ಔಷಧಿ-ಗುಣಗಳುಳ್ಳ-ತರಕಾರಿಗಳು

ಪಪ್ಪಾಯ ದ ಔಷಧಿ ಗುಣಗಳು

ಪಪ್ಪಾಯದ ಔಷಧಿ ಗುಣಗಳು ಪಪ್ಪಾಯವು ಕೇವಲ ಸಿಹಿಯಾದ ಹಣ್ಣಲ್ಲ. ಅದು ಔಷಧಿ ಗುಣವನ್ನು ಸಹ ಹೊಂದಿದೆ. ಮಾಗಿದ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಹಣ್ಣು ಮಾತ್ರವಲ್ಲದೆ, ಅದರ ಬೀಜದಿಂದಲೂ ಹಲವಾರು ಔಷಧಿಯನ್ನು ತಯಾರಿಸುತ್ತಾರೆ. ಆಗಸ್ಟ್ ಇಂದ ಸಪ್ಟೆಂಬರ್ ತಿಂಗಳ ವರೆಗೆ ಪಪ್ಪಾಯ ಹಣ್ಣು ಹೇರಳವಾಗಿ ದೊರಕುತ್ತದೆ. ಈ ಸಮಯದಲ್ಲಿ ಇದರ ಉಪಯೋಗವೂ ಹೆಚ್ಚು. ಪಪ್ಪಾಯ ಕಾಯಿ ಮತ್ತು ಹಣ್ಣು ಎರಡರಿಂದಲೂ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇದರಿಂದ ಆಗುವ ಲಾಭ ಹೆಚ್ಚು. …

ಪಪ್ಪಾಯ ದ ಔಷಧಿ ಗುಣಗಳು Read More »

tomato

ಟೊಮೇಟೊ ದ ಔಷಧಿ ಗುಣಗಳು

ನಮ್ಮ ದಿನನಿತ್ಯ ಜೀವನದಲ್ಲಿ ಅತಿಹೆಚ್ಚು ಅಗತ್ಯ ಮತ್ತು ಅನಿವಾರ್ಯವಾಗಿ ಉಪಯೋಗಿಸುವ ತರಕಾರಿ ಅಂದರೆ ನಮಗೆಲ್ಲ ಚಿರಪರಿಚಿತ ಟೊಮ್ಯಾಟೋ. ಇದು ಸೋಲನೇಸಿ (ಸೊಲ್ಯಾನಮ್  ಲೈಕೋಪಾರ್ಸಿಕಂ) ಕುಟುಂಬಕ್ಕೆ ಸೇರಿರುವ ಸಸ್ಯವಾಗಿರುತ್ತದೆ. ಇದು ಅಲ್ಪಾಯುಶಿ ಸಸ್ಯವಾದರೂ, ಇದರ ಬಳಕೆ ನಿತ್ಯ ಜೀವನದಲ್ಲಿ ಅಗತ್ಯವಾಗಿದೆ. ಇದು ತೆಳುವಾದ ಕಾಂಡ ಹೊಂದಿದ್ದು ಸುಮಾರು ಒಂದೆರಡು ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಟೋಮ್ಯಾಟೋ  ನಮ್ಮ ದಿನನಿತ್ಯ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ, ಮಾಡುವ ಪ್ರತಿ ಅಡುಗೆಗೂ ಇದರ ಅಗತ್ಯವಿದೆ ಕಾರಣ ಇದು ರುಚಿಗೆ ಮಾತ್ರವಲ್ಲದೆ …

ಟೊಮೇಟೊ ದ ಔಷಧಿ ಗುಣಗಳು Read More »

ಲವಂಗದ ಔಷಧಿ ಗುಣಗಳು

ಲವಂಗವು ಭಾರತದ ಪ್ರತಿಯೊಂದು ಅಡಿಗೆಯ ಮನೆಯಲ್ಲಿಯೂ ಸಿಗುವ ಒಂದು ಮಸಾಲಾ ಪದಾರ್ಥವಾಗಿದೆ. ಲವಂಗಗಳು ಇಂಡೋನೇಷಿಯ ದ್ವೀಪದಲ್ಲಿ ಮೂಲತಃ ಕಂಡುಬಂದಿದ್ದಾಗಿವೆ. ಇವುಗಳು ಮರದಲ್ಲಿ ಬಿಡುವ ಹೂವಿನ ಮೊಗ್ಗುಗಳಾಗಿವೆ ಮತ್ತು ಇದರ ವೈಜ್ಞಾನಿಕ ಹೆಸರು ಸಿಜಿಜಿಎಂ ಅರುಮ್ಯಾಟಿಕಮ್. ವಿಜ್ಞಾನದಲ್ಲಿ ಅರೋಮಾ ಎಂದರೆ ವಾಸನೆ ಎಂದರ್ಥ. ಇದರ ಹೆಸರೇ ಸೂಚಿಸುವಂತೆ ಸುವಾಸನಾಭರಿತವಾಗಿರುವ ಮಸಾಲ ಪದಾರ್ಥವೇ ಲವಂಗ. ಇದರ ಸುಗಂಧ ಮತ್ತು ರುಚಿಯಿಂದ ಯಾವ ಅಡುಗೆಯನ್ನಾದರೂ ರುಚಿಕರವನ್ನಾಗಿಸುವ ಸಾಮರ್ಥ್ಯ ಲವಂಗಕ್ಕಿದೆ. ಭಾರತದಲ್ಲಿ ತಯಾರಿಸಲ್ಪಡುವ ಅತಿ ಹೆಚ್ಚು ಆಹಾರ ಪದಾರ್ಥಗಳ ಮುಖ್ಯ ಭಾಗಗಳಲ್ಲೊಂದು ಈ …

ಲವಂಗದ ಔಷಧಿ ಗುಣಗಳು Read More »

ಮೆಂತ್ಯ ಸೊಪ್ಪಿನ ಔಷಧಿ ಗುಣಗಳು

ಮೆಂತ್ಯ ಸೊಪ್ಪಿನ ಔಷಧಿ ಗುಣಗಳು ಮೆಂತ್ಯ ಸೊಪ್ಪು ಮತ್ತು ಮೆಂತ್ಯೆ ಕಾಳುಗಳನ್ನು ನಾವು ದಿನನಿತ್ಯ ಅಡುಗೆಯಲ್ಲಿ ಬಳಸಿ ಬಳಸುತ್ತೇವೆ. ಎರಡರಿಂದ ಮೂರು ಫೀಟ್ನಷ್ಟು ಬೆಳೆಯುವ ಮೆಂತೆ ಗಿಡ, ಹಚ್ಚ ಹಸಿರು ಎಲೆಗಳು ಮತ್ತು ಹೂವುಗಳಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೆ ನಾವು ದಿನನಿತ್ಯ ಬಳಸುವಂತಹ ಕಂದು ಬಣ್ಣದ ಮೆಂತೆ ಕಾಳುಗಳು ಅದರದ್ದೇ ಗಿಡದಲ್ಲಿ ಬೆಳೆಯುವ ಬೀಜಗಳಾಗಿವೆ. ಅನಾದಿಕಾಲದಿಂದಲೂ ಮೆಂತ್ಯೆ ಕಾಳುಗಳನ್ನು ಮತ್ತು ಸೊಪ್ಪುಗಳನ್ನು ಕೇವಲ ಆಹಾರ ಪದಾರ್ಥವಾಗಿ ಬಳಸದೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಲ್ಲಿ ಬಳಸುತ್ತಿದ್ದೇವೆ. ಕೂದಲುದುರುವಿಕೆ ಮುಂತಾದ ಸಮಸ್ಯೆಗಳಿಗೆ …

ಮೆಂತ್ಯ ಸೊಪ್ಪಿನ ಔಷಧಿ ಗುಣಗಳು Read More »

ಹಾಲಿನ ಔಷಧಿ ಗುಣಗಳು

“ಭೋಜನಾಂತೆ ಪಿಭೋತ್ತಕ್ರಮ್ ವಾಸರಾಂತೆ ಪಿಬೆತ್ಪಯಃ | ನಿಶಾಂತೇ ಚ ಪಿಬೆದ್ವಾರಿ ತ್ರಿಭಿರ್ರೋಗೋ ನ ಜಾಯತೆ || ” ಎಂದರೆ ಊಟದ ನಂತರ ಮಜ್ಜಿಗೆಯನ್ನು, ರಾತ್ರಿಯಲ್ಲಿ ಹಾಲನ್ನು ಮತ್ತು ಹಗಲಲ್ಲಿ ನೀರನ್ನು ಕುಡಿಯುವುದರಿಂದ ಮನುಷ್ಯನಿಗೆ ಯಾವ ಕಾಯಿಲೆಯೂ ಬರುವುದಿಲ್ಲ. ಇಂಥ ಮಹತ್ವವನ್ನು ಹೊಂದಿರುವ ಹಾಲನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. “ಗೋಮಾತೆ “ಎಂದು ಪೂಜಿಸುವ ಹಸುವಿನ ಕ್ಷೀರ ಶ್ರೇಷ್ಠವಾದದ್ದು. ಹಸುಳೆಯಾಗಿದ್ದಾಗ ತಾಯಿಯ ಎದೆಯ ಹಾಲನ್ನು ಕುಡಿದ ಮನುಷ್ಯ ದೊಡ್ಡವನಾದ ಮೇಲೆ ಕುಡಿಯುವುದು ಗೋಮಾತೆಯ ಹಾಲು. ಇಂತಹ ಹಾಲಿನಲ್ಲಿ ಬಹಳಷ್ಟು …

ಹಾಲಿನ ಔಷಧಿ ಗುಣಗಳು Read More »

ದಾಲ್ಚಿನ್ನಿಯ ಔಷಧಿ ಗುಣಗಳು

ದಾಲ್ಚಿನ್ನಿ ಎಂಬುದು ವಿಶ್ವದ ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುವಾಗಿದೆ. ಭಾರತೀಯ ಮಸಾಲಾ ಪದಾರ್ಥಗಳಲ್ಲಿ ಇದು ಪ್ರಮುಖವಾದದ್ದಾಗಿದೆ. ಕೇವಲ ಭಾರತವಲ್ಲದೆ ಇಡೀ ವಿಶ್ವದವರೆ ಇದನ್ನು ಅಡುಗೆ ಪದಾರ್ಥವಾಗಿ ಬಳಸುತ್ತಾರೆ. ಇದರಿಂದ ಸಾಕಷ್ಟು ಲಾಭಗಳಿವೆ. ದಾಲ್ಚಿನ್ನಿಯಲ್ಲಿರುವಂತಹ ಎಣ್ಣೆಯ ಅಂಶ ಮತ್ತು ಆಂಟಿ ಆಕ್ಸಿಡೆಂಟ್, ಆಂಟಿ ಇಂಪ್ಲಾಮೆಟರಿ ಹಾಗೂ ಆಂಟಿ ಮೈಕ್ರೋಬಿಯಲ್ ಗುಣಗಳು ದಾಲ್ಚಿನ್ನಿಯನ್ನು ಪ್ರಸಿದ್ಧವಾದ ಪದಾರ್ಥವನ್ನಾಗಿ ಮಾಡಿವೆ. ಅಷ್ಟೇ ಅಲ್ಲದೆ ದಾಲ್ಚಿನ್ನಿಯಲ್ಲಿ ಸಕ್ಕರೆ ಕಾಯಿಲೆಯನ್ನು ತಗ್ಗಿಸುವ, ಲಿಪಿಡ್ನ ಅಂಶವನ್ನು ತಗ್ಗಿಸುವ ಮತ್ತು ಹೃದಯ ಸಂಬಂಧಿ ರೋಗಗಳ …

ದಾಲ್ಚಿನ್ನಿಯ ಔಷಧಿ ಗುಣಗಳು Read More »

Coconut

ತೆಂಗಿನಕಾಯಿಯ ಔಷಧಿ ಗುಣಗಳು

ಎಲ್ಲರ ಮನೆಯಲ್ಲೂ ದಿನನಿತ್ಯ ಬಳಸುವ ಅಡುಗೆಯ ಪದಾರ್ಥಗಳಲ್ಲಿ ಒಂದು “ತೆಂಗು”. ಸಾಂಬಾರ್ ಇಂದ ಹಿಡಿದು ಪಾಯಸ, ಕಜ್ಜಾಯಗಳ ತಯಾರಿಕೆಗೂ ಇದು ಅತ್ಯಗತ್ಯ. “ ಇಂಗು ತೆಂಗು ಕೊಟ್ಟರೆ ಮಂಗನೂ ಅಡುಗೆ ಮಾಡುತ್ತದೆ “ ಎಂಬ ಗಾದೆ ಮಾತಿನಂತೆ ತೆಂಗು ಇಲ್ಲದೆ ಅಡುಗೆಯಿಲ್ಲ.ತೆಂಗಿನಕಾಯಿಯಿಂದ ಬಹಳಷ್ಟು ಉಪಯೋಗವಿದೆ. ತೆಂಗಿನ ತಿರುಳು ತಿನ್ನಲು ಬಲು ಸೊಗಸು. ತೆಂಗಿನ ಹಾಲು (ಎಳನೀರು) ಕುಡಿದರೆ ಬೇಸಿಗೆಯಲ್ಲಿ ತಂಪು ಅನುಭವ ನೀಡುತ್ತದೆ. ತೆಂಗಿನ ಕಾಯಿಯನ್ನು ತುರಿದು ಬಹಳಷ್ಟು ಅಡುಗೆಗೆ ಬಳಸುವುದುಂಟು. ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ದೇಹದ …

ತೆಂಗಿನಕಾಯಿಯ ಔಷಧಿ ಗುಣಗಳು Read More »

Lemon

ನಿಂಬೆ ಹಣ್ಣಿನ ಔಷಧಿ ಗುಣಗಳು ಮತ್ತು ಉಪಯೋಗಿಸುವ ವಿಧಾನ

ನಿಂಬೆ ಹಣ್ಣಿನಲ್ಲಿ ಔಷಧಿ ಗುಣವಿರುವುದು ಎಲ್ಲರಿಗೂ ಗೊತ್ತಿರುತ್ತದೆ, ಆದರೆ ಅದನ್ನು ಮನೆಯಲ್ಲೇ ಹೇಗೆ ಔಷಧವಾಗಿ ಬಳಸಬಹುದು ಎಂದು ಗೊತ್ತಿರುವುದಿಲ್ಲ. ಇಲ್ಲಿ ನಾವು ನಿಮಗೆ ನಿಂಬೆ ಹಣ್ಣನ್ನು ಯಾವ ಯಾವ ರೋಗಗಳಿಗೆ ಹೇಗೆ ಔಷಧವಾಗಿ ಬಳಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

harive soppu

ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus)

ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು  ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ …

ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus) Read More »

chaligala example 3

ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು?

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಚರ್ಮವು ತುಂಬಾ ಬದಲಾವಣೆಯಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಚಳಿಗಾಲದಲ್ಲಿ ಚರ್ಮವು ಒಣಗಿ ತೇವಾಂಶವನ್ನು ಕಳೆದುಕೊಂಡಿರುತ್ತದೆ. ಇದರಿಂದ ಚರ್ಮವು ಒರಟಾಗುತ್ತದೆ. ಅದರಲ್ಲೂ ಮುಖದ ಚರ್ಮವು ಒಣಗಿದಂತಾಗುತ್ತದೆ. ಇದರಿಂದ ಮಹಿಳೆಯರಿಗೆ ಸೌಂದರ್ಯವು ಕೂಡ ಹಾಳಾಗುತ್ತದೆ. ಮತ್ತು  ತುಟಿಯ ವಿಷಯಕ್ಕೆ ಬಂದ್ರೆ ತುಟಿಯು ಕೂಡ ಒಣಗಿ, ಕೆಲವೊಮ್ಮೆ ರಕ್ತ ಬರುವ ಸಂಭವವೂ ಇರುತ್ತದೆ. ಇದನ್ನು ಹೋಗಲಾಡಿಸಲು ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಟೊಮೆಟೊ ಕೂಡ ಒಂದು …

ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು? Read More »