ದಾಲ್ಚಿನ್ನಿ ಎಂಬುದು ವಿಶ್ವದ ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುವಾಗಿದೆ. ಭಾರತೀಯ ಮಸಾಲಾ ಪದಾರ್ಥಗಳಲ್ಲಿ ಇದು ಪ್ರಮುಖವಾದದ್ದಾಗಿದೆ. ಕೇವಲ ಭಾರತವಲ್ಲದೆ ಇಡೀ ವಿಶ್ವದವರೆ ಇದನ್ನು ಅಡುಗೆ ಪದಾರ್ಥವಾಗಿ ಬಳಸುತ್ತಾರೆ. ಇದರಿಂದ ಸಾಕಷ್ಟು ಲಾಭಗಳಿವೆ. ದಾಲ್ಚಿನ್ನಿಯಲ್ಲಿರುವಂತಹ ಎಣ್ಣೆಯ ಅಂಶ ಮತ್ತು ಆಂಟಿ ಆಕ್ಸಿಡೆಂಟ್, ಆಂಟಿ ಇಂಪ್ಲಾಮೆಟರಿ ಹಾಗೂ ಆಂಟಿ ಮೈಕ್ರೋಬಿಯಲ್ ಗುಣಗಳು ದಾಲ್ಚಿನ್ನಿಯನ್ನು ಪ್ರಸಿದ್ಧವಾದ ಪದಾರ್ಥವನ್ನಾಗಿ ಮಾಡಿವೆ. ಅಷ್ಟೇ ಅಲ್ಲದೆ ದಾಲ್ಚಿನ್ನಿಯಲ್ಲಿ ಸಕ್ಕರೆ ಕಾಯಿಲೆಯನ್ನು ತಗ್ಗಿಸುವ, ಲಿಪಿಡ್ನ ಅಂಶವನ್ನು ತಗ್ಗಿಸುವ ಮತ್ತು ಹೃದಯ ಸಂಬಂಧಿ ರೋಗಗಳ ಬರುವಿಕೆಯನ್ನು ತಡೆಗಟ್ಟುವ ಹಲವಾರು ಅಂಶಗಳಿವೆ. ಆಶ್ಚರ್ಯವೇನು ಎಂದರೆ ಇದು ಕೇವಲ ದೈಹಿಕ ಆರೋಗ್ಯವನ್ನು ಕಾಪಾಡುವುದಷ್ಟೇ ಅಲ್ಲದೆ ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ. ಕೆಲವೊಂದು ಮೆದುಳಿಗೆ ಸಂಬಂಧಿಸಿದ ಕಾಯಿಲೆಯ ವಿರುದ್ಧ ಹೋರಾಡುವ ಮೂಲಕ ದಾಲ್ಚಿನ್ನಿ ನಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ. ದಾಲ್ಚಿನ್ನಿಯ ಚಕ್ಕೆಯು ವಿಶ್ವದಾದ್ಯಂತ ಮಸಾಲಾ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ. ಆದರೆ ಇದು ಕೇವಲ ಆಹಾರ ಪದಾರ್ಥವಾಗಿರದೆ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿದೆ .ಇಡೀ ವಿಶ್ವದಲ್ಲಿ ಸುಮಾರು 250 ಜಾತಿಯ ದಾಲ್ಚಿನ್ನಿ ವರ್ಗಗಳನ್ನು ನಾವು ಕಾಣಬಹುದು .ದಾಲ್ಚಿನ್ನಿ ಉಪಯೋಗ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಅದರ ಸುವಾಸನೆಯ ಕಾರಣದಿಂದಾಗಿ ಹಲವಾರು ನಿತ್ಯೋಪಯೋಗಿ ವಸ್ತುಗಳಾದಂತಹ ಸುಗಂಧ ದ್ರವ್ಯ ಮುಂತಾದವುಗಳಲ್ಲಿ ಸಹ ಕಂಡು ಬಂದಿದೆ.
ದಾಲ್ಚಿನ್ನಿಯನ್ನು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹ ಉಪಯೋಗಿಸುತ್ತಾರೆ. ಸಿಹಿಯಾದ ರುಚಿಯನ್ನು ಹೊಂದಿರುವಂತಹ ದಾಲ್ಚಿನ್ನಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬಾಯಿಯಲ್ಲಿ ಇಟ್ಟು ಅಗಿಯುವುದರಿಂದ ನಮ್ಮ ಬಾಯಿಯ ದುರ್ವಾಸನೆ ಹೋಗುತ್ತದೆ. ಇದರ ಜೊತೆಗೆ ದಾಲ್ಚಿನ್ನಿ ಕರುಳಿನ ಆರೋಗ್ಯವನ್ನು ಸಹ ಹೆಚ್ಚಿಸುವುದರಿಂದ ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ. ಡಾಲ್ಫಿಯಲ್ಲಿ ರಕ್ತ ಹೆಪ್ಪುಗಟ್ಟುವಂತಹ ಅಂಶ ಒಂದಿದೆ. ಇದು ಹೆಚ್ಚಿನ ರಕ್ತಸ್ರಾವವನ್ನು ತಡೆಯುತ್ತದೆ ಮತ್ತು ರಕ್ತದ ಸಂಚಾರವನ್ನು ಹೆಚ್ಚು ಮಾಡುತ್ತದೆ. ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಗರ್ಭಕೋಶ ಮುಂತಾದ ಮುಖ್ಯ ಭಾಗಗಳಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ದಾಲ್ಚಿನ್ನಿಯನ್ನು ಕುಟ್ಟಿ ಪುಡಿ ಮಾಡಿ ಹಲ್ಲು ಮತ್ತು ಬಾಯಿಯನ್ನು ಸ್ವಚ್ಛಗೊಳಿಸಲು ಬಳಸುತ್ತಿದ್ದರು. ಅಷ್ಟೇ ಅಲ್ಲದೆ ಬಹಳಷ್ಟು ಹಲ್ಲಿಗೆ ಸಂಬಂಧಿಸಿದ ತೊಂದರೆಗಳು, ಹಲ್ಲಿನ ನೋವು ಮುಂತಾದವುಗಳಿಗೆ ಇದನ್ನು ಮದ್ದಾಗಿ ಬಳಸುತ್ತಿದ್ದರು.ದಾಲ್ಚಿನ್ನಿ ಮರಗಳ ತೊಗಟೆಯನ್ನು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುತ್ತೇವೆ. ದಾಲ್ಚಿನ್ನಿ ಮರದ ಕಾಂಡವನ್ನು ಕತ್ತರಿಸಿ, ಅದರ ಒಳಭಾಗಾದಲ್ಲಿರುವ ತೊಗಟೆಯು ಮಾತ್ರ ಬಳಸಲಾರ್ಹವಾಗಿದೆ.
ಹೃದಯವನ್ನು ಆರೋಗ್ಯವಾಗಿಡಲು ದಾಲ್ಚಿನ್ನಿಯ ಉಪಯೋಗ
ಇಂದಿನ ಕಾಲದಲ್ಲಿ ಹೆಚ್ಚಾಗುತ್ತಿರುವ ಪಾಶ್ಚಿಮಾತ್ಯ ಜೀವನ ಶೈಲಿಯಿಂದ ಮತ್ತು ಆಹಾರ ಪದ್ಧತಿಯಿಂದ ಹಲವಾರು ರೋಗಗಳು ಕಂಡುಬರುತ್ತವೆ. ಅದರಲ್ಲಿ ಮುಖ್ಯವಾದದ್ದೆಂದರೆ ಹೃದಯಕ್ಕೆ ಸಂಬಂಧಿಸಿದ ರೋಗಗಳು. ಎಷ್ಟೇ ಔಷಧೂಪಚಾರಗಳನ್ನು ಮಾಡಿದರು ಬೆಂಬಿಡದ ಭೂತದಂತೆ ಕಾಡುವ ಹೃದಯ ಸಂಬಂಧಿ ರೋಗಗಳಿಗೆ ಒಳ್ಳೆಯ ಮದ್ದು ಎಂದರೆ ಅದು ದಾಲ್ಚಿನ್ನಿ ಉಪಯೋಗ. ದಿನನಿತ್ಯ ಅರ್ಧ ಅಥವಾ ಒಂದು ಚಮಚದಷ್ಟು ದಾಲ್ಚಿನ್ನಿ ಪುಡಿಯ ಸೇವನೆಯಿಂದ ಇಂತಹ ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದು. ದಾಲ್ಚಿನ್ನಿಯು ನಮ್ಮ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಮತ್ತು ಬೇಡದ ಕೊಬ್ಬಿನ ಅಂಶವನ್ನು ತಗ್ಗಿಸುವುದರ ಮೂಲಕ ಹೃದಯವನ್ನು ಆಪತ್ತಿನಿಂದ ಕಾಪಾಡುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಹೋಗಲಾಡಿಸಲು ದಾಲ್ಚಿನ್ನಿಯನ್ನು ಸೇವಿಸುವ ಇನ್ನೊಂದು ವಿಧಾನವೆಂದರೆ ದಾಲ್ಚಿನ್ನಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ ಸೇವಿಸುವುದು. ಮಾನವನ ದೇಹದಲ್ಲಿ ಇನ್ಸುಲಿನ ಉತ್ಪತ್ತಿಯಾಗುವುದು ಅವಶ್ಯಕವಾಗಿದೆ .ಏಕೆಂದರೆ ಇನ್ಸುಲಿನ್ ಮಾನವನ ದೇಹದ ಶಕ್ತಿ ಸಾಮರ್ಥ್ಯವನ್ನು ಪ್ರಚೋದಿಸುತ್ತದೆ .ಅಷ್ಟೇ ಅಲ್ಲದೆ ರಕ್ತ ಸಂಚಾರಕ್ಕೂ ಸಹಾಯಕವಾಗಿದೆ. ಇಂತಹ ಇನ್ಸುಲಿಂದ ಪ್ರಮಾಣವನ್ನು ಸಮತೋಲನಗೊಳಿಸುವುದರ ಮೂಲಕ ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆಯ ಪ್ರಮಾಣವನ್ನು ಹತೋಟಿಗೆ ತರುತ್ತದೆ.
ದಾಲ್ಚಿನ್ನಿಯು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ. ಹೇಗೆಂದರೆ, ಜೀರ್ಣಾಂಗ ವ್ಯವಸ್ತೆಯಲ್ಲಿನ ಕಾರ್ಬೋಹೈಡ್ರೇಟ್ಗಳನ್ನು ತುಂಡರಿಸುವ ಕ್ರಿಯೆಯ ಗತಿಯನ್ನು ನಿಧಾನವಾಗಿಸುವ ಮೂಲಕ ರಕ್ತದೊಳಗೆ ಇರುವ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸುತ್ತದೆ.
ದಾಲ್ಚಿನ್ನಿ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ
ಜೀರ್ಣಕ್ರಿಯೆಯ ಸಮಸ್ಯೆ ಇಂದಿನ ಯುಗದಲ್ಲಿ ಎಲ್ಲರನ್ನು ಕಾಡುತ್ತದೆ. ವೇಗಭರಿತವಾದ ಜೀವನದಲ್ಲಿ ಆಹಾರವು ವೇಗವಾಗಿ ತಯಾರಾಗುವ ವಿಧಾನವನ್ನು ಹುಡುಕುತ್ತೇವೆ, ಹೀಗಿರುವಾಗ ಜೀರ್ಣಕ್ರಿಯೆಯ ಸಮಸ್ಯೆ ಎದುರಾಗುವುದು ಸರ್ವೇಸಾಮಾನ್ಯ. ದೇಹಕ್ಕೆ ಒಗ್ಗದ ಆಹಾರ ಸೇವನೆಯಿಂದಾಗಿ ಅಜೀರ್ಣದ ಸಮಸ್ಯೆ ಕಾಡುತ್ತದೆ. ಹೀಗೆ ಕಾಡುವ ಸಮಸ್ಯೆಗೆ ದಾಲ್ಚಿನ್ನಿಯು ಪರಿಹಾರವನ್ನು ಒದಗಿಸುತ್ತದೆ. ಒಂದು ಚಮಚ ದಾಲ್ಚಿನ್ನಿಯ ಪುಡಿಗೆ ಸಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ, ಹೊಟ್ಟೆಯಲ್ಲಿನ ಆಮ್ಲೀಯ ಗುಣ ಕಡಿಮೆಯಾಗಿ, ಜೀರ್ಣಕ್ರಿಯೆ ಸುಲಭವಾಗುತ್ತದೆ.
ಕ್ಯಾನ್ಸರ್ ನ್ನು ಹತೋಟಿಯಲ್ಲಿಡಲು ದಾಲ್ಚಿನಿಯ ಉಪಯೋಗ
ದಾಲ್ಚಿನ್ನಿಯ ಇನ್ನೊಂದು ವಿಶೇಷ ಗುಣವೆಂದರೆ ಕ್ಯಾನ್ಸರ್ ಕಾರಕ ಅಂಶಗಳ ವಿರುದ್ಧ ಹೋರಾಡುವುದು. ಬಹಳಷ್ಟು ವೈಜ್ಞಾನಿಕ ಸಂಶೋಧಕರು ಸಹ ಇದನ್ನೇ ಪ್ರತಿಪಾದಿಸುತ್ತಾರೆ. ಕ್ಯಾನ್ಸರ್ ಹರಡಲು ಮೂಲಕ ಕಾರಣ ಕ್ಯಾನ್ಸರ್ ಗೆ ತುತ್ತಾದಂತಹ ಒಂದು ಜೀವಕೋಶವು ಅದರ ಮೂಲ ಗುಣದಂತೆ ಇಮ್ಮಡಿಕೊಳ್ಳುವುದು. ಒಂದು ವೇಳೆ ಕ್ಯಾನ್ಸರ್ ಗೆ ತುತ್ತಾದ ಜೀವಕೋಶವು ಇಮ್ಮಡಿಕೊಳ್ಳುತ್ತಾ ಹೋದರೆ ಇಡೀ ಅಂಗಾಂಗವೇ ಕ್ಯಾನ್ಸರ್ ಗೆ ತುತ್ತಾಗುತ್ತದೆ. ಕೊನೆಯಲ್ಲಿ ಇದಕ್ಕೆ ಪರಿಹಾರವೇ ಇಲ್ಲದಂತಾಗುತ್ತದೆ. ಹೀಗಿದ್ದ ಮೇಲೆ ಕ್ಯಾನ್ಸರ್ ತಡೆಗಟ್ಟಲು ನಮ್ಮ ಮುಂದಿರುವ ಏಕೈಕ ಉಪಾಯವೆಂದರೆ ಕ್ಯಾನ್ಸರ್ ಕಾರಕ ಜೀವಕೋಶವನ್ನು ಇಮ್ಮಡಿಗೊಳ್ಳದಂತೆ ತಡೆಯುವುದು. ಬೇಕಾದಷ್ಟು ಸ್ಕ್ಯಾನ್ ಗಳು, ಕೀಮೋಥೆರಪಿಯಂತಹ ಚಿಕಿತ್ಸೆಗಳನ್ನು ಪಡೆದರೂ, ಕ್ಯಾನ್ಸರ್ ನಿಂದ ಮುಕ್ತಿ ಹೊಂದುವ ಅವಕಾಶ ಕಡಿಮೆ ಇರುತ್ತದೆ. ಆದ್ದರಿಂದ ಹಾನಿಕಾರಕವಾದಂತಹ ಈ ಕ್ಯಾನ್ಸರ್ ಜೀವಕೋಶವನ್ನು ಚಿಗುರಲ್ಲೇ ಚಿವುಟ್ಟಬೇಕು. ಇದಕ್ಕೆ ಸಹಾಯ ಮಾಡುವುದು ದಾಲ್ಚಿನ್ನಿ. ದಾಲ್ಚಿನ್ನಿಯು ಕ್ಯಾನ್ಸರ್ ಕಾರಕ ಜೀವಕೋಶಗಳು ಇಮ್ಮಡಿಕೊಳ್ಳುವುದನ್ನು ಕಡಿಮೆ ಮಾಡುವುದರ ಮೂಲಕ ಕ್ಯಾನ್ಸರ್ ಹಬ್ಬುವುದನ್ನು ತಡೆಯುತ್ತದೆ.
ತೂಕ ಇಳಿಸುವಲ್ಲಿ ದಾಲ್ಚಿನ್ನಿಯ ಪ್ರಮುಖ ಪಾತ್ರ
ಹದಗೆಟ್ಟಿರುವ ಆಹಾರ ಪದ್ಧತಿಯ ಕಾರಣದಿಂದಾಗಿ ಇಂದಿನ ಜನರಲ್ಲಿ ಬೊಜ್ಜುತನ ಕಾಡುತ್ತದೆ. ಇದರಿಂದ ಹಲವಾರು ದೈಹಿಕ ಸಮಸ್ಯೆಗಳು ಎದುರಾಗುತ್ತಿವೆ. ಜನರು ಶ್ವಾಸಕೋಶದ ಕಾಯಿಲೆಗಳಿರಬಹುದು, ಉಸಿರಾಟದ ಸಮಸ್ಯೆ, ಅಸ್ತಮಾ ಮುಂತಾದ ರೋಗಗಳಿಗೆ ತುತ್ತಾಗುತ್ತಾರೆ. ಕೆಲವರಿಗೆ ಅನುವಂಶಿಯತೆಯಿಂದ ಈ ಸಮಸ್ಯೆ ಎದುರಾದರೆ ಇನ್ನೂ ಕೆಲವರಿಗೆ ಕೆಲವೊಂದು ಔಷದಿಯ ಅಡ್ಡ ಪರಿಣಾಮವಾಗಿ ಈ ಸಮಸ್ಯೆ ಕಾಡುತ್ತದೆ. ಹೀಗಿರುವಾಗ ತೂಕ ಇಳಿಸುವಿಕೆ ಅನಿವಾರ್ಯವಾಗುತ್ತದೆ. ಇಂದಿನ ಕಾಲದಲ್ಲಿ ಜನರು ತೂಕ ಇಳಿಸಲು ಬೇಕಾದಷ್ಟು ಪ್ರಯತ್ನಗಳನ್ನ ಪಡುತ್ತಾರೆ. ಹಲವಾರು ಪತ್ಯಗಳಿಗೆ ಶರಣಾಗುತ್ತಾರೆ. ಆದರೆ ತಾವು ಪಟ್ಟ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗದೇ ಇದ್ದಲ್ಲಿ ನೊಂದುಕೊಳ್ಳುತ್ತಾರೆ. ಆದರೆ ಇದಕ್ಕೆ ಪರಿಹಾರ ಇಲ್ಲಿದೆ. ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ನೀರಲ್ಲಿ ಕುದಿಸಿ ಅದಕ್ಕೆ ಎರಡು ಚಮಚ ಜೇನು ತುಪ್ಪವನ್ನು ಬೆರೆಸಿ ಊಟಕ್ಕೆ ಅಥವಾ ಉಪಹಾರಕ್ಕೆ ಅರ್ಧ ಗಂಟೆ ಮೊದಲು ತೆಗೆದುಕೊಂಡರೆ, ಮತ್ತು ರಾತ್ರಿ ಮಲಗುವ ಪೂರ್ವದಲ್ಲಿಯೂ ಇದೇ ರೀತಿ ದಾಲ್ಚಿನ್ನಿಯನ್ನು ಸೇವಿಸಿದಲ್ಲಿ ತೂಕ ಇಳಿಸುವಿಕೆಯಲ್ಲಿ ಯಶಸ್ಸನ್ನು ಕಾಣಬಹುದು.
ವೈರಸ್ ಮತ್ತು ಬ್ಯಾಕ್ಟಿರಿಯಾ ಗಾಲ ವಿರುದ್ಧ ಹೋರಾಡುತ್ತದೆ
ಬ್ಯಾಕ್ಟೀರಿಯಾ ಮತ್ತು ಫಂಗೈ, ಇವುಗಳಿಂದ ಆಗುವಂತಹ ಸೋಂಕುಗಳನ್ನು ತಡೆಗಟ್ಟಲು ಸಹಿತ ದಾಲ್ಚಿನ್ನಿಯನ್ನು ಉಪಯೋಗಿಸಲಾಗುತ್ತದೆ. ದಾಲ್ಚಿನ್ನಿಯಲ್ಲಿರುವ ಸಿನಮಾಲ್ಡೀಹೈಡ್ ಎಂಬ ಅಂಶವು ಸೋಂಕುಗಳ ವಿರುದ್ದ ಹೊರಡಲು ಸಹಾಯ ಮಾಡುತ್ತದೆ. ನಮ್ಮ ಶ್ವಾಸಾಂಗಕ್ಕೆ ಸಂಬಂಧ ಪಟ್ಟ ಸೋಂಕನ್ನು ನಿವಾರಿಸುವಲ್ಲಿ ದಾಲ್ಚಿನ್ನಿಯು ಸಹಾಯಕವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ದಾಲ್ಚಿನ್ನಿಯು ಹಲವಾರು ವೈರಸ್ ಗಳ ವಿರುದ್ದ ಹೊರಡುವಲ್ಲಿಯೂ ಸಹಾಯಕವಾಗಿವೆ. ದಾಲ್ಚಿನ್ನಿಯಲ್ಲಿ ಹಲವು ಬಗೆ. ಅವುಗಳಲ್ಲಿ ಕ್ಯಾಷೀಯ ಎಂಬ ಜಾತಿಗೆ ಸೇರಿದ ದಾಲ್ಚಿನ್ನಿಯು ಎಚ್ ಐ ವಿ ರೋಗದ ವಿರುದ್ದ ಹೋರಾಡುತ್ತದೆ. ಕೇವಲ ಎಚ್ ಐ ವಿ ಮಾತ್ರವಲ್ಲದೆ ಸೊಳ್ಳೆಯಿಂದ ಹರಡುವ ಸೋಂಕು ಡೆಂಗ್ಯೂ, ಇನ್ ಪ್ಲುವೆಂಜ ಮುಂತಾದವುಗಳ ವಿರುದ್ದವು ಹೋರಾಡುತ್ತದೆ.
ಚರ್ಮ ರೋಗಕ್ಕೂ ದಾಲ್ಚಿನ್ನಿ ಮದ್ದಾಗಿದೆ
ದಾಲ್ಚಿನ್ನಿಯು ಚರ್ಮರೋಗಕ್ಕೆ ಒಂದು ಒಳ್ಳೆಯ ಮದ್ದಾಗಿದೆ. ವಿಪರೀತ ಬೇಸಿಗೆ ಕಾಲದ ಸಮಯದಲ್ಲಿ ಚರ್ಮಕ್ಕೆ ಹಾನಿಕಾರಕವಾದ ಸೋಂಕುಗಳು ಬರುವುದು ಸಾಮಾನ್ಯವಾಗಿದೆ. ಆದರೆ ಅದಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಸೋಂಕು ತೀವ್ರತೆಗೆ ಹೋಗಬಹುದು. ಬೆವರಿನಿಂದ ಅಥವಾ ಒಬ್ಬರಿಂದೊಬ್ಬರಿಗೆ ಹರಡುವದರ ಮೂಲಕ ಇಂತಹ ಸೋಂಕುಗಳು ತಗಲುತ್ತವೆ. ಇಂತಹ ಸೋಂಕುಗಳನ್ನು ನಿವಾರಿಸಲು ಸಹ ದಾಲ್ಚಿನಿ ಸಹಾಯ ಮಾಡುತ್ತದೆ. ದಾಲ್ಚಿನ್ನಿಯು ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ಸೋಂಕು ತಗಲಿರುವ ತುರಿಕೆಯ ಭಾಗದಲ್ಲಿ ಹಚ್ಚಿ, ಒಣಗಿದ ನಂತರ ತೊಳೆಯುವುದರಿಂದ ಸೋಂಕು ನಿವಾರಣೆಯಾಗುತ್ತದೆ.
ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ದಾಲ್ಚಿನ್ನಿ
ದಾಲ್ಚಿನ್ನಿಯ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಹಾಗೇ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿಯೂ ಸಹ ಉಪಯೋಗಿಸುತ್ತಾರೆ. ಕಾರಣವೇನೆಂದರೆ ದಾಲ್ಚಿನ್ನಿಯು ಹಲವಾರು ತ್ವಚೆಯ ಸಮಸ್ಯೆಯೊಂದಿಗೆ ಹೋರಾಡುತ್ತದೆ. ತ್ವಚೆ ಮೇಲೆ ಉಂಟಾಗುವ ಮೊಡವೆಯು ಕೆಲವೊಂದು ಬ್ಯಾಕ್ಟೀರಿಯಾದ ಪ್ರಭಾವದಿಂದಾಗಿ ಉಂಟಾಗಿರುತ್ತದೆ. ದಾಲ್ಚಿನ್ನಿ ಇಂತಹ ಬ್ಯಾಕ್ಟೀರಿಯವನ್ನು ಕೊಲ್ಲುವ ಮೂಲಕ ಮೊಡವೆಯನ್ನು ನಿವಾರಿಸುತ್ತದೆ.
ದಾಲ್ಚಿನ್ನಿಯು ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ
ದಾಲ್ಚಿನ್ನಿ ವಯಸ್ಸಾಗುವಿಕೆಯನ್ನು ತಡೆಯುವ ಅಂಶಗಳನ್ನು ಹೊಂದಿದೆ. ಕೊಲಾಜಿನ್ ಎಂಬ ಅಂಶವು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಅಥವಾ ನಿಧಾನಗೊಳಿಸುತ್ತದೆ. ಈ ಕಾರ್ಯವನ್ನು ಮಾಡುವ ಕೊಲಾಜಿನ್ ನನ್ನು ಹೆಚ್ಚಾಗಿ ಉತ್ಪತ್ತಿ ಮಾಡುವ ಮೂಲಕ ದಾಲ್ಚಿನ್ನಿ ವಯಸ್ಸಾಗುವಿಕೆಯನ್ನು ಕಡಿಮೆ ಮಾಡಿ, ಮುಖದ ಕಾಂತಿಯನ್ನು ಮತ್ತು ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಅದರೊಂದಿಗೆ ಮುಖದ ವಿನ್ಯಾಸವನ್ನು ಅಭಿವೃದ್ಧಿಗೊಳಿಸಲು ದಾಲ್ಚಿನ್ನಿಯು ಸಹಾಯ ಮಾಡುತ್ತದೆ. ಮುಖದ ಮೇಲೆ ಕಲೆ ಅಥವಾ ಮುಖದ ಕಾಂತಿ ಮಾಯವಾಗಿ ತ್ವಚೆಯು ಒಣಗಿದ್ದಲ್ಲಿ, ದಾಲ್ಚಿನ್ನಿಯ ಉಪಯೋಗವು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಮತ್ತು ಮುಖದ ತ್ವಚೆಯು ಮೃದುವಾಗಿರಲು ಸಹಾಯಮಾಡುತ್ತದೆ. ಮೃತ ಜೀವಕೋಶಗಳನ್ನು ತೆಗೆಯುವುದರ ಮೂಲಕ ಕಪ್ಪು ಕಲೆಯನ್ನು ನಿವಾರಣೆ ಮಾಡಿ ಹೊಳೆಯುವ ಮುಖದ ಬಣ್ಣವನ್ನು ಹಿಂದಿರುಗಿಸುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
ಮುಖದ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್ ಹಚ್ಚುವುದರ ಬದಲಾಗಿ ಮನೆಯಲ್ಲೇ ಸಿಗುವಂತಹ ದಾಲ್ಚಿನ್ನಿ ಪುಡಿಯನ್ನು ಉಪಯೋಗಿಸಿ ನಾವೇ ಒಂದು ಕ್ರೀಮ್ ಅನ್ನು ತಯಾರಿಸಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ಭರಿತವಾದ ಕ್ರೀಮ್ ನಿಂದ ಆಗುವ ಅಡ್ಡ ಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಮೊಡವೆಯನ್ನು ಹೋಗಲಾಡಿಸುವ ಒಂದು ತತ್ವವಾಗಿದೆ. ಒಂದು ಟೀ ಚಮಚ ದಾಲ್ಚಿನ್ನಿಯ ಪುಡಿಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ, ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖ ತೊಳೆಯುವುದರಿಂದ ಮೊಡವೆಯು ಕಡಿಮೆಯಾಗುತ್ತದೆ.
ಹೀಗೆ ದಾಲ್ಚಿನ್ನಿಯಿಂದ ಹಲವಾರು ಪ್ರಯೋಜನಗಳನ್ನು ನಾವು ಪಡೆಯಬಹುದು. ಚಿಕ್ಕ ಚಿಕ್ಕ ಸೋಂಕುಗಳಿಂದ ಹಿಡಿದು ಹೃದಯ ರೋಗ, ಕ್ಯಾನ್ಸರ್ ಮುಂತಾದ ಗಂಭೀರ ಕಾಯಿಲೆಗಳಿಗೂ ಸಹ ಮದ್ದಾಗಿ ಪರಿಣಮಿಸುವಂತಹ ದಾಲ್ಚಿನ್ನಿಯ ಉಪಯೋಗವು ಅಗತ್ಯವಾದದ್ದಾಗಿದೆ. ಅಡುಗೆ ಮನೆಯಲ್ಲಂತೂ ದಾಲ್ಚಿನ್ನಿಯ ಮಹತ್ವವು ಹೇಳಲಾಗದು. ಆದರೆ ನಮ್ಮ ದಿನನಿತ್ಯದ ಜೀವನದಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳಿಗೆ ಕೂಡ ದಾಲ್ಚಿನ್ನಿ ಮದ್ದಾಗಬಲ್ಲದು ಎಂದರೆ ತಪ್ಪಾಗಲಾರದು. ಆಧುನಿಕ ಯುಗದಲ್ಲಿ ಎಲ್ಲವೂ ರಾಸಾಯನಿಕಮಯ. ಹಾನಿಕಾರಕ ರಾಸಾಯನಿಕಗಳಿಲ್ಲದೆ ಮಾರುಕಟ್ಟೆಯಲ್ಲಿ ಯಾವ ವಸ್ತು ಗಳಿಗೂ ಬೆಲೆ ಇಲ್ಲ. ಇಂತಹ ಹಾನಿಕಾರಕಗಳಿರುವ ವಸ್ತುಗಳನ್ನು ಬಳಸುವುದಕ್ಕಿಂತ ಮನೆ ಮದ್ದನ್ನು ನಂಬುವುದೇ ವಾಸಿ.
ಪಾಶ್ಚಿಮಾತ್ಯ ಅಥವಾ ಆಂಗ್ಲ ಔಷಧಿಗಳು ಒಂದು ಸಮಸ್ಯೆಗೆ ಪರಿಹಾರವನ್ನು ಒದಗಿಸಿದರೆ, ಇನ್ನೊಂದು ಸಮಸ್ಯೆಗೆ ಎಡೆಮಾಡಿ ಕೊಡುತ್ತವೆ. ಹೀಗಿರುವಾಗ ನಮಗೆ ಪುರಾತನ ತತ್ವಗಳಿರುವ, ನಮ್ಮ ಹಿರಿಯರು ಹೇಳಿರುವ ಮನೆಮದ್ದುಗಳೇ ಅಮೃತವಾಗುತ್ತವೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ನಮ್ಮ ಅಡುಗೆಯ ಮನೆಯಲ್ಲೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಔಷಧವನ್ನು ತಯಾರಿಸಿ ಅದನ್ನು ಬಳಸುವುದು ಮತ್ತು ದಿನನಿತ್ಯ ಇಂತಹ ಔಷಧೀಯ ಗುಣಗಳನ್ನು ಹೊಂದಿರುವಂತಹ ದಾಲ್ಚಿನ್ನಿ ಹಾಗೆಯೇ ಇತರ ವಸ್ತುಗಳನ್ನು ಬಳಸಿಕೊಳ್ಳುವುದು ಒಳ್ಳೆಯದು. ದಾಲ್ಚಿನ್ನಿ ಅಂತ ಇನ್ನೂ ಹಲವಾರು ವಸ್ತುಗಳನ್ನು, ಪದಾರ್ಥಗಳನ್ನು ನಮ್ಮ ಹಿರಿಯರು ಅನಾದಿಕಾಲದಿಂದ ಬಳಸುತ್ತಾ ಬಂದಿದ್ದಾರೆ ಮತ್ತು ಅದರ ಲಾಭವನ್ನು ಸ್ವತಹ ಉಪಯೋಗಿಸಿ ಪಡೆದುಕೊಂಡಿದ್ದಾರೆ. ನಾವು ಸಹಿತ ಅವರು ಹಾಕಿಕೊಟ್ಟ ದಾರಿಯಲ್ಲೇ ಮುಂದುವರೆಯುವುದು ಉತ್ತಮವಾಗಿದೆ. ಯಾವುದೇ ಅಡ್ಡ ಪರಿಣಾಮಗಳಲ್ಲದೆ, ದೇಹದ ಸ್ವಾಸ್ಥ್ಯವನ್ನು ಕಾಪಾಡುವ ಮನೆಮದ್ದುಗಳನ್ನು ಬಳಸಿಕೊಂಡು ಜೀವನವನ್ನು ಸಾಗಿಸುವುದು ಒಳ್ಳೆಯ ಉಪಾಯ. ಇತರ ಔಷಧಿಗಳನ್ನು ಬಳಸಿ ಒಂದಕ್ಕೆ ಹನ್ನೊಂದಾಗುವ ಬದಲಿಗೆ ಮನೆಮದ್ದುಗಳನ್ನು ಬಳಸಿ ನೆಮ್ಮದಿಯಿಂದ ಇರುವುದು ಲೇಸು.
vurcazkircazpatliycaz.NXDJQ5nexEVE
creationism xyandanxvurulmus.qlf1ufLh35pY