October 2019

basale soppu

ಬಸಳೆ ಸೊಪ್ಪಿನ ಔಷಧಿ ಗುಣಗಳು (Basella Alba)

ಬಸಳೆಯ ಸೊಪ್ಪು ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಹಸಿರು ತರಕಾರಿಯಾಗಿದೆ. ಇದರಲ್ಲಿ ಹಲವು ಬಗೆಯ ಬಸಳೆ ಸೊಪ್ಪಿನ ವಿಧಗಳಿವೆ, ಅವುಗಳೆಂದರೆ ಹಸಿರು ಬಸಳೆ, ಕೆಂಪು ಬಸಳೆ, ನೆಲಬಸಳೆ ಇತ್ಯಾದಿ. ಬಸಳೆಯು ಒಂದು ಬಳ್ಳಿ ಜಾತಿಯ ಸಸ್ಯವಾಗಿದೆ. ಇದನ್ನು ಹಳ್ಳಿಗಳಲ್ಲಿ ಚಪ್ಪರಗಳನ್ನು ಮಾಡಿ ಬೆಳೆಸುತ್ತಾರೆ. ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತವೆ. ಹೂವುಗಳು ಬಿಳಿಯ ಬಣ್ಣದಾಗಿದ್ದು, ಚಿಕ್ಕದಾಗಿರುತ್ತವೆ. ಇದರ ಬೀಜಗಳಿಂದ ಹಾಗು ಕಾಂಡಗಳಿಂದಲೂ ಬಸಳೆ ಗಿಡವನ್ನು ಬೆಳೆಸಬಹುದು. ಅಡುಗೆಯಲ್ಲಿ ಬಸಳೆಯನ್ನು ಉಪಯೋಗಿಸಿ ಸಾಂಬಾರ್, ಪಲ್ಯ, …

ಬಸಳೆ ಸೊಪ್ಪಿನ ಔಷಧಿ ಗುಣಗಳು (Basella Alba) Read More »

nugge soppu

ನುಗ್ಗೆ ಸೊಪ್ಪಿನ ಔಷಧಿ ಗುಣಗಳು (Drumstick Leaves)

ನುಗ್ಗೆ ಸೊಪ್ಪಿನ ವೈಜ್ಞಾನಿಕ ಹೆಸರು ಮೋರಿಂಗ್ ಒಲಿಫೆರ್. ಸಾಮಾನ್ಯವಗಿ ನುಗ್ಗೆ ಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ನುಗ್ಗೆ ಕಾಯಿಯನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ನಾವು ಬಳಸುವುದು ಕಡಿಮೆ. ಕೆಲವರಂತೂ ನುಗ್ಗೆ ಮರವನ್ನೇ ನೋಡಿರುವುದಿಲ್ಲ. ಆದ್ದರಿಂದ ಅದರ ಸೊಪ್ಪಿನ ಬಳಕೆಯನ್ನೂ ಮಾಡಿರುವುದಿಲ್ಲ. ನಿಮಗೆ ನುಗ್ಗೆ ಸೊಪ್ಪಿನ ಔಷಧೀಯ ಗುಣಗಳು ತಿಳಿದರೆ, ಇದರಿಂದ ಇಷ್ಟೆಲ್ಲಾ ಲಾಭವಿದೆಯೇ ಎಂದು ಆಶ್ಚರ್ಯವಾಗುತ್ತದೆ. ನುಗ್ಗೆ ಮರವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ ಕಾಣಬಹುದು. ಆದರೆ ಈಗಿನ ದಿನಗಳಲ್ಲಿ …

ನುಗ್ಗೆ ಸೊಪ್ಪಿನ ಔಷಧಿ ಗುಣಗಳು (Drumstick Leaves) Read More »

bale gida

ಬಾಳೆ ಎಲೆಯ ಔಷಧಿ ಗುಣಗಳು (Banana Leaf)

ಭಾರತೀಯ ಹಿಂದೂ ಸಂಪ್ರದಾಯಗಳಲ್ಲಿ ಧಾರ್ಮಿಕವಾಗಿ ಬಾಳೆ ಎಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಮ್ಮಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಮತ್ತು ಇನ್ನೂ ಕೆಲವು ಕಡೆಗಳಲ್ಲಿ ಆ ಸಂಪ್ರದಾಯ ಇನ್ನೂ ಇದೆ. ಆದರೆ ಈಗಿನ ದಿನಗಳಲ್ಲಿ ಬಾಳೆಯಲ್ಲಿ ಊಟ ಮಾಡುವ ಪದ್ಧತಿ ತುಂಬಾ ಕಡಿಮೆಯಾಗಿದೆ. ಶುಭ ಸಮಾರಂಭಗಳಲ್ಲಿ ಬಾಳೆ ಎಲೆಯ ಊಟಕ್ಕೆ ತುಂಬಾ ಮಹತ್ವವಿದೆ. ಕೆಲವು ಕಡೆ ಪ್ರತಿ ದಿನವೂ ಬಾಳೆ ಸಿಗದೇ ಇರುವಂತಹ ಸ್ಥಳಗಳಲ್ಲಿ ಹಬ್ಬದ ದಿನದಲ್ಲಂತೂ ಎಲ್ಲಿಂದಾದರೂ ಬಾಳೆಯನ್ನು …

ಬಾಳೆ ಎಲೆಯ ಔಷಧಿ ಗುಣಗಳು (Banana Leaf) Read More »

kamakastoori

ಕಾಮಕಸ್ತೂರಿಯ ಔಷಧಿ ಗುಣಗಳು (Basil)

ಕಾಮಕಸ್ತೂರಿ ಗಿಡವು ತುಳಸಿಯನ್ನು ಹೋಲುತ್ತದೆ. ಇದನ್ನು ಮನೆಯಂಗಳದಲ್ಲಿ ಮತ್ತು ತೋಟಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಕಾಮಕಸ್ತೂರಿ ತುಂಬಾ ಸುವಾಸನೆಯನ್ನು ಹೊಂದಿರುತ್ತದೆ. ಇದರ ಬೀಜಗಳನ್ನು ಹೆಚ್ಚಾಗಿ ಬಳಸುತ್ತಾರೆ… ಕಾಮಕಸ್ತೂರಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದರು. ಇದು ಕೂಡ ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತದೆ. ಕಾಮಕಸ್ತೂರಿಯು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಮಕಸ್ತೂರಿಯು ಅನೇಕ ರೋಗಗಳಿಗೆ ಮನೆಮದ್ದಾಗಿದೆ. ಇದರ ಬೀಜಗಳು ಮಾರ್ಕೆಟ್ ನಲ್ಲೂ ಲಭ್ಯವಿರುತ್ತದೆ. ಕಾಮಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನಂಶವನ್ನು ಹೊಂದಿದೆ. ಕಾಮಕಸ್ತೂರಿಯ …

ಕಾಮಕಸ್ತೂರಿಯ ಔಷಧಿ ಗುಣಗಳು (Basil) Read More »

nelabevu

ನೆಲಬೇವಿನ ಔಷಧಿ ಗುಣಗಳು (Green Chiretta)

ನೆಲಬೇವು ಎಂಬುದು ಒಂದು ಸಣ್ಣ ಸಸ್ಯವಾಗಿದೆ. ಇದು ಕಹಿಬೇವಿನ ತರಹ ಕಹಿ ರುಚಿಯನ್ನು ಹೊಂದಿರುತ್ತದೆ. ತಮಿಳುನಾಡಿನಲ್ಲಿ ನೆಲಬೇವಿನ ಕಷಾಯವನ್ನು ನಿಲವೆಂಬ ಕಷಾಯ ಎಂದು ಕರೆಯುತ್ತಾರೆ. ನೆಲಬೇವು ಜಗತ್ತಿನಾದ್ಯಂತ “ಕಹಿಯ ರಾಜ” ಎಂದೇ ಪ್ರಸಿದ್ಧವಾಗಿದೆ. ಇದನ್ನು ಮನೆಯ ಸುತ್ತ- ಮುತ್ತ ಬೆಳೆಸಬಹುದಾಗಿದೆ. ನೆಲಬೇವು ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವಿನ ವೈಜ್ಞಾನಿಕ ಹೆಸರು “ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್ “(Andrographic Paniculata) ನೆಲಬೇವು ಸಣ್ಣ ಸಣ್ಣ ಹೂಗಳನ್ನು ಹೊಂದಿದ್ದು, ಹೂಗಳ ಮಧ್ಯ ಭಾಗದಲ್ಲಿ ನೇರಳೆ ಬಣ್ಣವಿರುತ್ತದೆ. ನೆಲಬೇವಿನ ಗಿಡವನ್ನು, ಬೀಜದ ಅಥವಾ …

ನೆಲಬೇವಿನ ಔಷಧಿ ಗುಣಗಳು (Green Chiretta) Read More »

nimbe hullu

ನಿಂಬೆಹುಲ್ಲಿನ ಔಷಧಿ ಗುಣಗಳು (Lemon grass)

ನಾನು ನಿಂಬೆ ಹಣ್ಣನ್ನು ನೋಡಿದೀನಿ, ಅದರ ಗಿಡನೂ ನೋಡಿದೀನಿ, ಆದರೆ ಇದೇನಿದು ಲಿಂಬೆ ಹುಲ್ಲು ಅಂತ ಯೋಚನೆ ಮಾಡ್ತಾ ಇದ್ದೀರಾ? ಅದೇ ನಾವು ಹೇಳ್ತೀವಲ್ವಾ ಮಜ್ಜಿಗೆಹುಲ್ಲ ಅಂತಾ ಅದೇ ನಿಂಬೆಹುಲ್ಲು. ಇದು ಥೇಟ್ ನಿಂಬೆ ಹಣ್ಣಿನ ಪರಿಮಳ ಬರುವ ಕಾರಣದಿಂದ ಇದನ್ನು ನಿಂಬೆಹುಲ್ಲು ಎಂದು ಕರೆಯುತ್ತಾರೆ. ಇದು ನೋಡಲು ಸಾಮಾನ್ಯ ಹುಲ್ಲಿನಂತೆ ಕಾಣುತ್ತದೆ. ಇದರ ವೈಜ್ಞಾನಿಕ ಹೆಸರು ಸೈಮ್ಬೊಫೊಗನ್ ಸಿಟ್ರಾಟಸ್ (Cymbopogan Citratus). ನಿಂಬೆಹುಲ್ಲು ಹೆಚ್ಚಾಗಿ ತೋಟಗಳಲ್ಲಿ, ಗದ್ದೆಗಳಲ್ಲಿ ಮತ್ತು ಮನೆಯಂಗಳದಲ್ಲಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗಿ ಮನೆಯೆದುರುಗಡೆ …

ನಿಂಬೆಹುಲ್ಲಿನ ಔಷಧಿ ಗುಣಗಳು (Lemon grass) Read More »

Shame Plant Flower

ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಔಷಧಿ ಗುಣಗಳು

ಮನೆಯಂಗಳದಲ್ಲಿ ಮುಳ್ಳುಗಳನ್ನೊಳಗೊಂಡು, ಕಳೆಯಂತೆ ಬೆಳೆಯುವ ಸಸ್ಯವೇ “ಮುಟ್ಟಿದರೆ ಮುನಿ” ಅಥವಾ “ನಾಚಿಕೆ ಮುಳ್ಳು”. ಇದರ ವಿಶೇಷ ಏನೆಂದರೆ ಈ ಸಸ್ಯವು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತದೆ. ಇದು ಪ್ರಕೃತಿಯ ಜಾದು ಅಷ್ಟೆ. ಮುಟ್ಟಿದರೆ ಮುನಿ ಗಿಡದ  ಎಲೆಗಳ ಜೀವಕೋಶಗಳು ಸೂಕ್ಷ್ಮ ಆದ್ದರಿಂದ ಹುಳು ಹಪ್ಪಟೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಎಲೆಗಳು ಸ್ಪರ್ಶ ಆದ ಕೂಡಲೇ ಮಡಿಚಿಕೊಳ್ಳುತ್ತವೆ. ನಾಚಿಕೆ ಮುಳ್ಳು ಎಂದರೆ ಎಲ್ಲರಿಗೂ ಅಲಕ್ಷ್ಯ. ಅದನ್ನು ಕಳೆ ಎಂದು ಎಲ್ಲರೂ ಕಿತ್ತು ಹಾಕುತ್ತಾರೆ. ಏಕೆಂದರೆ ಈ ಸಸ್ಯ ಎಲ್ಲಡೆ ಬೆಳೆಯುತ್ತದೆ. ಕಾರಣ …

ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಔಷಧಿ ಗುಣಗಳು Read More »

ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree)

            ಕಹಿಬೇವಿನ ಔಷಧಿ ಗುಣಗಳು : ಕಹಿ ಬೇವಿನ ಮರ ಎಂದಾಕ್ಷಣ ನಮಗೆ ಮೊದಲು ಅದರ ಕಹಿ ನೆನಪಾಗುತ್ತವೆ. ಜೀವನದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸವ ಸಂಕೇತವಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು- ಬೆಲ್ಲನ್ನು ಎಲ್ಲರಿಗೂ ಹಂಚುತ್ತಾರೆ. ಕೆಲವರು ಕಹಿ ಎಂದರೆ ಮೂಗು ಮುರಿಯುತ್ತಾರೆ. ಬೇವಿನ ರುಚಿ ಕಹಿಯಾದರೂ ಅದರಲ್ಲಿರುವ ಔಷಧ ಗುಣಗಳು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.   ಹಳೆಯ ಕಾಲದಲ್ಲಿ ಹಲ್ಲು ಉಜ್ಜಲು ಕಹಿ ಬೇವಿನ …

ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree) Read More »

ಕರಿಬೇವಿನ ಔಷಧಿ ಗುಣಗಳು (Curry leaves)

ಕರಿಬೇವಿನ ಔಷಧಿ ಗುಣಗಳು : ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು  ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸೌಂಧರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕರಿಬೇವಿನ ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು,ತುಂಬಾ ಸುವಾಸನೆ ಭರಿತವಾಗಿರುತ್ತವೆ. …

ಕರಿಬೇವಿನ ಔಷಧಿ ಗುಣಗಳು (Curry leaves) Read More »