾರಣೆಗೆ ಪುದಿನಾ ಸೊಪ್ಪು
ತ್ವಚೆಯಲ್ಲಿ ಮೊಡವೆಗಳ ಕಾರಣದಿಂದ ಕಲೆಗಳಾಗುತ್ತವೆ. ಹಾಗು ಧೂಳುಗಳಿಂದಲೂ ತ್ವಚೆ ಹಾಳಾಗುತ್ತದೆ. ಇದರಿಂದ ನಾವು ಮುಕ್ತಿ ಪಡೆಯಲು, ಪುದಿನಾ ಎಲೆಗಳನ್ನು ಪೇಸ್ಟ್ ಮಾಡಿಕೊಂಡು, ಮುಖಕ್ಕೆ ಲೇಪಿಸುವುದರಿಂದ ಮೊಡವೆ ಗಳ ಜೊತೆ ಕಲೆಯು ನಿವಾರಣೆಯಾಗಿ, ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತದೆ.
ರಕ್ತ ಶುದ್ದಿ ಮಾಡಲು ಪುದಿನಾ
ಪುದಿನಾ ಎಲೆಯ ರಸ ತೆಗೆದು, ಅದಕ್ಕೆ ಜೀರಿಗೆ, ನಿಂಬೆ ಹಣ್ಣಿನ ರಸ, ಜೇನು ತುಪ್ಪ ಸೇರಿಸಿ, ಪ್ರತಿ ದಿನ ಕುಡಿಯುವುದರಿಂದ ನಮ್ಮ ದೇಹದಲ್ಲಿನ ರಕ್ತ ಶುದ್ಧಿಯಾಗುತ್ತದೆ.
ಬಾಯಿಯ ದುರ್ವಾಸನೆಯನ್ನು ತಡೆಯಲು ಪುದಿನಾ ಸಹಕಾರಿ
ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಪುದಿನ ಉತ್ತಮ ಗಿಡಮೂಲಿಕೆಯಾಗಿದೆ. ಆದ್ದರಿಂದಲೇ ಇದನ್ನು ಟೂತ್ ಪೇಸ್ಟ್ ಗಳಲ್ಲಿ ಬಳಸಲಾಗುತ್ತದೆ. ಬಾಯಿಯ ದುರ್ವಾಸನೆಗೆ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಾಲೆ ಕಾರಣವಾಗುತ್ತವೆ. ಇವುಗಳನ್ನು ಹೋಗಲಾಡಿಸಲು ರಾಸಾಯನಿಕಯುಕ್ತ ಮೌತ್ ವಾಶ್ ಗಳನ್ನು ಬಳಸುವ ಬದಲು ನೈಸರ್ಗಿಕವಾದ ಪುದಿನಾ ಎಲೆಗಳನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಗಳು ಸಾಯುತ್ತವೆ. ಇದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಬಹುದು ಮತ್ತು ಹಲ್ಲುಗಳು ಕೂಡ ಹೊಳಪಿನಿಂದ ಕೂಡಿರುತ್ತವೆ.
ಪುದಿನಾವು ಮೂಗು ಕಟ್ಟಿರುವುದನ್ನು ಸರಿಪಡಿಸುತ್ತದೆ
ಶೀತವಾದಾಗ ಮೂಗು ಕಟ್ಟಿಕೊಳ್ಳುವುದು ಸಾಮಾನ್ಯ. ಇದನ್ನು ಹೋಗಲಾಡಿಸಲು ಪುದಿನಾ ಎಲೆಗಳನ್ನು ಚೆನ್ನಾಗಿ ಕುದಿಸಿರುವ ಬಿಸಿನೀರಿಗೆ ಹಾಕಿಕೊಂಡು ಅದರ ಹಬೆಯನ್ನು ಮೂಗಿಗೆ ತೆಗೆದು ಕೊಳ್ಳುವುದರಿಂದ ಮೂಗು ಕಟ್ಟಿರುವುದು ಸರಿಯಾಗಿ ಉಸಿರಾಡಲು ಸರಾಗವಾಗುತ್ತದೆ. ಹಾಗು ತಲೆ ಹಗುರ ಎನಿಸುತ್ತದೆ.
ಉಸಿರಾಟದ ತೊಂದರೆಗೆ ಪುದಿನಾ
ಪುದಿನಾ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ, ಅದರಲ್ಲಿರುವ ಮೆಂಥಾಲ್ ಎಂಬ ರಾಸಾಯನಿಕವು ಉಸಿರಾಟದ ತೊಂದರೆಯನ್ನು ದೂರಮಾಡುತ್ತದೆ.
ಪುದಿನಾ ಸೊಪ್ಪು ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಪುದಿನಾ ಎಲೆಗಳು ಸಿ ಜೀವಸತ್ವವನ್ನು ಮತ್ತು ಆಂಟಿ ಆಂಕ್ಸಿಡೆಂಡ್ ಗುಣಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ಪ್ರೀರ್ಯಾಡಿಕಲ್ ವಿರುದ್ಧ ಹೋರಾಡಿ, ಕ್ಯಾನ್ಸರ್ ಕಣಗಳನ್ನು ನಾಶಮಾಡುತ್ತದೆ. ಆದ್ದರಿಂದ ನಾವು ನಮ್ಮ ದಿನ ನಿತ್ಯದ ಆಹಾರದಲ್ಲಿ ಪುದಿನಾ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು.
ಕಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಪುದಿನಾ ಸಹಕಾರಿ
ಪುದಿನಾ ಎಲೆಗಳು ವಿಟಮಿನ್ ಏ ಮತ್ತು ಬೀಟಾ ಕ್ಯಾರೋಟಿನ್ ಅಂಶವನ್ನು ಹೊಂದಿದ್ದು, ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಆಗಾಗ ಪುದಿನಾ ಸೇವನೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.