ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸುಲಭವಾದ ಮನೆಮದ್ದುಗಳು

Share this with your friends...

ಚಳಿಗಾಲ ಎಂದಾಕ್ಷಣ ಬೆಳೆಗ್ಗಿನ ಇಬ್ಬನಿಯ ಆ ತುಂತುರು ಹನಿಗಳು ನೆನಪಾಗುತ್ತದೆ. ಇದರಿಂದ ಚಳಿಗಾಲದ ವಾತಾವರಣ ಸ್ರಷ್ಟಿಯಾಗುತ್ತದೆ. ಚಳಿಗಾಲ ಪ್ರಾರ್ರಂಭವಾಗುತ್ತಿದ್ದಂತೆಯೇ ದೇಹದಲ್ಲಿ ಕೆಲವು ಬದಲಾವಣೆಗಳು  ಕೂಡ ಪ್ರಾರಂಭವಾಗುತ್ತವೆ. ಆದರೆ ಕೆಲವರಿಗೆ ಚಳಿಗಾಲ ತುಂಬಾನೇ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ  ಚಳಿಗಾಲದಲ್ಲಿ ನಾವು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಉತ್ತಮ. ಚಳಿಗಾಲದಲ್ಲಿ ಹೆಚ್ಚಾಗಿ ಕಾಣುವ ಸಮಸ್ಯೆ ಎಂದರೆ ಅಸ್ತಮಾ, ಚರ್ಮದ ಸಮಸ್ಯೆ, ಕೆಮ್ಮು, ಜ್ವರ, ನೆಗಡಿ ಇಂತಹ ಸಮಸ್ಯೆಗಳು ಕಂಡು ಬರುತ್ತವೆ.

ಮುಖ್ಯವಾಗಿ ನಮಗೆ ಇದರಲ್ಲಿ ಚಳಿಗಾಲ ಪೂರ್ತಿ ಕಾಡುವ ಸಮಸ್ಯೆ ಎಂದರೆ ಚರ್ಮದ ಸಮಸ್ಯೆ. ಚಳಿಗಾಲದ ಕೊರೆಯುವ ಚಳಿ ಹಾಗೂ ಬಿಸುವಂತ ಗಾಳಿಗೆ ದೇಹದ ಚರ್ಮವು ತೇವಾಂಶವನ್ನು ಕೆಳೆದುಕೊಂಡು ಬಿರಿದಂತಾಗುವುದು, ಕಾಲಿನ ಹಿಮ್ಮಡಿ ಒಡೆಯುವುದು, ಮತ್ತು ಕೆಲವರಿಗೆ ತುಟಿಯು ಒಡೆದು ರಕ್ತ ಸೋರುವ ಸಂಭವ ಇರುತ್ತದೆ. ಅದ್ದರಿಂದ ನಾವು ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ಹೆಚ್ಚಾಗಿ ಮಾಡಬೇಕು. 

ಅದರಲ್ಲೂ ಹೆಣ್ಣು ಮಕ್ಕಳಿಗೆ ಚರ್ಮದ ಆರೈಕೆ ಮಾಡುವುದು ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳೋದು ತುಂಬಾನೇ ಮುಖ್ಯವಾಗಿರುತ್ತದೆ. ಆದ್ದರಿಂದ ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನ ಉಪಯೋಗಿಸಿಕೊಂಡು ಹೇಗೆ ಚರ್ಮದ ಆರೈಕೆಯನ್ನು ಮಾಡ್ಕೊಳ್ಬಹುದು  ಎಂಬುದನ್ನ ನೀವು ಈ ಆರ್ಟಿಕಲ್ನಲ್ಲಿ ನೋಡಬಹುದು.

ಚರ್ಮದ ರಕ್ಷಣೆ 

ಚಳಿಗಾಲ ಬಂತು ಅಂದ್ರೆ ಸಾಕು ಕೆಲವರಿಗೆ ಕಿರಿಕಿರಿಯಾಗುತ್ತದೆ. ಚರ್ಮವು ತೇವಾಂಶವನ್ನು ಕೆಳೆದಿಕೊಂಡು ಚರ್ಮವು ಒಣಗಿದಂತಾಗುತ್ತದೆ. ಆದ್ದರಿಂದ ನಾವು ಪ್ರತಿದಿನ ಸ್ನಾನ ಮಾಡುವ ಮೊದಲು ಮೈಗೆ ಕೋಬ್ಬನ್ ಎಣ್ಣೆಯನ್ನು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮವು ತೇವಾಂಶನದಿಂದ ಕೂಡಿರುತ್ತದೆ. ಹಾಗೂ ಚರ್ಮವು ಬಿರಿದಂತಾಗುವುದಿಲ್ಲ.

ಪ್ರತಿದಿನ ಸ್ನಾನ ಮಾಡುವಾಗ ರಾಸಾಯನಿಕವಾಗಿ ಮಾಡಿದ ಸೋಪುಗಳನ್ನು ಬಳಸುವ ಬದಲು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಚರ್ಮದ ರಕ್ಷಣೆಯನ್ನು ಮಾಡಬಹುದು.

ಸ್ನಾನ ಮಾಡುವ ಮೊದಲು ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಹಾಲು ಅಥವಾ ನೀರನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಇದನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚರ್ಮವು ಮೃದುವಾಗುತ್ತದೆ. ಹಾಗೂ ಚರ್ಮಕ್ಕೆ ಹೊಳಪು ಕೂಡ ಬರುತ್ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು?

ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು?

ಚಳಿಗಾಲ ಬಂತು ಅಂದ್ರೆ  ಸಾಕು ಮಹಿಳೆಯರಿಗೆ ದೊಡ್ಡ ತಲೆ ನೋವು. ಏಕೆಂದರೆ ಮುಖದ ಚರ್ಮವು ತೇವಾಂಶವನ್ನು ಕಳೆದುಕೊಂಡು ಒಣಗಿದ ಹಾಗೆ ಇರುತ್ತದೆ. ಮತ್ತು ತುಟಿಯ ವಿಷಯಕ್ಕೆ ಬಂದ್ರೆ ತುಟಿಯು ಕೂಡ ಒಣಗಿ, ಕೆಲವೊಮ್ಮೆ ರಕ್ತ ಬರುವ ಸಂಭವವೂ ಇರುತ್ತದೆ. ಇದನ್ನು ಹೋಗಲಾಡಿಸಲು ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು, ಸುಲಭವಾದ ಮನೆಮದ್ದುಗಳಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ, ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.Share this with your friends...

Leave a Comment

Your email address will not be published. Required fields are marked *