ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು?

Share this with your friends...

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಚರ್ಮವು ತುಂಬಾ ಬದಲಾವಣೆಯಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಚಳಿಗಾಲದಲ್ಲಿ ಚರ್ಮವು ಒಣಗಿ ತೇವಾಂಶವನ್ನು ಕಳೆದುಕೊಂಡಿರುತ್ತದೆ. ಇದರಿಂದ ಚರ್ಮವು ಒರಟಾಗುತ್ತದೆ. ಅದರಲ್ಲೂ ಮುಖದ ಚರ್ಮವು ಒಣಗಿದಂತಾಗುತ್ತದೆ. ಇದರಿಂದ ಮಹಿಳೆಯರಿಗೆ ಸೌಂದರ್ಯವು ಕೂಡ ಹಾಳಾಗುತ್ತದೆ. ಮತ್ತು  ತುಟಿಯ ವಿಷಯಕ್ಕೆ ಬಂದ್ರೆ ತುಟಿಯು ಕೂಡ ಒಣಗಿ, ಕೆಲವೊಮ್ಮೆ ರಕ್ತ ಬರುವ ಸಂಭವವೂ ಇರುತ್ತದೆ. ಇದನ್ನು ಹೋಗಲಾಡಿಸಲು ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

  • ಪ್ರತಿದಿನ ಮಲಗುವ ಮೊದಲು ಅಥವಾ ಸ್ನಾನ ಮಾಡುವ ಮೊದಲು ಒಂದು ಚಮಚದಷ್ಟು ಹಾಲಿನ ಕೆನೆಗೆ 1/4 ಚಮಚ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಪೇಸ್ಟ ನಂತೆ ಮಾಡಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಲೇಪಿಸಿ. ಹಾಗೆ ಸ್ವಲ್ಪ ಹೊತ್ತು ಮಸಾಜ್ ಮಾಡಿಕೊಳ್ಳಿ. ನಂತರ ಅದು ಒಣಗಿದ ಮೇಲೆ ಬಿಸಿ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಜೊತೆ ಮುಖಕ್ಕೆ ಹೊಳಪು ಕೂಡ ಬರುತ್ತದೆ. ಪ್ರತಿದಿನ ಆಗೋದಿಲ್ಲ ಅಂತಾದ್ರೆ ವಾರದಲ್ಲಿ 3  ಬಾರಿ ಇದನ್ನ ಮಾಡಬಹುದು.
  • ಸೌತೆಕಾಯಿ ಕೂಡ ಒಂದು ತರದಲ್ಲಿ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ಇದು ಆರೋಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಕೂಡ ಕಾಪಾಡುತ್ತ್ತದೆ. ಸೌತೆಕಾಯಿಯನ್ನು ಪೇಸ್ಟ್ ಮಾಡಿಕೊಂಡು ವಾರದಲ್ಲಿ ಮೂರೂ ಬಾರಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಕೂಡ ಚರ್ಮವು ಮೃದುವಾಗುತ್ತದೆ. ಹಾಗು ಕಣ್ಣಿನ ಸುತ್ತ ಇರುವ ಕಪ್ಪು ಕಲೆಯನ್ನು ನಿಧಾನವಾಗಿ ನಿವಾರಣೆ ಮಾಡುತ್ತದೆ.

ಟೊಮೆಟೊ ಕೂಡ ಒಂದು ತರದಲ್ಲಿ ಸೌಂಧರ್ಯ ವರ್ಧಕ. ಟೊಮೆಟೊದ ೧/೨ ಭಾಗವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಅದನ್ನು ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. ಕನಿಷ್ಠ 10 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಅದು ಒಣಗಿನ ಮೇಲೆ ಮುಖವನ್ನು ತೊಳೆಯಬೇಕು. ಟೊಮೆಟೊ ಮುಖದ ಚರ್ಮವು ತಾಜಾ ವಾಗಿರುವಂತೆ ನೋಡಿಕೊಳ್ಳುವ ಗುಣವನ್ನು ಹೊಂದಿದೆ. ಹಾಗು ಮುಖದ ಮೇಲಾಗುವ ಸಣ್ಣ ರಂಧ್ರಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಇದರಿಂದ ಮೊಡವೆಗಳು ಅಥವಾ ಗುಳ್ಳೆಗಳು ಏಳುವುದು ಕೂಡ ಕಡಿಮೆಯಾಗುತ್ತವೆ.

ಹಾಲು ಮತ್ತು ಜೇನು ತುಪ್ಪ: ಸ್ವಲ್ಪ ಹಾಲಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಮುಖಕ್ಕೆ ಲೇಪಿಸಿಕೊಂಡು, 5  ನಿಮಿಷಗಳ ಕಾಲ ಹೇಗೆ ಬಿಡಿ. ನಂತರ ಮುಖವನ್ನು ತೊಳೆವುದರಿಂದ ಮುಖದ ಚರ್ಮವು ಉತ್ತಮವಾಗುತ್ತದೆ.

ಚಳಿಗಾಲದಲ್ಲಿ ತುಟಿಯ ಆರೈಕೆ 

ಮುಖದ ಸೌಂದರ್ಯವನ್ನು ಹೆಚ್ಚಿಸುವಂತ ತುಟಿಯ ಆರೈಕೆಯೂ ತುಂಬಾ ಮುಖ್ಯವಾಗಿರುತ್ತದೆ. ಎಲ್ಲ ಮಹಿಳೆಯರಿಗೂ ತಮ್ಮ ತಮ್ಮ ತುಟಿ ಕೆಂಪಾಗಿರಬೇಕು ಎನ್ನುವ ಆಸೆ. ಆದರೆ ಈ ಚಳಿಗಾಲದಲ್ಲಿ ತುಟಿಯು ಒಣಗಿ ಹೋಗಿ, ತೇವಾಂಶವನ್ನು ಕಳೆದುಕೊಂಡಿರುತ್ತದೆ. ಕೆಲವರಿಗಂತೂ ತುಟಿ ಒಡೆದು  ರಕ್ತ ಸೋರುತ್ತಿರುತ್ತದೆ. ಚಳಿಗಾಲದಲ್ಲಿ ಬಿಸುವಂತ ಗಾಳಿಗೆ ತುಟಿಗಳು ಒಣಗಿ ಕಿರಿ ಕಿರಿಯನ್ನುಂತಾಗುತ್ತದೆ. ನಾವು ಮನೆಯಲ್ಲಿರುವ ಕೆಲವು ಪದಾರ್ತಗಳನ್ನ ಉಪಯೋಗಿಸಿಕೊಂಡು ತುಟಿಯ ಸೌಂದರ್ಯನ್ನು ಕಾಪಾಡಿಕೊಳ್ಳಬಹುದು.

ರಾತ್ರಿ ಮಲಗುವಾಗ ತುಟಿಗಳಿಗೆ ಬೆಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ತುಟಿಗಳು ಮೃದುವಾಗುತ್ತವೆ. ಹಾಗು ತುಟಿಯು ಒಡೆಯುವುದು ಕಡಿಮೆಯಾಗುತ್ತದೆ.


Share this with your friends...

Leave a Comment

Your email address will not be published. Required fields are marked *