ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus)

Share this with your friends...

ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು  ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಸೊಪ್ಪು ಹೆಚ್ಚಿನ ನಾರಿನಂಶವನ್ನು ಹೊಂದಿರುತ್ತದೆ. ಹಾಗೆ ಇದು ಪ್ರೊಟೀನ್, ವಿಟಮಿನ್ಸ, ಕ್ಯಾಲಿಸಿಯಂ, ಐರನ್, ಮೆಗ್ನೇಷಿಯಂ  ಇನ್ನು ಮುಂತಾದ ಪೋಷಕಾಂಶಗಳನ್ನು ಹೊಂದಿದೆ. ಮತ್ತು ಸೊಪ್ಪುಗಳು ದೇಹಕ್ಕೆ ತಂಪನ್ನು ನೀಡುತ್ತವೆ. ಇದರ ವೈಜ್ಞಾನಿಕ ಹೆಸರು “Amaranthus”ಹರಿವೆ ಸೊಪ್ಪು ಅನೇಕ ಔಷಧ ಗುಣಗಳನ್ನು ಹೊಂದಿದೆ.

ಹರಿವೆ ಸೊಪ್ಪು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಹರಿವೆ ಸೊಪ್ಪನ್ನ ಅಥವಾ ಹರಿವೆ ಸೊಪ್ಪನ್ನು ನಾವು ನಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ.

ಮಹಿಳೆಯರಲ್ಲಿ ಋತುಸ್ರಾವವನ್ನು ಕಡಿಮೆಮಾಡಲು ಹರಿವೆ ಸೊಪ್ಪು ಸಹಕಾರಿ.

ಕೆಲವು ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಅತಿಯಾದ ಋತುಸ್ರಾವ ಉಂಟಾಗುವ ಸಮಸ್ಯೆ ಇರುತ್ತದೆ. ಇದಕ್ಕೆ ಹರಿವೆಸೊಪ್ಪು ದಿವ್ಯಔಷಧವಾಗಿದೆ. ದಿನನಿತ್ಯ ನಿಯಮಿತವಾಗಿ ಡ್ನಟಿನ ಸೊಪ್ಪು ಹಾಗು ಅದರ ಎಲೆ ಕಾಂಡಗಳನ್ನು ನಮ್ಮ ಆಹಾರದಲ್ಲಿ ಉಪಯೋಗಿಸುವುದರಿಂದ ಅತಿಯಾದ ಋತುಸ್ರಾವವಾದರೆ ಕಡಿಮೆಯಾಗುತ್ತದೆ.

ಹರಿವೆ ಸೊಪ್ಪು ಮಕ್ಕಳ ಬೆಳೆವಣಿಗೆಗೆ ತುಂಬಾ ಸಹಕಾರಿ

ಚಿಕ್ಕ ಮಕ್ಕಳಿಗೆ ಹರಿವೆಸೊಪ್ಪಿನ ರಸ , ನಿಂಬೆರಸ ಮತ್ತು ಜೇನುತುಪ್ಪ ಬೆರಸಿ ಕುಡಿಸುವುದರಿಂದ ಇದು ಮಕ್ಕಳ ಬೆಳೆವಣಿಗೆಗೆ ಸಹಾಯವಾಗುತ್ತದೆ.

ಹರಿವೆ ಸೊಪ್ಪು ಬಾಣಂತಿಯರಲ್ಲಿ ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ.

ಹರಿವೆ ಸೊಪ್ಪನ್ನು ಬಾಣಂತಿಯರು ತಮ್ಮ ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ.

ಹರಿವೆ ಸೊಪ್ಪು ಮಲಬಧ್ದತೆಯನ್ನು ನಿವಾರಣೆ ಮಾಡುತ್ತದೆ.

ಹರಿವೆ ಸೊಪ್ಪನ್ನು ನಾವು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಗೆ ಸಹಾಯವಾಗಿ ಮಲಬಧ್ದತೆಯನ್ನು ದೂರ ಮಾಡುತ್ತದೆ.

ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ.

ಕೆಲವು ಹೆಣ್ಣು ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂತವರು ಹರಿವೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಕೂದಲಿಗೆ ದೊರಕುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಬಾಯಿಯ ಹುಣ್ಣನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ

ಬಾಯಿಯಲ್ಲಿ ಹುಣ್ಣು ಆದವರು ಹರಿವೆ ಸೊಪ್ಪನ್ನು ಜಗಿಯುವುದರಿಂದ ಅಥವಾ ಇನ್ನಿತರ ಖಾದ್ಯಗಳನ್ನ ತಯಾರಿಸಿಕೊಂಡು ತಿನ್ನುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.ಅಲ್ಲದೆ ವಸಡುಗಳ ಸಮಸ್ಯೆಯು ಇದರಿಂದ ಕಡಿಮೆಯಾಗುತ್ತದೆ.

 

ಮಧುಮೇಹ ರೋಗಿಗಳಿಗೂ ತುಂಬಾ ಸಹಕಾರಿ

ಹರಿವೆ ಸೊಪ್ಪನ್ನ  ಉಪಯೋಗಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನ ಸಮತೋಲನದಲ್ಲಿಡುತ್ತದೆ 

ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಹರಿವೆ ಸೊಪ್ಪನ್ನ ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.

ಹರಿವೆ ಸೊಪ್ಪು ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುತ್ತದೆ. ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ. 

ನೀವು ನಮ್ಮ ವೆಬ್ಸೈಟ್ ನ್ನು follow ಮಾಡುವುದರಿಂದ ನಾವು ಪಬ್ಲಿಶ್ ಮಾಡುವ ಎಲ್ ಆರ್ಟಿಕಲ್ ಗಳ ನೋಟಿಫಿಕೇಶನ್ ಗಳು ಕೂಡ ನಿಮ್ಮ್ ಮೊಬೈಲ್ ಗೆ ಬರುತ್ತವೆ


Share this with your friends...

1 thought on “ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus)”

Leave a Comment

Your email address will not be published. Required fields are marked *